Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.06.2025
Share:

By Village Missionary Movement

Saturday, 28-Jun-2025

ಧೈನಂದಿನ ಧ್ಯಾನ(Kannada) – 28.06.2025

 

ಕೆಟ್ಟದ್ದನ್ನು ಬಿಟ್ಟು ದೂರವಿರು

 

"...ಕೆಟ್ಟದ್ದನ್ನು ಎದುರಿಸಬೇಡಿರಿ;..." - ಮತ್ತಾಯ 5:39

 

ಒಂದು ಕುರಿಮರಿ ಹೊಳೆಯಲ್ಲಿ ನೀರು ಕುಡಿಯುತ್ತಿತ್ತು. ಅದನ್ನು ನೋಡಿದ ತೋಳವು ಕುರಿಮರಿಯೊಂದಿಗೆ ಜಗಳವಾಡಲು ನೆನೆಸಿ ಕುರಿಮರಿಯನ್ನು ನೋಡಿ, "ಇದು ನಾನು ನೀರು ಕುಡಿಯುವ ಸ್ಥಳ ಎಂದು ನಿನಗೆ ಗೊತ್ತಿಲ್ವಾ? ನೀರನ್ನು ಏಕೆ ಕಲಕುತ್ತಿದ್ದೀಯಾ?" ಎಂದು ಕೇಳಿತು. ಕುರಿಮರಿ ಸೌಮ್ಯವಾಗಿ, "ಅಯ್ಯಾ, ನೀವು ಮೇಲಿನ ಬದಿಯಲ್ಲಿರುವ ನೀರನ್ನು ಕುಡಿಯುತ್ತೀರಿ. ನನಗೆ ನಿಮ್ಮ ಬದಿಯಿಂದ ನೀರು ಬರುತ್ತದೆ. ನೀವು ಕುಡಿಯುವ ನೀರನ್ನು ನಾನು ಹೇಗೆ ಕಲಕಲಿ?" ಎಂದು ಕೇಳಿತು. ಅದಕ್ಕೆ ತೋಳವು ನಿನ್ನ ಬಾಯಿ ಮುಚ್ಚಿಕೋ ಎಂದು ಹೇಳುತ್ತಲೇ ಕುರಿಮರಿಯ ಮೇಲೆ ಬೀಳಲು ಸಿದ್ಧವಾಗಿರುವುದನ್ನು ಕಂಡ ಕೂಡಲೇ, ಅಯ್ಯೋ ನಾನು ಸುಮ್ಮನೆ ಹೋಗಿದ್ದರೆ ಆಗುತ್ತಿತ್ತು ಎಂದು ಯೋಚಿಸುತ್ತಿದ್ದ ಕ್ಷಣಮಾತ್ರದಲ್ಲಿ ತೋಳ ಅದರ ಮೇಲೆ ಹಾರಿ ಅದನ್ನು ಕೊಂದುಹಾಕಿತು. 

 

ಸತ್ಯವೇದದಲ್ಲಿ ಒಂದು ಘಟನೆಯನ್ನು ಓದುತ್ತೇವೆ. ಸಮುವೇಲನು ಎಲ್ಲಾ ಜನರನ್ನು ನೋಡಿ: ಕರ್ತನು ಆರಿಸಿಕೊಂಡ ಸೌಲನನ್ನು ನೋಡಿ, ಸಮಸ್ತ ಜನರಲ್ಲಿ ಅವನಿಗೆ ಸಮಾನರು ಯಾರೂ ಇಲ್ಲ ಎಂದರು. ಆಗ ಎಲ್ಲಾ ಜನರು ಆರ್ಭಟಿಸಿ, "ರಾಜನು ಚಿರಂಜೀವಿಯಾಗಿರಲಿ" ಎಂದು ಕೂಗಿ ರಾಜನನ್ನು ಆಶೀರ್ವದಿಸಿದರು. ರಾಜನು ಸಂತೋಷಪಡುತ್ತಿರುವಾಗ, ಕೆಲವು ಮಂದಿ ಕಾಕಪೋಕರು - ಇವನೋ ನಮ್ಮನ್ನು ರಕ್ಷಿಸುವವನು ಎಂದು ತಿರಸ್ಕರಿಸಿ ಸೌಲನಿಗೆ ಕಾಣಿಕೆಗಳನ್ನು ತರಲಿಲ್ಲ. ಸೌಲನು ಕಾಕಪೋಕ ಜನರ ಬಳಿ, ನೀವು ಯಾಕೆ ಹೀಗೆ ಮಾತನಾಡುತ್ತಿದ್ದೀರ ಎಂದು ಕೇಳಿದ್ದರೆ, ಕುರಿಮರಿಯ ಮೇಲೆ ತೋಳ ಬಿದ್ದಂತೆ ಆ ಕಾಕಪೋಕರು ಸೌಲನ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲುತ್ತಿದ್ದರು. ಅವರು ರಾಜ್ಯಭಾರವವನ್ನು ವಹಿಸಿಕೊಂಡಾಗ ಒಂದು ದೊಡ್ಡ ಸಮಸ್ಯೆ ಉದ್ಭವಿಸುತ್ತಿತ್ತು. ಆದರೆ ಸೌಲನು ಕಿವುಡನಂತೆ ಬುದ್ಧಿವಂತನಾಗಿ ವರ್ತಿಸಿದರು. 

 

ದೇವರ ಪ್ರೀತಿಯ ಮಗುವೇ, ನಿಮ್ಮನ್ನು ಕೂಡ ಕೆಲವು ಜನರು ಅಲ್ಪವಾಗಿ, ಹೀನವಾಗಿ ಮಾತನಾಡಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮನ್ನು ಹೀನವಾಗಿ ನಡೆಸಿಕೊಳ್ಳಬಹುದು. ನಿಮ್ಮ ಕಿವಿಗೆ ಬೀಳುವಂತೆ ನಿಮ್ಮನ್ನು ಅಪಹಾಸ್ಯ ಮಾಡಬಹುದು. ಆದರೆ ನೀನು ಮಾಡಬೇಕಾದದ್ದು ಸೌಲನಂತೆ, ಕಿವುಡನ ಹಾಗೆ ವರ್ತಿಸುವುದು. ಅದು ಬುದ್ಧಿವಂತ ಕ್ರಮ. ಈ ವಿಷಯದ ಬಗ್ಗೆ ದೇವರಿಗೆ ಪ್ರಾರ್ಥಿಸಿ ಮತ್ತು ಅದನ್ನು ಬಿಟ್ಟುಬಿಡಿ. ನಿನ್ನ ಮೇಲೆ ಆರೋಪ ಮಾಡುವವರನ್ನು ನೀವು ವಿರೋಧಿಸಿದರೆ, ನಿಮ್ಮ ಮೇಲಿರುವ ದೇವರ ಅಭಿಷೇಕ, ಕರೆಯುವಿಕೆ ಮತ್ತು ಸಮಾಧಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ನಂತರ, ನೀವು ಅವರನ್ನು ಹಾಗೆ ಕೇಳಿದ್ದಕ್ಕಾಗಿ ವಿಷಾದಿಸುತ್ತೀರ. ಹಂದಿಗಳ ಮುಂದೆ ಮುತ್ತುಗಳನ್ನು ಚೆಲ್ಲಬೇಡಿರಿ ಎಂದು ಸತ್ಯವೇದವು ಹೇಳುತ್ತದೆ. " ದುಷ್ಟರನ್ನು ಕಂಡರೆ ದೂರವಿರು, ಎಂಬುದು ನಾಣ್ಣುಡಿ. ಆದ್ದರಿಂದ ದುಷ್ಟ ಜನರಿಂದ ದೂರ ಸರಿಯಿರಿ. ಆಮೆನ್.

- R. ಸಲೋಮಿ

 

ಪ್ರಾರ್ಥನಾ ಅಂಶ:

VBS ಗೆ ಹಾಜರಾದ ಮಕ್ಕಳ ಹೃದಯದಲ್ಲಿ ಬಿತ್ತಲಾದ ವಾಕ್ಯವೆಂಬ ಬೀಜಗಳು ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al