Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.06.2025
Share:

By Village Missionary Movement

Thursday, 26-Jun-2025

ಧೈನಂದಿನ ಧ್ಯಾನ(Kannada) – 26.06.2025

 

ಆತ್ಮದ ಬೆಲೆ

 

"...ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ" - ಜ್ಞಾನೋಕ್ತಿ 11:30

 

ಮಹಾನ್ ಅಲೆಕ್ಸಾಂಡರ್ ದಿ ಗ್ರೇಟ್, ತನ್ನ ಮರಣಶಯ್ಯೆಯಲ್ಲಿ, ತನ್ನ ಕೊನೆಯ ಆಸೆ ಎಂಬುದಾಗಿ ಮೂರು ಕಾರ್ಯಗಳನ್ನು ಹೇಳಿದರು. ಮೊದಲನೆಯದಾಗಿ, ತನ್ನ ಶವಪೆಟ್ಟಿಗೆಯನ್ನು ಅತ್ಯುತ್ತಮ ವೈದ್ಯರು ಹೊತ್ತೊಯ್ಯಬೇಕು. ಎರಡನೆಯದಾಗಿ, ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ತಾನು ಸಂಗ್ರಹಿಸಿದ ಚಿನ್ನ ಮತ್ತು ಅಮೂಲ್ಯ ವಸ್ತುಗಳನ್ನು ಚೆಲ್ಲುತ್ತಾ ಹೋಗಬೇಕು. ಮೂರನೆಯದಾಗಿ, ತನ್ನ ಕೈಗಳನ್ನು ಶವಪೆಟ್ಟಿಗೆಯ ಹೊರಗೆ ಇಡಬೇಕು. ಅದನ್ನು ವಿವರಿಸಿ ಹೇಳುವಂತೆ ಕಮಾಂಡರ್ ಕೇಳಿದರು. ಅಲೆಕ್ಸಾಂಡರ್ ಅದಕ್ಕೆ ಉತ್ತರಿಸುತ್ತಾ, "ಅತ್ಯುತ್ತಮ ವೈದ್ಯರು ಸಹ ನನ್ನ ಸಾವನ್ನು ತಡೆಯಲು ಸಾಧ್ಯವಾಗಲಿಲ್ಲ. ನಾನು ಸಂಗ್ರಹಿಸಿದ ಎಲ್ಲಾ ವಸ್ತುಗಳು ಈ ಭೂಮಿಗೆ ಸ್ವಂತ. ಈ ಜಗತ್ತಿಗೆ ಬರಿಗೈಯಲ್ಲಿ ಬಂದ ನಾನು ನನ್ನೊಂದಿಗೆ ಏನನ್ನೂ ತೆಗೆದುಕೊಂಡು ಹೋಗಲಿಲ್ಲ" ಎಂಬುದನ್ನು ಲೋಕಕ್ಕೆ ತೋರಿಸುವುದಕ್ಕಾಗಿಯೇ ಹಾಗೆ ಹೇಳಿದರು. ಹೌದು ಭೂಮಿಯ ಮೇಲೆ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟದ್ದು, ಸಂಪಾದಿಸಿದ್ದು, ಯಾವುದೂ ನಾವು ಸಾಯುವಾಗ ನಮ್ಮ ಜೊತೆಯಲ್ಲಿ ಬರುವುದಿಲ್ಲ. ಇಂದಿನ ಸತ್ಯವೇದ ಭಾಗದಲ್ಲಿ ಇಂತಹ ಘಟನೆಯನ್ನು ಓದುತ್ತೇವೆ. 

 

ಒಬ್ಬ ಶ್ರೀಮಂತನ ಭೂಮಿ ಹೇರಳವಾಗಿ ಫಲ ನೀಡಿತು, ಮತ್ತು ಅವನಿಗೆ ಧಾನ್ಯವನ್ನು ಸಂಗ್ರಹಿಸಲು ಸ್ಥಳವಿರಲಿಲ್ಲ. ಆಗ ಅವನು ತನ್ನ ಕಣಜಗಳನ್ನು ಕೆಡವಿ, ದೊಡ್ಡ ಕಣಜಗಳನ್ನು ಕಟ್ಟಿ, ತನ್ನ ಧಾನ್ಯವನ್ನು ಸಂಗ್ರಹಿಸಿ, “ನನ್ನ ಪ್ರಾಣವೇ, ನಿರಾಳವಾಗಿರು; ತಿಂದು, ಕುಡಿದು, ಆನಂದಿಸು” ಎಂದು ತನ್ನೊಳಗೆ ಹೇಳಿದನು. ಆಗ ದೇವರು ಆ ಐಶ್ವರ್ಯವಂತನಿಗೆ, ಮೂರ್ಖನೇ ಈ ರಾತ್ರಿ ನಿನ್ನ ಪ್ರಾಣವು ನಿನ್ನಿಂದ ತೆಗೆಯಲ್ಪಡುತ್ತದೆ; ಹಾಗಾದರೆ ನೀನು ಸಂಗ್ರಹಿಸಿಟ್ಟಿರುವವಗಳು ಯಾರ ವಶವಾಗುತ್ತವೆ ಎಂದರು. 

 

ಪ್ರಿಯ ಸ್ನೇಹಿತರೇ! ನಮ್ಮ ಸಂಪತ್ತನ್ನು ಪರಲೋಕದಲ್ಲಿ ಸೇರಿಸಿಡುವಂತೆ ಕರ್ತನು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಪರಲೋಕಕ್ಕೆ ಸಂಪತ್ತಾಗಿ ಆತ್ಮಗಳನ್ನು ಕೊಂಡೊಯ್ದು ಸೇರಿಸಬಹುದು. ಎಂಥಹಾ ಕ್ರಯವನ್ನು ಕೊಟ್ಟರೂ ಯಾರಿಂದಲೂ ಪಾಪ ಕ್ಷಮಾಪಣೆ ಮತ್ತು ನಿತ್ಯಜೀವವನ್ನು ನೀಡಲು ಸಾಧ್ಯವಿಲ್ಲ. ಯೇಸುವಿನ ಅಮೂಲ್ಯ ರಕ್ತದಿಂದ ನಮಗೆ ಉಚಿತವಾಗಿ ಅವುಗಳನ್ನೆಲ್ಲಾ ಕೊಟ್ಟಿದ್ದಾರೆ. ನಾವು ಪರಲೋಕಕ್ಕೆ ಹೋಗುವಾಗ, ಆತ್ಮಗಳು ಮತ್ತು ಒಳ್ಳೆಯ ಕಾರ್ಯಗಳನ್ನು ಹೊರತುಪಡಿಸಿ ಏನನ್ನೂ ನಮ್ಮೊಂದಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ನಮ್ಮ ಭರವಸೆ ಮತ್ತು ಗುರಿ ಈ ಲೋಕದ ನಾಶವಾಗುವ ವಸ್ತುಗಳಲ್ಲಿ ಮಾತ್ರ ಇದ್ದರೆ, ನಮ್ಮ ಸ್ಥಿತಿ ಶೋಚನೀಯವಾಗಿದೆ. ಆದ್ದರಿಂದ, ನಾವು ಬುದ್ಧಿವಂತರಾಗಿ ಆತ್ಮಗಳನ್ನು ಗೆಲ್ಲೋಣ. ಇತರರನ್ನು ರಕ್ಷಣೆಯ ಹಾದಿಯಲ್ಲಿ ಮುನ್ನಡೆಸಲು ನಾವು ದೃಢನಿಶ್ಚಯ ಮಾಡೋಣ. ಸಮಯ ಅನುಕೂಲಕರವಾಗಿರಲಿ ಅಥವಾ ಪ್ರತಿಕೂಲವಾಗಿರಲಿ, ನಾವು ಎಚ್ಚರಿಕೆಯಿಂದ ಸುವಾರ್ತೆಯನ್ನು ಸಾರೋಣ. ಕರ್ತನು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುತ್ತಾರೆ.

- C. ಎಸ್ತೇರ್ ಸೆಲ್ವಿ

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಕೂಟದಲ್ಲಿ ಅಭಿಷೇಕವನ್ನು ಹೊಂದಿಕೊಂಡ ಯೌವನಸ್ಥರು, ಪ್ರತಿದಿನವೂ ಬೆಂಕಿಯನ್ನು ಹೊತ್ತಿಸಿ ಅದನ್ನು ಕಾದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş