Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.06.2025
Share:

By Village Missionary Movement

Wednesday, 18-Jun-2025

ಧೈನಂದಿನ ಧ್ಯಾನ(Kannada) – 18.06.2025

 

ಯುದ್ಧವೀರನ ಕೈಯಲ್ಲಿರುವ ಅಂಬು!!

 

"ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ" - ಕೀರ್ತನೆ 127:4

 

ಪ್ರಸ್ತುತ IPL ಕ್ರಿಕೆಟ್ ಸೀಸೆನ್ ನಡೆಯುತ್ತಿದೆ. ಈ ಪಂದ್ಯಗಳಲ್ಲಿ ಒಂದರಲ್ಲಿ, ರಾಜಸ್ಥಾನ ರಾಯಲ್ಸ್ ತಂಡದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಅಂದರೆ, ಅವರು 14 ನೇ ವಯಸ್ಸಿನಲ್ಲಿ IPL ತಂಡದಲ್ಲಿ ಸೇರ್ಪಡೆಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಮತ್ತು ಆ ನಿರ್ದಿಷ್ಟ ಪಂದ್ಯದಲ್ಲಿ, ಅವರು ಕೇವಲ 38 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಅವರು ಕೇವಲ 14 ವರ್ಷ, 23 ದಿನಗಳ ಅತ್ಯಂತ ಕಿರಿಯ ಆಟಗಾರ ಎಂಬುದು ಗಮನಾರ್ಹ. ತಂಡದ ಸದಸ್ಯರು ಮಾತ್ರವಲ್ಲದೆ ಇಡೀ IPL ತಂಡ ಮತ್ತು ದೊಡ್ಡ ದೊಡ್ಡ ಕ್ರಿಕೆಟ್ ಮಹಾನ್ ಗಳು ಯುವ ಆಟಗಾರನನ್ನು ಹೊಗಳಿ ಕೊಂಡಾಡಿದರು. ಅವರ ತವರು ರಾಜ್ಯವಾದ ಬಿಹಾರ ಸರ್ಕಾರವು ಅವರಿಗೆ ಬಹುಮಾನ ಮತ್ತು ಗೌರವವನ್ನು ನೀಡಿತು. ಸ್ಥಳೀಯ ಪಂದ್ಯಗಳಲ್ಲಿ ವೈಭವ್ ಉತ್ತಮವಾಗಿ ಆಡಿದರೂ, ರಾಜಸ್ಥಾನ್ ರಾಯಲ್ಸ್ ತಂಡವು ಅಂತಹ ಯುವ ಆಟಗಾರನನ್ನು ಮೈದಾನಕ್ಕೆ ಇಳಿಸಿದ್ದಕ್ಕಾಗಿ, ಅದರಲ್ಲೂ ತಂಡದ ಮೊದಲ ಆಟಗಾರನಾಗಿ, ಅಂದರೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಎಲ್ಲಾ ಕಡೆಯಿಂದ ಪ್ರಶಂಸೆಗೆ ಪಾತ್ರವಾಯಿತು.

 

ಪರಿಶುದ್ಧ ಗ್ರಂಥವು ಯೌವನಸ್ಥರನ್ನು ಬಹಳ ಸುಂದರವಾಗಿ ಚಿತ್ರಿಸುತ್ತಿದೆ. ಈ ಯುಗದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಿಗೆ ಸಮಾನರಾಗಿದ್ದಾರೆ ಎಂದು ಹೇಳಲ್ಪಟ್ಟಿದೆ. ಆದ್ದರಿಂದ, ಅವರ ವೈಫಲ್ಯಗಳ ಬಗ್ಗೆ ಹೇಳಿ ಅವರ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಬದಲು, ಅವರಲ್ಲಿರುವ ಉತ್ತಮ ಪ್ರತಿಭೆಗಳನ್ನು ಯೇಸುವಿಗಾಗಿ ಹೊರತರುವುದು ಮತ್ತು ಯುದ್ಧವೀರನ ಕೈಯಲ್ಲಿರುವ ಅಂಬುಗಳಾಗಿ ಪರಿವರ್ತಿಸುವುದು ನಮ್ಮ ಕೆಲಸವಾಗಲಿ.

 

ಪ್ರಿಯರೇ! ಇಂದು, ನಮಗೆ ಯೌವನಸ್ಥರನ್ನು ಪ್ರೋತ್ಸಾಹಿಸುವ ನಾಯಕರು ಬೇಕು. ನಾವು ಅವರ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕಂತೆ ಅವರನ್ನು ಪ್ರೋತ್ಸಾಹಿಸಬೇಕು. ಕ್ರೈಸ್ತ ಸಮುದಾಯದಲ್ಲಿ ಇದನ್ನು ಮಾಡದ ಕಾರಣ, ಇಂದು ಅನೇಕ ಯೌವನಸ್ಥರ ಪ್ರತಿಭೆಗಳು ಅನೇಕ ಸಂಸ್ಥೆಗಳು ಮತ್ತು ಮಾಲೀಕರ ಪ್ರಗತಿಗಾಗಿ ಬಿಟ್ಟುಕೊಟ್ಟು ಬಿಟ್ಟಿದ್ದೇವೆ. ಆದ್ದರಿಂದ, ಸಭೆಗಳು ಮತ್ತು ಸಂಸ್ಥೆಗಳು ಯೌವನಸ್ಥರನ್ನು ಸರಿಯಾದ ದಿಕ್ಕಿನಲ್ಲಿ ತಂದರೆ, ಅವರು ಯುದ್ಧವೀರನ ಕೈಯಲ್ಲಿರುವ ಅಂಬುಗಳಾಗುವುದು ಮಾತ್ರವಲ್ಲದೆ ಯೇಸುವಿಗಾಗಿ ದೇಶವನ್ನು ಅಲುಗಾಡಿಸುವವರಾಗಿಯೂ ಮಾರ್ಪಡಬಹುದು. ಆಮೆನ್!

- T. ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಪ್ರತಿ ಜಿಲ್ಲೆಯಲ್ಲೂ 300 ಗಿದ್ಯೋನ್‌ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al