Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.06.2025
Share:

By Village Missionary Movement

Friday, 20-Jun-2025

ಧೈನಂದಿನ ಧ್ಯಾನ(Kannada) – 20.06.2025

 

ಎಲುಬುಗಳಿಗೆ ಜೀವ ಬರುತ್ತದಾ?

 

"ಆತನು ನನ್ನನ್ನು ನೋಡಿ (ಹಿಜ್ಕೀಯನೇ) ನರಪುತ್ರನೇ, ಈ ಎಲುಬುಗಳಿಗೆ ಜೀವವು ಬರಬಹುದೋ ಎಂದು ಕೇಳಲು ..." - ಯೆಹೆಜ್ಕೇಲ 37:3

 

ಸೇವಕರೊಬ್ಬರು ತನ್ನ ಸಭೆಯಲ್ಲಿ ಪ್ರಕಟಣೆಯೊಂದನ್ನು ಹೇಳಿದರು. ಅದೇನಂದರೆ, ಇಂದು ಸಂಜೆ 6 ಗಂಟೆಗೆ ನಮ್ಮ "ಸಭೆಯ ಅಂತ್ಯಕ್ರಿಯೆ" ನಡೆಯಲಿದೆ ಎಂದು! ಆದ್ದರಿಂದ ತಪ್ಪದೇ ಸಭೆಯವರೆಲ್ಲರು ಅಂತ್ಯಕ್ರಿಯೆಯಲ್ಲಿ ಖಂಡಿತವಾಗಿಯೂ ಭಾಗವಹಿಸಬೇಕೆಂದು ಹೇಳಿದರು. ಸಭೆಯು ಆಘಾತಕ್ಕೊಳಗಾಯಿತು. ಸಭೆಯ ಅಂತ್ಯಕ್ರಿಯೆಯೇ? ಸಭೆ ಸತ್ತಿದೆಯೇ? ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಹೋದರು. ಸಂಜೆ 6 ಗಂಟೆ ಬಂದಾಗ, ಸಭೆಯವರೆಲ್ಲರು ಬಹಳ ನಿರೀಕ್ಷೆಯಿಂದ ಚರ್ಚ್‌ನಲ್ಲಿ ಒಟ್ಟುಗೂಡಿದರು. ಶವಪೆಟ್ಟಿಗೆಯನ್ನು ಅವರ ಮುಂದೆ ಇರಿಸಲಾಯಿತು. ಸೇವಕರು ಸೇವೆಯನ್ನು ಪ್ರಾರಂಭಿಸಿದರು. ಸಭೆಯನ್ನು ನೋಡುತ್ತಾ, ಅಂತಿಮ ಗೌರವ ಸಲ್ಲಿಸುವವರು ಸಾಲಾಗಿ ಮುಂದೆ ಬರಬೇಕು ಮತ್ತು ಗೌರವ ಸಲ್ಲಿಸಿದ ನಂತರ, ನಾವು ಸಮಾಧಿಗೆ ಹೊರಡುತ್ತೇವೆ ಎಂದು ಹೇಳಿದರು. ಸಭೆಯವರು ಅಂತಿಮ ಗೌರವ ಸಲ್ಲಿಸಲು ಮುಂದೆ ಹೋದರು. ಅವರು ಶವಪೆಟ್ಟಿಗೆಯನ್ನು ಬಹಳ ಆಸಕ್ತಿಯಿಂದ ನೋಡಿದರು. ಅದನ್ನು ನೋಡಿದವರು ಆಘಾತಕ್ಕೊಳಗಾದರು ಮತ್ತು ಕಣ್ಣುಗಳಲ್ಲಿ ಕಣ್ಣೀರು ಸುರಿಸುತ್ತಾ ಮುಖಗಳನ್ನು ಮುಚ್ಚಿಕೊಂಡು ತಮ್ಮ ಆಸನಗಳಿಗೆ ಹೋದರು. ಕಾರಣ ಗೊತ್ತಾ? ಸೇವಕರು ಶವಪೆಟ್ಟಿಗೆಯಲ್ಲಿ ದೊಡ್ಡ ಕನ್ನಡಿ ಇಟ್ಟಿದ್ದರು. ಅಂತಿಮ ನಮನ ಸಲ್ಲಿಸಲು ಬಂದ ಪ್ರತಿಯೊಬ್ಬ ವ್ಯಕ್ತಿಯೂ ಶವಪೆಟ್ಟಿಗೆಯನ್ನು ನೋಡಿದಾಗ, ಅವರ ಸ್ವಂತ ಮುಖ ಕನ್ನಡಿಯಲ್ಲಿ ಗೋಚರಿಸಿತು. 

 

ಸೇವಕರು ತಕ್ಷಣ ಅದನ್ನು ವಿವರಿಸಿದರು. "ಸಭೆ ಎಂಬುದು ನೀವೇ" ನೀವೆಲ್ಲರೂ ಬೆಚ್ಚಗೂ ಇಲ್ಲದೆ ತಣ್ಣಗೂ ಇಲ್ಲದೆ, ಕರ್ತನೊಂದಿಗೆ ಯಾವುದೇ ಸಂಬಂಧವಿಲ್ಲದೆ ಜೀವನ ನಡೆಸುತ್ತಿರುವುದನ್ನು ನೋಡಿದೆ. ಅದನ್ನು ನಿಮಗೆ ತಿಳಿಸುವುದಕ್ಕಾಗಿಯೇ ಈ ತೀರ್ಮಾನಕ್ಕೆ ಬಂದೆ ಎಂದು ಹೇಳಿದರಂತೆ.

 

ಕರ್ತನು ಪ್ರವಾದಿಯಾದ ಯೆಹೆಜ್ಕೇಲನನ್ನು ಆತ್ಮ ಪರವಶನಾಗಿ ಮಾಡಿ, ಹೊರಗೆ ತೆಗೆದುಕೊಂಡು ಹೋಗಿ, ಎಲುಬುಗಳಿಂದ ತುಂಬಿದ್ದ ತಗ್ಗಿನ ಮಧ್ಯದಲ್ಲಿ ನಿಲ್ಲಿಸಿ ಅವರನ್ನು ನೋಡಿ "ನರಪುತ್ರನೇ, ಈ ಎಲುಬುಗಳಿಗೆ ಜೀವವು ಬರಬಹುದೋ ಎಂದು ಕೇಳಿದರು. ಅದಕ್ಕೆ ಯೆಹೆಜ್ಕೇಲನು ಕರ್ತನಾದ ಯೆಹೋವನೇ, "ನೀನೇ ಬಲ್ಲೆ" ಎಂದು ಉತ್ತರಕೊಟ್ಟರು.

 

ಪ್ರಿಯರೇ, ನಾವು ಶಾರೀರಿಕ ಪ್ರಯೋಜನಗಳನ್ನು ಪಡೆದುಕೊಂಡು ಆಧ್ಯಾತ್ಮಿಕ ಜೀವನದಲ್ಲಿ ಒಣಗಿದ ಸ್ಥಿತಿಯಲ್ಲಿದ್ದರೂ, ನಿಮ್ಮ ಒಣಗಿದ ಮೂಳೆಗಳನ್ನು ಪುನರುಜ್ಜೀವನಗೊಳಿಸಲು ದೇವರೊಬ್ಬರಿಗೆ ಮಾತ್ರವೇ ಸಾಧ್ಯ. ನಿರ್ಜೀವವಾಗಿರುವ ಆತ್ಮ ಮತ್ತು ಸಭೆಯನ್ನು ಆತನು ಪುನರುಜ್ಜೀವನಗೊಳಿಸುತ್ತಾನೆ ಮತ್ತು ನಮ್ಮನ್ನು ದೃಢವಾಗಿ ನಿಲ್ಲುವಂತೆ ಮಾಡುತ್ತಾನೆ. ಹಲ್ಲೇಲೂಯಾ! ಆಮೆನ್.

Mrs.D. ಸುಧಾ ದೇವಭಾಸ್ಕರ್

 

ಪ್ರಾರ್ಥನಾ ಅಂಶ:

"ಯೇಸುವಿನ ಸಂತತಿ" ಎಂಬ ಮಕ್ಕಳ ಕಾರ್ಯಕ್ರಮದ ಮೂಲಕ ಚಿಕ್ಕಮಕ್ಕಳೆಲ್ಲರು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al