By Village Missionary Movement
Tuesday, 25-May-2021ಧೈನಂದಿನ ಧ್ಯಾನ(Kannada) – 25.05.2021
ಅಲ್ಲಿ ನೋಡು ವಿಮಾನ!
"ಜೀವವನ್ನುಂಟುಮಾಡುವ ಪವಿತ್ರಾತ್ಮನಿಂದಾದ ನಿಯಮವು ನಿನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ಕ್ರಿಸ್ತ ಯೇಸುವಿನ ಮೂಲಕ ಬಿಡಿಸಿತು" - ರೋಮಾ 8:2
ಸರ್.ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡುಹಿಡಿದವರು ಎಂಬುದು ತಿಳಿದಿದ್ದೇವೆ. ಒಂದು ಬಾರಿ ಅವರು ಒಂದು ಆಪಲ್ ಮರದ ಕೆಳಗೆ ಕುಳಿತಿದ್ದಾಗ, ಆಪಲ್ ಕೆಳಗೆ ಬಿದ್ದಿತು, ಕೂಡಲೇ ಅವರು ಆಪಲ್ ಕೆಳಗೆ ಬೀಳಲು ಕಾರಣವೇನು ಎಂದು ಯೋಚಿಸಿದ್ದರಿಂದಲೇ, ಭೂಮಿಯಲ್ಲಿ ಒಂದು ಗುರುತ್ವಾಕರ್ಷಣೆಯ ಶಕ್ತಿ ಇರುವುದನ್ನು ಕಂಡು ಹಿಡಿದರು ಎಂದು ಹೇಳಲ್ಪಡುತ್ತಿದೆ. ಈ ವಿಧಾನದಂತೆ ಒಂದು ವಸ್ತುವನ್ನು ಆಕಾಶಕ್ಕೆ ಎತ್ತಿ ಬೀಸಾಡಿದರೆ ಅದು ಗುರುತ್ವಾಕರ್ಷಣೆಯಿಂದ ಭೂಮಿಗೆ ಬೀಳುತ್ತದೆ. ಅನೇಕರನ್ನು ಹೊತ್ತುಕೊಂಡು ಅವರ ಪೆಟ್ಟಿಗೆಗಳನ್ನು ಹೊತ್ತುಕೊಂಡು ಆಕಾಶದಲ್ಲಿ ಹಾರುವ ವಿಮಾನವು, ಭೂಮಿಯ ಆಕರ್ಷಣೆಯ ಶಕ್ತಿಯಿಂದ ಆಕರ್ಷಿಸಲ್ಪಡದೆ ಹೇಗೆ ಹಾರಲು ಸಾಧ್ಯ? ವಿಮಾನದಲ್ಲಿರುವ ಜೆಟ್ ಯಂತ್ರವು, ವಿಮಾನವು ಮುಂದೆ ಹೋಗಲು, ಮೇಲೆ ಹಾರಲು, ಗುರುತ್ವಾಕರ್ಷಣೆಯ ಶಕ್ತಿಗೆ ವಿರುದ್ಧವಾಗಿ ಬಹುಬಲವನ್ನು ಹೊಂದಿದೆ ಆದ್ದರಿಂದ ಭೂಮಿಯ ಆಕರ್ಷಣೆಯ ಶಕ್ತಿಯಿಂದ ನಿಮ್ಮ ವಿಮಾನವನ್ನು ಕೆಳಕ್ಕೆ ಎಳೆಯಲಾಗದೇ ಇದೆ.
ಬೈಬಲ್ ನಲ್ಲಿಯು ಎರಡು ವಿಧವಾದ ನಿಯಮಗಳ ಬಗ್ಗೆ ಮಾತಾಡುತ್ತದೆ. ಒಂದು ಪಾಪ ಪ್ರಮಾಣ, ಮತ್ತೊಂದು ಆತ್ಮೀಯ ಪ್ರಮಾಣ. ಪಾಪ ಪ್ರಮಾಣವು ಒಂದು ಮನುಷ್ಯನನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಆದರೆ ಆತ್ಮೀಕ ಪ್ರಮಾಣವು, ಪಾಪದಿಂದ ಸೆಳೆಯಲ್ಪಟ್ಟಿರುವ ಮನುಷ್ಯನನ್ನು ಪಾಪದಿಂದ ಬಿಡುಗಡೆ ಮಾಡುತ್ತದೆ. ಪಾಪವು ನಾವು ಬಯಸದೇ ಇರುವುದನ್ನು ಮಾಡುವಂತೆ ನಮ್ಮನ್ನು ಸೆಳೆಯುವ ಗುಣವುಳ್ಳದ್ದು. ಹೇಗೆಂದರೆ ನಾನು ಮಾಡುವುದು ನನಗೆ ಸಮ್ಮತಿಯಿಲ್ಲ, ನಾನು ತಿರಸ್ಕರಿಸುವುದನ್ನೇ ಮಾಡುತ್ತಿದ್ದೇನೆ. ಹೀಗೆ ನಾನು ಬಯಸದೇ ಇರುವುದನ್ನು ಮಾಡುವವನಾಗಿರುವಾಗ ನ್ಯಾಯ ಪ್ರಮಾಣವು ಒಳ್ಳೆಯದೆಂದು ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ನಾನಲ್ಲ, ನನ್ನೊಳಗೆ ವಾಸಿಸುತ್ತಿರುವ ಪಾಪವೇ ಹಾಗೆ ಮಾಡುತ್ತಿದೆ ಎಂದು ಅಪೊಸ್ತಲನಾದ ಪೌಲನು ಅಂಗಲಾಚುತ್ತಿದ್ದಾರೆ.
ಕ್ರಿಸ್ತನಲ್ಲಿ ಪ್ರಿಯರೇ! ಪ್ರತಿದಿನವೂ ನೀವು ಪಾಪ ದೊಂದಿಗೆ ಹೋರಾಡುತ್ತಲೇ ಇದ್ದೀರ? ನೀವು ಮಾಡಬೇಕೆಂದು ನೆನೆಸುವ ಕಾರ್ಯಗಳನ್ನು ಮಾಡಲಾಗದಂತೆ ಪಾಪವು ನಿಮ್ಮನ್ನು ಜಯಿಸುತ್ತಿದೆಯಾ? ಚಿಂತಿಸಬೇಡಿರಿ, ಖಂಡಿತವಾಗಿ ಬಿಡುಗಡೆ ಉಂಟು. ಆತ್ಮದಿಂದ ಶರೀರದ ಕ್ರಿಯೆಗಳನ್ನು ನಾಶಮಾಡಿದರೆ ಬದುಕುವಿರಿ ಎಂದು ಬರೆಯಲ್ಪಟ್ಟ ವಾಕ್ಯದಂತೆ, ಪಾಪಕ್ಕಿಂತಲೂ, ಬಲವಾದ ಪರಿಶುದ್ಧಾತ್ಮನು, ನಮ್ಮ ಪಾಪ ಸ್ವಭಾವಗಳನ್ನು ನಾಶಮಾಡಿ, ಪರಿಶುದ್ಧವಾಗಿ ಜೀವಿಸುವುದಕ್ಕೆ ಸಹಾಯ ಮಾಡುತ್ತಾರೆ. ಹೇಗೆ ವಿಮಾನವು ಕೆಳಗೆ ಬೀಳದಂತೆ ಅದರೊಳಗೆ ಇರುವ ಬಹುದೊಡ್ಡ ಶಕ್ತಿ ಹೋರಾಡಿ ಅದನ್ನು ಆಕಾಶದಲ್ಲಿ ಹಾರುವಂತೆ ಮಾಡುತ್ತದೋ, ಅದರಂತೆಯೇ ನಮ್ಮೊಳಗಿರುವ ಪವಿತ್ರಾತ್ಮನ ಶಕ್ತಿಯು ನಮ್ಮನ್ನು ಪರಿಶುದ್ಧತೆಗೆ ನೇರವಾಗಿ ಪರಲೋಕಕ್ಕೆ ನೇರವಾಗಿ ಕರೆದುಕೊಂಡು ಹೋಗುತ್ತದೆ.ಹೇಗೆ ಚಿಕ್ಕಮಕ್ಕಳು ಆಕಾಶದಲ್ಲಿ ಹಾರಾಡುವ ವಿಮಾನವನ್ನು ಕಂಡು ಆಶ್ಚರ್ಯ ಪಡುತ್ತಾರೋ,ಹಾಗೆಯೇ ನಮ್ಮ ಪರಿಶುದ್ಧವಾದ ಜೀವನವನ್ನು ಕಂಡು ನಾವೇ ಆಶ್ಚರ್ಯ ಪಡುತ್ತೇವೆ.
ಹಲ್ಲೇಲೂಯಾ!
- P. ಶಿವ
ಪ್ರಾರ್ಥನಾ ಅಂಶ:-
ತಮಿಳ್, ಇಂಗ್ಲೀಷ್, ಹಿಂದಿ, ತೆಲುಗು, ಕನ್ನಡ, ಮಲಯಾಳಂ, ಒಡಿಯ, ಪಂಜಾಬಿ ಎಂಬ 8 ಭಾಷೆಗಳಲ್ಲಿ ಹೊರಬರುತ್ತಿರುವ ನಮ್ಮ ದೈನಂದಿನ ಧ್ಯಾನ ಸಂದೇಶದ ಮೂಲಕ ಅನೇಕರು ಬಲಗೊಳ್ಳುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482