By Village Missionary Movement
Wednesday, 25-Jun-2025ಧೈನಂದಿನ ಧ್ಯಾನ(Kannada) – 25.06.2025
ತಂದೆ ದ್ರಾಕ್ಷೆಯ ತೋಟಗಾರ
"ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆ ತೋಟಗಾರನು" - ಯೋಹಾನ 15:1
ಒಂದು ಶೀತ ಪ್ರದೇಶದಲ್ಲಿ, ಪ್ರಸಿದ್ಧ ವೈದ್ಯ ಡಾ. ವಿನ್ಸೆಂಟ್, ಸಸ್ಯಗಳನ್ನು ಬೆಳೆಸುವ ದೊಡ್ಡ ಹಸಿರುಮನೆಗೆ ಭೇಟಿ ನೀಡಿದರು. ಅಲ್ಲಿ ಅವರು ಕಂಡ ದೃಶ್ಯ ಅವರನ್ನು ಬೆರಗುಗೊಳಿಸಿತು. ರಸ ಸುರಿಯುವ ಹಂತದಲ್ಲಿದ್ದ ದೊಡ್ಡ ದೊಡ್ಡ ದ್ರಾಕ್ಷಿ ಗೊಂಚಲುಗಳು ನೇತಾಡುತ್ತಿದ್ದವು, ವೈದ್ಯರು ಮನೆಯ ಮಾಲೀಕರನ್ನು ಅದು ಹೇಗೆ ಸಂಭವಿಸಿತು ಎಂದು ಕೇಳಿದರು. ಅವರು ಹೇಳಿದರು, "ನನ್ನ ಹೊಸ ತೋಟಗಾರ ಬಳ್ಳಿಗಳನ್ನು ನೆಲದ ಮಟ್ಟಿಗೆ ಕಡಿದುಬಿಟ್ಟನು. ಎರಡು ವರ್ಷಗಳಿಂದ, ಈ ಬಳ್ಳಿಗಳಿಂದ ಒಂದೇ ಒಂದು ದ್ರಾಕ್ಷಿ ಗೊಂಚಲು ಕೂಡ ಬೆಳೆಯಲಿಲ್ಲ. ಆದರೆ ಈಗ ಅವು ಉತ್ತಮ ಫಸಲನ್ನು ನೀಡುತ್ತಿದೆ ಎಂದರು.
ಯೇಸು ಕ್ರಿಸ್ತನು, "ನಾನು ದ್ರಾಕ್ಷೇ ಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ" ಎಂದರು. ಯೇಸುವಿನೊಂದಿಗೆ ಸೇರಿ ಬಾಳುವ ಜೀವನವು ಹೆಚ್ಚಿನ ಫಲವನ್ನು ನೀಡುತ್ತದೆ. ದ್ರಾಕ್ಷೇಬಳ್ಳಿಗಳಾಗಿರುವ ನಮ್ಮನ್ನು ಪ್ರತಿದಿನ ಶಿಕ್ಷಿಸಿ ಮುನ್ನಡೆಸುತ್ತಾರೆ. ಅಂದರೆ, ಶಿಕ್ಷೆಯು ನಮಗೆ ನೋವು ಮತ್ತು ಕಷ್ಟವನ್ನು ತಂದಾಗ, 'ನನ್ನ ತಂದೆ ದ್ರಾಕ್ಷೆತೋಟಗಾರ' ಎಂದು ನಂಬಲು ನಾವು ಕಲಿಯಬೇಕು. ನಾವು ಹಾಗೆ ನಂಬಿದಾಗ, ಎಷ್ಟೇ ಶೋಧನೆಗಳು ಬಂದರೂ, ಸಾಂತ್ವನದ ದೇವರು ನಮ್ಮನ್ನು ಸಾಂತ್ವನಗೊಳಿಸುತ್ತಾರೆ. ಆತನು ದ್ರಾಕ್ಷೆಬಳ್ಳಿಗಳಾಗಿರುವ ನಮ್ಮನ್ನು ಶಿಕ್ಷಿಸುವಾಗ, ನಾವು ಸ್ವಲ್ಪವೂ ಸುಸ್ತಾಗಬಾರದು. ನಾವು ಹೆಚ್ಚು ಫಲಗಳನ್ನು ಕೊಡುವುದಕ್ಕಾಗಿಯೇ ಆತನು ನಮ್ಮನ್ನು ಶಿಕ್ಷಿಸುತ್ತಾರೆ.
ಪ್ರೀತಿಯ ದೇವರ ಮಕ್ಕಳೇ, ನಮ್ಮ ದೈನಂದಿನ ಜೀವನದಲ್ಲಿ ಅನೇಕ ನೋವಿನ ಘಟನೆಗಳು ಸಹ ಸಂಭವಿಸುತ್ತವೆ. ದ್ರಾಕ್ಷೆತೋಟಗಾರನಾದ ಕ್ರಿಸ್ತನು ನಮ್ಮ ಜೀವನವನ್ನು ಕತ್ತರಿಸುತ್ತಿದ್ದಾರೆಂದು ತೋರುತ್ತದೆಯಾದರೂ, ನಮ್ಮ ಭವಿಷ್ಯವು ದೇವರ ಕೈಯಲ್ಲಿದೆ. ಲೋಕದಲ್ಲಿ ನಮಗೆ ಬರುವ ನೋವುಗಳು ಕೇಡು ಮತ್ತು ಹಾನಿಯನ್ನುಂಟುಮಾಡಬಹುದು. ಆದರೆ ದೇವರು ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ಅನುಮತಿಸುವ ಶೋಧನೆಗಳು ನಮಗೆ ಆಶೀರ್ವಾದಗಳನ್ನು ತರುತ್ತವೆ. ಹೌದು, ಆಗ ನಾವು ಹೆಚ್ಚು ಫಲವನ್ನು ಕೊಡುವವರಾಗಿರುತ್ತೇವೆ. ಯೋಸೇಫನು ಫಲಪ್ರದ ಬಳ್ಳಿ ಎಂದು ಸತ್ಯವೇದವು ಹೇಳುತ್ತದೆ. ಹೌದು, ಫಲಪ್ರದ ಜೀವನವನ್ನು ನಡೆಸಲು, ಅವನು ದೇವರ ಕೈಯಲ್ಲಿ ವಿಧೇಯನಾಗಿರಬೇಕು ಮತ್ತು ವೇದನೆಯಲ್ಲಿ ಶೋಧನೆಗಳಲ್ಲಿ ದೇವರನ್ನೇ ಅವಲಂಬಿಸಬೇಕು! ನಾವು ದೇವರಲ್ಲಿ ನೆಲೆಗೊಳ್ಳೋಣ. ಹೆಚ್ಚು ಫಲಗಳನ್ನು ಕೊಡೋಣ. ಆಮೆನ್.
- Mrs. ಜಾಸ್ಮಿನ್ ಪಾಲ್
ಪ್ರಾರ್ಥನಾ ಅಂಶ
ಪ್ರತಿ ರಾಜ್ಯದಲ್ಲಿ 500 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482