Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.06.2025
Share:

By Village Missionary Movement

Tuesday, 17-Jun-2025

ಧೈನಂದಿನ ಧ್ಯಾನ(Kannada) – 17.06.2025

 

ದೇವರು ಹುಡುಕುತ್ತಿರುವ ಜನರು

 

"...ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ..." - ಯಾಕೋಬ 4:6

 

ಪ್ರತಿ ಭಾನುವಾರ ಸಂಜೆ 6 ಗಂಟೆಗೆಲ್ಲ, ಮಸುಕಾದ ಜೀನ್ಸ್ ಪ್ಯಾಂಟ್, ಹಳೆಯ ಟಿ-ಶರ್ಟ್ ಮತ್ತು ಸಾಧಾರಣ ಚಪ್ಪಲಿ ಹಾಕಿಕೊಂಡಿರುವ ಒಂದು ಮಹಿಳೆ, ಚರ್ಚ್‌ನಲ್ಲಿರುವ ಎಲ್ಲಾ ಕುರ್ಚಿಗಳನ್ನು ಒರೆಸಿ, ವೇದಿಕೆಯ ಮೇಲಿರುವ ಎಲ್ಲಾ ಹೂವುಗಳನ್ನು ಜೋಡಿಸುತ್ತಿದ್ದರು. ಇವರು ಕಳೆದ 6 ವರ್ಷಗಳಿಂದ ಪ್ರತಿ ವಾರ ಇದನ್ನು ಮಾಡುತ್ತಿದ್ದಾರೆ.

 

ಒಂದು ದಿನ, ಆ ಆಲಯಕ್ಕೆ ಉತ್ತಮವಾದ ವಸ್ತ್ರಗಳನ್ನು ಧರಿಸಿದ ಯುವಕನೊಬ್ಬ ಬೆಂಜ್ ಕಾರಿನಲ್ಲಿ ಸ್ವಲ್ಪ ಬೇಗನೆ ಬಂದಿದ್ದರು. ಅವರು ಕುರ್ಚಿಯ ಮೇಲೆ ಕುಳಿತು ಈ ಮಹಿಳೆ ಮಾಡುತ್ತಿರುವ ಎಲ್ಲಾ ಕೆಲಸಗಳನ್ನು ನೋಡುತ್ತಿದ್ದರು. ಅವಳು ತನ್ನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗದೆ ಕೂಲಿ ಕೆಲಸ ಮಾಡುತ್ತಿರಬಹುದು ಎಂದು ಭಾವಿಸಿ, ಅವಳಿಗೆ ಏನಾದರೂ ಸಹಾಯ ಮಾಡಲು ನಿರ್ಧರಿಸಿ ಕಾರಿನಿಂದ 100 ಡಾಲರ್‌ಗಳನ್ನು ತೆಗೆದುಕೊಂಡು ಬಂದು ಅವಳು ಮಾಡಿದ ಕೆಲಸಗಳನ್ನು ಮೆಚ್ಚಿಕೊಂಡು 100 ಡಾಲರ್‌ಗಳನ್ನು ನೀಡಲು ಪ್ರಯತ್ನಿಸಿದರು, ಆದರೆ ಆಕೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರು. ದಯವಿಟ್ಟು ಇದನ್ನು ತೆಗೆದುಕೊಳ್ಳಿ ಎಂದು ಒತ್ತಾಯಿಸಿದರೂ, ಆಕೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರು. ನನ್ನ ಕಾರಿನಲ್ಲಿ ನಿಮ್ಮನ್ನು ಮನೆಗೆ ಕರೆದೊಯ್ಯುತ್ತೇನೆ ಬನ್ನಿ ಎಂದರು. ತಕ್ಷಣ ಆಕೆ ನಾನು ನನ್ನ ಕಾರಿನಲ್ಲಿ ಹೋಗುತ್ತೇನೆ ಎಂದು ಹೇಳಿ ತಮ್ಮ BMW ಕಾರಿನಿಂದ ಒಂದು ವಿಸಿಟಿಂಗ್ ಕಾರ್ಡ್ ನೀಡಿದರು. ಆ ಕಾರ್ಡ್ ನೋಡಿದಾಗ ಅವರು ದಿಗ್ಭ್ರಮೆಗೊಂಡರು. ಏಕೆಂದರೆ ಆ ನಗರದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ತಿಳಿದುಕೊಂಡರು. ಏನೂ ಇಲ್ಲದಿದ್ದರೂ ತಮ್ಮನ್ನು ತಾವು ಶ್ರೀಮಂತರೆಂದು ಲೋಕಕ್ಕೆ ತೋರಿಸಿಕೊಳ್ಳುವ ಜನರಿದ್ದಾರೆ. ಆದರೆ ಬಹಳ ಶ್ರೀಮಂತ ಜೀವನದ ನಡುವೆ ತಮ್ಮನ್ನು ತಗ್ಗಿಸಿಕೊಳ್ಳುವ ಮತ್ತು ಹೆಮ್ಮೆಯ ಬಲೆಗೆ ಬೀಳದಂತೆ ಮರೆಮಾಡಿಕೊಳ್ಳುವ ಕೆಲವರು ಇದ್ದಾರೆ. ಏನೇ ಇರಲಿ, ಹೆಸರು, ಖ್ಯಾತಿ ಮತ್ತು ವೈಭವದ ಹಿಂದೆ ಓಡುತ್ತಿರುವ ಜಗತ್ತಿನಲ್ಲಿ ನಾವು ನಮ್ಮನ್ನು ತಗ್ಗಿಸಿಕೊಳ್ಳೋಣ.

 

ಇದನ್ನು ಓದುತ್ತಿರುವ ಪ್ರಿಯರೇ, ಶೋಧಕನು ಯೇಸು ಕ್ರಿಸ್ತನ ಬಳಿಯೇ ಹೆಮ್ಮೆಯ ವಿಷಯಗಳನ್ನು ತೋರಿಸಿ ಶೋಧಿಸಿದನು. ನಂತರ ಯೇಸು, “ಸೈತಾನನೇ, ತೊಲಗು!” ಎಂದು ಓಡಿಸಿದರು! ಯೇಸು ಕ್ರಿಸ್ತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. (ಫಿಲಿಪ್ಪಿ. 2:8). ಈ ಶ್ರೀಮಂತ ಮಹಿಳೆ ತನ್ನನ್ನು ತಾನು ಮರೆಮಾಡಿಕೊಂಡು ತನ್ನನ್ನು ತಗ್ಗಿಸಿಕೊಂಡು ಕಾರ್ಯ ಮಾಡಿದಂತೆಯೇ, ನಾವು ಸಹ ತಾಳ್ಮೆಯಿಂದ ವರ್ತಿಸಬೇಕು. ನಾವು ಏನು ಮಾಡಿದರೂ ಅದನ್ನು ಕರ್ತನಿಗಾಗಿಯೇ ಎಂದು ಮಾಡೋಣ. ಆಗ ನಾವು ಈ ಲೋಕದಲ್ಲಿ ಮತ್ತು ಬರಲಿರುವ ಲೋಕದಲ್ಲಿ ಕರ್ತನಿಂದ ಪ್ರತಿಫಲವನ್ನು ಪಡೆಯುತ್ತೇವೆ. ಆಮೆನ್.

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

1000 ಮಿಷನರಿಗಳನ್ನು ಬೆಂಬಲಿಸಲು 1000 ಪ್ರಾರ್ಥನಾ ಗುಂಪುಗಳನ್ನು ಸ್ಥಾಪಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin