Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.06.2025
Share:

By Village Missionary Movement

Monday, 23-Jun-2025

ಧೈನಂದಿನ ಧ್ಯಾನ(Kannada) – 23.06.2025

 

ಅಮೂಲ್ಯವಾದದ್ದು 

 

"ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?.." - ಮತ್ತಾಯ 16:26

 

ಜಾನ್ ಸ್ಮಿತ್, "ಆತ್ಮಗಳು ನಶಿಸಿಹೋಗುವುದನ್ನು ನೋಡುವಾಗ ನನ್ನ ಹೃದಯವು ಮುರಿಯಲ್ಪಡುತ್ತಿದೆ. ಆತ್ಮಗಳು ರಕ್ಷಿಸಲ್ಪಡುವುದನ್ನು ನೋಡದೇ ಹೋದರೆ, ನಾನು ಬದುಕುವುದರಲ್ಲಿ ಅರ್ಥವೇ ಇಲ್ಲ. ಕರ್ತನೇ, ಆತ್ಮಗಳನ್ನು ಕೊಡಿ ಇಲ್ಲದಿದ್ದರೆ ನಾನು ಸಾಯುತ್ತೇನೆ" ಎಂದು ಹೇಳಿ ಈ ದೇವರ ಮನುಷ್ಯನು ಕೂಗಿ ಪ್ರಾರ್ಥಿಸುತ್ತಿದ್ದರು. 

 

ನಾವು ವಾಸಿಸುವ ದೇಶವು ಭಕ್ತಿಯಿಂದ ತುಂಬಿದ ದೇಶ. ಈ ದೇಶದಲ್ಲಿ ವಾಸಿಸುವ ನಮ್ಮಲ್ಲಿ ರಕ್ಷಿಸಲ್ಪಡದ ಆತ್ಮಗಳ ಬಗ್ಗೆ ಒಂದು ಆಲೋಚನೆ ಇರಬೇಕು. ಜನರು ತಮ್ಮ ಪಾಪಗಳನ್ನು ತೊಳೆಯಲ್ಪಡಲು, ಪುಣ್ಯ ಸಿಗಲು ಮೋಕ್ಷಕ್ಕೆ ಹೋಗಬೇಕು ಎಂದು ಹೇಳುವ ಮೂಲಕ ತಮ್ಮನ್ನು ತಾವು ಹಿಂಸಿಸಿಕೊಳ್ಳುತ್ತಾರೆ. ಇದನ್ನು ನೋಡಿದಾಗ, ನಮ್ಮ ಹೃದಯಗಳು ಮುರಿಯಲ್ಪಡಬೇಕು. ಇವರಿಗಾಗಿ ಸತ್ತು ಪುನರುತ್ಥಾನನಾದ ದೇವರು, ಪ್ರೀತಿಯಿಂದ ತನ್ನ ಬಳಿಗೆ ಬರುವವರಿಗೆ ಉಚಿತವಾಗಿ ಜನರು ಹುಡುಕುವ ಪಾಪ ವಿಮೋಚನೆಯನ್ನು ನೀಡಲು ಶಕ್ತನಾಗಿದ್ದಾರೆ. ಮೋಕ್ಷಕ್ಕೆ ಹೋಗಲು ಏಕೈಕ ಮಾರ್ಗ ಯೇಸುವೇ. ಜನರು ಇದನ್ನು ತಿಳಿಯದೆ ಉಚಿತವಾಗಿ ಪಡೆಯಬೇಕಾದದ್ದಕ್ಕಾಗಿ ಶರೀರವನ್ನು ಹಿಂಸಿಸಿಕೊಳ್ಳುತ್ತಿರುವುದನ್ನು ನೋಡುವಾಗ, ನಮ್ಮ ಹೃದಯಗಳು ಅವರಿಗಾಗಿ ಪರಿತಪಿಸಬೇಕು. ಏಕೆಂದರೆ ಆತ್ಮವು ಅಮೂಲ್ಯವಾದದ್ದು. ಒಬ್ಬನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ, ತನ್ನ ಆತ್ಮ ಮೋಕ್ಷದ ಮಾರ್ಗವನ್ನು ತಿಳಿಯದೇ ಹೋದರೆ, ಅವನು ಲೋಕದಲ್ಲಿ ಸಂಪಾದಿಸಿಟ್ಟಿರುವವುಗಳಿಂದ ಯಾವುದೇ ಪ್ರಯೋಜನವಿಲ್ಲ. ತನ್ನ ಆತ್ಮಕ್ಕೆ ಬದಲಾಗಿ ಏನೂ ಕೊಡಲು ಸಾಧ್ಯವಿಲ್ಲ. ಏಕೆಂದರೆ ನಾವು ಹುಟ್ಟುವುದು, ಸಾಯುವುದು ಒಮ್ಮೆ ಮಾತ್ರವೇ. ಅದರ ನಂತರ, ನ್ಯಾಯ ತೀರ್ಪು ಮಾತ್ರ ಇದೆ. ನಿಮ್ಮ ಆತ್ಮ ರಕ್ಷಣೆ ಹೊಂದಲು ಮತ್ತು ವಿಮೋಚನೆಯನ್ನು ಪಡೆಯಲು ಶಿಲುಬೆಯ ಬಳಿಗೆ ಬನ್ನಿ. 

 

ಏಕೆಂದರೆ ನಿಮ್ಮ ಪಾಪಗಳಿಗಾಗಿ ನೀವು ಹೊಂದಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನೇ ಶಿಲುಬೆಯಲ್ಲಿ ಸ್ವೀಕರಿಸಿದರು. ನಿಮ್ಮ ಪಾಪಗಳನ್ನು ಮಾತ್ರವಲ್ಲದೆ ನಿಮ್ಮ ದುಃಖಗಳು, ಚಿಂತೆಗಳು, ಕಣ್ಣೀರು ಮತ್ತು ಬಲಹೀನತೆಗಳನ್ನು ಸಹ ಸ್ವೀಕರಿಸಿ, ಸತ್ತು ಪುನಃ ಜೀವಂತವಾಗಿ ಎದ್ದು ಪಾಪದಿಂದ ನಿಮಗೆ ಉಚಿತವಾಗಿ ವಿಮೋಚನೆಯನ್ನು ನೀಡಲು ಉತ್ಸುಕರಾಗಿದ್ದಾರೆ. ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು ಎಂದು ತನ್ನ ಎರಡೂ ಕೈಗಳನ್ನು ಚಾಚಿ ಆಸೆಯಿಂದ ಕಾಯುತ್ತಿದ್ದಾರೆ. ನೀವು ಇನ್ನೂ ರಕ್ಷಣೆಯನ್ನು ಪಡೆದಿಲ್ಲವೇ? ಇಂದೇ ನಾವು ಅವರ ಬಳಿಗೆ ಹೋಗಿ ಉಚಿತವಾಗಿ ವಿಮೋಚನೆಯನ್ನು ಪಡೆಯೋಣವಾ. ಆಮೆನ್.

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ

ಆಮೆನ್, ವಿಲೇಜ್ ವಿವಿ ಸೇವೆಗಳ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet