By Village Missionary Movement
Thursday, 19-Jun-2025ಧೈನಂದಿನ ಧ್ಯಾನ(Kannada) – 19.06.2025
ಅತ್ಯಾಸಕ್ತಿಯುಳ್ಳ ವಿಜ್ಞಾಪನೆ
"...ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ" - ಯಾಕೋಬ 5:16
ಚೀನಾದಲ್ಲಿ ಉಜ್ಜೀವನಕ್ಕೆ ಕಾರಣರಾದ ಹಡ್ಸನ್ ಟೇಲರ್ ಎಂಬ ಸೇವಕನ ಬಗ್ಗೆ ಅನೇಕ ಜನರಿಗೆ ಗೊತ್ತು. ಅವರ ತಾಯಿ ತೀವ್ರವಾದ ಪ್ರಾರ್ಥನಾ ಯೋಧರಾಗಿದ್ದರು. ಆ ತಾಯಿಯ ಪ್ರಾರ್ಥನೆಗಳಿಂದಲೇ ಅವರು ರಕ್ಷಿಸಲ್ಪಟ್ಟರು. ಹಡ್ಸನ್ ದೇವರ ಮಹಾನ್ ಸೇವಕನಾಗಬೇಕೆಂದು ಅವರು ಯಾವಾಗಲೂ ಪ್ರಾರ್ಥಿಸುತ್ತಿದ್ದರು. ಆದರೆ ಅವರೋ ತನ್ನ 15 ನೇ ವರ್ಷದಲ್ಲಿ, ಬ್ಯಾಂಕಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಪ್ರಾರ್ಥಿಸಲು ಮರೆತು, ಕ್ರೈಸ್ತರನ್ನು ಗೇಲಿ ಅಪಹಾಸ್ಯ ಮಾಡುತ್ತಾ ದೇವರಿಲ್ಲದ ಜೀವನವನ್ನು ನಡೆಸಿದರು. ಇದು ಅವರ ತಾಯಿಗೆ ತುಂಬಾ ನೋವಿನಿಂದ ಕೂಡಿತ್ತು.
ಒಂದು ದಿನ, ಹಡ್ಸನ್ ಅವರ ತಾಯಿ ಮಧ್ಯಾಹ್ನ ತನ್ನ ಮಗನಿಗಾಗಿ ತೀವ್ರವಾದ ಪ್ರಾರ್ಥನೆ ಮಾಡುತ್ತಿದ್ದಳು. ಆ ದಿನ ಹಡ್ಸನ್ ರಜೆಯಲ್ಲಿದ್ದ ಕಾರಣ, ಓದಲು ಪುಸ್ತಕವನ್ನು ಹುಡುಕಲು ತನ್ನ ತಂದೆಯ ಕೋಣೆಗೆ ಹೋದರು. ಅಲ್ಲಿ 'ಎಲ್ಲಾ ಮುಗಿಯಿತು' ಎಂಬ ಕ್ರೈಸ್ತ ಕರಪತ್ರ ಅವರಿಗೆ ದೊರೆಯಿತು. ಅದನ್ನು ಓದಿದಾಗ, ಪರಿಶುದ್ಧಾತ್ಮನು ಅವರೊಂದಿಗೆ ಮಾತನಾಡಿದರು. ಅದೇ ದಿನದಲ್ಲಿ, ಹಡ್ಸನ್ ರಕ್ಷಿಸಲ್ಪಟ್ಟು ಹೊಸ ಮನುಷ್ಯನಾಗಿ ಮಾರ್ಪಟ್ಟರು.
ಸತ್ಯವೇದದಲ್ಲಿ ಯಾಕೋಬ 5:16 ರಲ್ಲಿಯೂ ಸಹ ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾದದ್ದು ಎಂದು ಹೇಳಲ್ಪಟ್ಟಿದೆಯಲ್ಲಾ? ಆದ್ದರಿಂದ, ಯಾರಿಗೋಸ್ಕರವಾದರೂ ನಾವು ಮಾಡುವ ಪ್ರಾರ್ಥನೆಯು ತುಂಬಾ ಬಲವಾದದ್ದು. ಆ ರಾತ್ರಿ, ಪೌಲ ಮತ್ತು ಸೀಲರು ಮಧ್ಯರಾತ್ರಿಯಲ್ಲಿ, ಸೆರೆಮನೆಯಲ್ಲಿ ಮಾಡಿದ ಪ್ರಾರ್ಥನೆಯ ಮೂಲಕ, ಸೆರೆಮನೆಯ ಅಸ್ತಿವಾರಗಳು ಕದಲಿದ್ದು ಮಾತ್ರವಲ್ಲ, ಸೆರೆಮನೆಯ ಅಧಿಕಾರಿ ಮತ್ತು ಅವನ ಕುಟುಂಬವೂ ರಕ್ಷಿಸಲ್ಪಟ್ಟಿತು. (ಅಪೊಸ್ತಲ16:30-32)
ಪ್ರಿಯರೇ! ಹಡ್ಸನ್ ಅವರ ತಾಯಿ ಪ್ರಾರ್ಥಿಸಿದಂತೆ ನೀವು ಸಹ ಬಹಳ ದಿನಗಳಿಂದ ನಿಮ್ಮ ಕುಟುಂಬ ಮತ್ತು ಸಂಬಂಧಿಕರ ರಕ್ಷಣೆಗಾಗಿ ಪ್ರಾರ್ಥಿಸುತ್ತಿದ್ದೀರಾ? ಅವರು ಯಾವುದೋ ಒಂದು ಕಾರ್ಯದ ನಿಮಿತ್ತವಾಗಿ, ಸ್ವಾತಂತ್ರ್ಯವಿಲ್ಲದೆ, ಗುಲಾಮರಾಗಿರುವುದನ್ನು ಗ್ರಹಿಸುತ್ತಿದ್ದೀರಾ? ಮತ್ತು ಯಾವುದೋ ಒಂದು ವಿಷಯದಲ್ಲಿ ಸಿಲುಕಿಕೊಂಡು ಹೊರಬರಲು ಹೆಣಗಾಡುತ್ತಿದ್ದೀರಾ? ಖಂಡಿತವಾಗಿಯೂ ಅವರಿಗಾಗಿ ನೀವು ಮಾಡುವ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಗೂ, ವಿಜ್ಞಾಪನೆಗೂ ಉತ್ತರ ನೀಡುತ್ತಾರೆ. ನಾವು ಮಾಡುವ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ತುಂಬಾ ಬಲವುಳ್ಳದ್ದಾಗಿದೆ. ಆಮೆನ್.
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
ಮಿಷನರಿ ಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಲು ಇರುವಂತಹ ಎಲ್ಲಾ ಅಡೆತಡೆಗಳು ನೀಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482