Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.06.2025 (Kids Special)
Share:

By Village Missionary Movement

Sunday, 22-Jun-2025

ಧೈನಂದಿನ ಧ್ಯಾನ(Kannada) – 22.06.2025 (Kids Special)

 

ಬುದ್ಧಿವಂತ ಮಗು

 

"ಧರ್ಮಿಯ ತಂದೆಯು ಅತಿ ಸಂತೋಷಪಡುವನು; ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು" - ಜ್ಞಾನೋಕ್ತಿ 23:24

 

ನರಿಯನ್‌ಪಟ್ಟಿ ಒಂದು ಸುಂದರವಾದ, ಸಮೃದ್ಧ ಹಳ್ಳಿಯಾಗಿದ್ದು, ನೀವು ಎಲ್ಲಿ ನೋಡಿದರೂ ಹಸಿರಾಗಿ ಕಾಣುತ್ತದೆ. ಆ ಹಳ್ಳಿಯ ಗಡಿಯಲ್ಲಿರುವ ನದಿಯ ದಡದಲ್ಲಿ ಯಾವಾಗಲೂ ನೀರು ಹರಿಯುತ್ತಿರುತ್ತದೆ. ಜಾಕೋಬ್ ಮತ್ತು ಜೋನ್ಸ್ ಎಂಬ ಇಬ್ಬರು ಸ್ನೇಹಿತರು ಯಾವಾಗಲೂ ಶಾಲೆ ಮುಗಿದ ನಂತರ ನದಿಯ ದಡಕ್ಕೆ ಹೋಗುತ್ತಾರೆ. ಅವರು ಕೆಲವು ಸ್ನೇಹಿತರೊಂದಿಗೆ ಆ ನದಿಯ ಮರಳಿನಲ್ಲಿ ಆಟವಾಡುತ್ತಾರೆ. 

 

ಸಂಜೆ 6 ಗಂಟೆಗೆ ಜೋನ್ಸ್‌ನ ತಾಯಿ ಅವನಿಗೆ ಕರೆ ಮಾಡಿದಾಗ, ಅವನು ತುಂಬಾ ಕೋಪಗೊಂಡು ಅಸಮಾಧಾನದಿಂದ ಹೋಗುತ್ತಾನೆ. ಆದರೆ ಜಾಕೋಬ್ ತನ್ನ ತಾಯಿ ಅವನನ್ನು ಕರೆಯುವ ಮೊದಲು ಮನೆಗೆ ಹೋಗಿ Home work ಬರೆದು, ಹೆತ್ತವರಿಗೆ ವಿಧೇಯನಾಗಿ ನಡೆಯುತ್ತಿದ್ದನು. ಜೋನ್ಸ್ ಮನೆಗೆ ಹೋದಾಗಲೂ, ಅವನು ತನ್ನ Home work ಮಾಡುತ್ತಿರಲಿಲ್ಲ ತನ್ನ ತಂದೆ ತಾಯಿಗೆ ವಿಧೇಯನಾಗುತ್ತಿರಲಿಲ್ಲ. ಪ್ರತಿದಿನ ಇದೇ ಪರಿಸ್ಥಿತಿ. ಅವನಿಗಾಗಿ ತಾಯಿ ಅತ್ತು ಪ್ರಾರ್ಥಿಸುತ್ತಿದ್ದರು. ಮರುದಿನ ಅವರು ಅದೇ ರೀತಿಯಲ್ಲಿ ನದಿಯ ದಡದಲ್ಲಿ ಆಟವಾಡಲು ಹೋದರು. 6 ಗಂಟೆಗೆ, ಜಾಕೋಬ್ ಮನೆಗೆ ಹೋಗಿ ಆ ದಿನ ಶಾಲೆಯಲ್ಲಿ ಕಲಿತ ಪಾಠಗಳನ್ನು ಅಧ್ಯಯನ ಮಾಡಿ ಬುದ್ಧಿವಂತ ಮಗುವಿನಂತೆ ವರ್ತಿಸಿದನು. ಆದರೆ ಜೋನ್ಸ್‌ನ ತಾಯಿ ಅವನನ್ನು ಎಷ್ಟೇ ಕರೆದರೂ ಅವನು ನಾನು ಬರೋದಿಲ್ಲ ಎಂದು ಕೂಗಿದನು. ಹಿಂತಿರುಗಿ ಬೇಸರದಿಂದ ಹೋಗುತ್ತಿದ್ದ ತಾಯಿಯನ್ನು ಕೆಲವು ದಿನಗಳಿಂದ ಗಮನಿಸುತ್ತಿದ್ದ ಬೋಧಕರು, ಜೋನ್ಸ್ ಬಳಿಗೆ ಬಂದು, ಅವನ ಭುಜದ ಮೇಲೆ ಕೈಹಾಕಿ, ಸ್ವಲ್ಪ ಹೊತ್ತು ನಿನ್ನೊಂದಿಗೆ ಮಾತನಾಡಬಹುದೇ ಎಂದು ಕೇಳಿ ಅವನನ್ನು ಕರೆದುಕೊಂಡು ಹೋದರು. 

 

ನಾನು ನಿನ್ನನ್ನು ಪ್ರತಿದಿನ ಈ ನದಿದಡದಲ್ಲಿ ನೋಡುತ್ತಿದ್ದೇನೆ. ನೀನು ನಿನ್ನ ತಾಯಿಯೊಂದಿಗೆ ಏಕೆ ಹಾಗೆ ವರ್ತಿಸುತ್ತೀಯಾ? ಎಂದು ಅವನನ್ನು ಕೇಳಿದರು. ಅದಕ್ಕೆ ಅವನು ಅಯ್ಯಾ, ನನ್ನ ತಾಯಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲ. ಅವರಿಗೆ ನಾನಂದ್ರೆ ಇಷ್ಟವೇ ಇಲ್ಲ. ಯಾವಾಗಲೂ ಓದು ಓದು ಎಂದು ಹೇಳುತ್ತಾರೆ. ನಾನು ಏನನ್ನಾದರೂ ಕೇಳಿದರೆ, ಅದನ್ನು ನನಗೆ ತೆಗೆದು ಕೊಡುವುದಿಲ್ಲ. ಆದರೆ ಜಾಕೋಬ್ ಮನೆಯಲ್ಲಿ, ಅವನನ್ನು ಮುದ್ದಾಗಿ ನೋಡಿಕೊಳ್ಳುತ್ತಾರೆ ಮತ್ತು ಅವನು ಏನು ಕೇಳಿದರೂ ತೆಗೆದುಕೊಡುತ್ತಾರೆ ಎಂದು ಹೇಳಿದನು. ಜಾಕೋಬ್‌ ನ ಹಾಗೆ ನೀನು ವಿಧೇಯನಾಗಿ, "ಯೇಸು" ವಿಗೆ ಮೊದಲ ಸ್ಥಾನ ಕೊಟ್ಟು ಬುದ್ಧಿವಂತ ಮಗುವಿನಂತೆ ವರ್ತಿಸಿದರೆ, ನಿನ್ನನ್ನೂ ಎಲ್ಲರು ಇಷ್ಟಪಡುತ್ತಾರೆ ಎಂದು ಬೋಧಕರು ಸಲಹೆ ನೀಡಿದರು. ಯೋಚಿಸುತ್ತಲೇ ಹೋದ ಜೋನ್ಸ್ ನ ಹೃದಯದಲ್ಲಿ, ಬೋಧಕರ ಮಾತುಗಳು ಮಾತನಾಡುತ್ತಲೇ ಇದ್ದವು. ಮೊದಲನೆಯದಾಗಿ, ಬೆಳಿಗ್ಗೆ ಎದ್ದ ತಕ್ಷಣ, ಮಂಡಿಯೂರಿ ಯೇಸುವನ್ನು ಹುಡುಕಲು ಪ್ರಾರಂಭಿಸಿದನು. ಇದನ್ನು ನೋಡಿದ ಅವನ ತಾಯಿಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. 

 

ಪ್ರೀತಿಯ ತಮ್ಮ, ತಂಗಿ ಈ ಹೊಸ ಶೈಕ್ಷಣಿಕ ವರ್ಷದಲ್ಲಿ, ನೀನು ಬುದ್ಧಿವಂತ ಮಗುವಾಗಿ ಬದುಕಲು, ನಿನ್ನನ್ನು ಯೇಸು ಕ್ರಿಸ್ತನ ಬಳಿ ಅರ್ಪಿಸಿಕೋ, ಕರ್ತನೇ ನಿನ್ನನ್ನು ಆಶೀರ್ವದಿಸಲಿ. 

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş