Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.06.2025
Share:

By Village Missionary Movement

Friday, 13-Jun-2025

ಧೈನಂದಿನ ಧ್ಯಾನ(Kannada) – 13.06.2025

 

ವಿನಾಶಕ್ಕೆ ಮೊದಲು ಹೆಮ್ಮೆ

 

"ಆತನು ನಮ್ಮ ಮೇಲೆ ಅತಿಶಯವಾದ ಕೃಪೆಯನ್ನು ಇಡುತ್ತಾನೆ. ಆದುದರಿಂದ - ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ,..." - ಯಾಕೋಬ 4:6

 

ನಮ್ಮನ್ನು ಸೃಷ್ಟಿಸಿ ನಮ್ಮೊಂದಿಗೆ ವಾಸಿಸುತ್ತಿರುವ ದೇವರು ನಮಗೆ ಉತ್ತಮ ಪ್ರತಿಭೆಗಳು, ಸಾಮರ್ಥ್ಯಗಳು, ಸ್ಮರಣಶಕ್ತಿ ಮತ್ತು ಕಲಿಕಾ ಸಾಮರ್ಥ್ಯಗಳನ್ನು ದಯೆಯಿಂದ ನೀಡಿದ್ದಾರೆ. ನಾವು ಇವುಗಳಿಗಾಗಿ ಕೃತಜ್ಞತೆಯ ಹೃದಯದಿಂದ ತಾಳ್ಮೆಯಿಂದ ಕಾಣಲ್ಪಡಬೇಕೆಂದು ದೇವರು ಬಯಸುತ್ತಿದ್ದಾರೆ. ಬೈಬಲ್ ಕಾಲೇಜಿನ ಎರಡನೇ ವರ್ಷದಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿಯು ತುಂಬಾ ಪ್ರತಿಭಾನ್ವಿತನಾಗಿಯೂ, ವಚನಗಳನ್ನು ಸುಲಭವಾಗಿ ಕಂಠಪಾಠ ಮಾಡಿ, ಚೆನ್ನಾಗಿ ಬೋಧಿಸುವ ಸಾಮರ್ಥ್ಯವನ್ನು ಹೊಂದಿದ್ದನು. ಮೂರನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅವನಿಂದ ಕೆಲವು ಪ್ರಸಂಗದ ಟಿಪ್ಪಣಿಗಳನ್ನು ಕೇಳುತ್ತಿದ್ದರು. ಆದ್ದರಿಂದ, ಯಾವಾಗಲೂ ಬಹಳ ಹೆಮ್ಮೆ ಮತ್ತು ದುರಹಂಕಾರದಿಂದ ವರ್ತಿಸುತ್ತಿದ್ದನು. ಅವನು ಚೆನ್ನಾಗಿ ಓದುತ್ತಿದ್ದದರಿಂದ ಪರೀಕ್ಷೆಗಳಿಗೆ ಹೆದರುತ್ತಿರಲಿಲ್ಲ. ತನಗೇ ಎಲ್ಲಾ ಗೊತ್ತು, ಎಂದು ಕಲಿಕಾ ಸಾಮರ್ಥ್ಯದ ಕೊರತೆಯಿರುವವರನ್ನು ಗೇಲಿ ಮಾಡುತ್ತಿದ್ದನು. ತಾನೇ ಎಲ್ಲದರಲ್ಲೂ ಮೊದಲಿಗನೆಂದು ಹೆಮ್ಮೆ ಮತ್ತು ದುರಹಂಕಾರದಿಂದ ಕಾಣುತ್ತಿದ್ದನು.

 

ಎರಡನೇ ವರ್ಷದ ಅಂತಿಮ ಪರೀಕ್ಷೆ ಬಂದಿತು. ಉತ್ತರ ಪತ್ರಿಕೆಯಲ್ಲಿ ಬರೆಯಲು ಅವನು ಪೆನ್ನು ಕೈಯಲ್ಲಿ ಹಿಡಿದಾಗ, ಅವನ ಕೈ ನಡುಗಿತು. ಅವನು ಎಷ್ಟೇ ಪ್ರಯತ್ನಿಸಿದರೂ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಅವನು ತನ್ನ ಸಹಪಾಠಿಗಳು ಮತ್ತು ಶಿಕ್ಷಕರನ್ನು ಭಯದಿಂದ ನೋಡಿದಾಗ, ಎಲ್ಲರೂ ಆಘಾತಕ್ಕೊಳಗಾದರು. ನಂತರದ ಪರೀಕ್ಷೆಗಳನ್ನು ಸಹ ಬರೆಯಲು ಸಾಧ್ಯವಾಗಲಿಲ್ಲ. ಅವನು ಚಿಂತಿಸುತ್ತಾ ಅತ್ತನು. ತನಗೆ ಏಕೆ ಈ ಪರಿಸ್ಥಿತಿ ಎಂದು ಯೋಚಿಸಿದಾಗ, ದೇವರು ಅವನಿಗೆ ತನ್ನ ಹೆಮ್ಮೆಯನ್ನು ಪ್ರೇರೇಪಿಸಿದರು. ಅವನು ತನ್ನ ತಪ್ಪುಗಳನ್ನು ಅರಿತುಕೊಂಡನು. ದೇವರ ಮುಂದೆ ತನ್ನನ್ನು ಸಂಪೂರ್ಣವಾಗಿ ತಗ್ಗಿಸಿಕೊಂಡು ಕಣ್ಣೀರಿನಿಂದ ಪ್ರಾರ್ಥಿಸಿದನು. "ನಾನು ಏನೂ ಅಲ್ಲ, ಎಲ್ಲವೂ ನೀವು ಕೊಟ್ಟಿದ್ದೇ. ನನಗೆ ಎಲ್ಲವನ್ನೂ ಅನುಗ್ರಹಿಸುವವರು ನೀವೇ ಯೇಸುವೇ" ಎಂದು ಮನುಮರುಗಿ ಅತ್ತು, ಕ್ಷಮೆಯನ್ನು ಪಡೆದನು. ಮುಂದಿನ ಬಾರಿ ಅವನು ಎಲ್ಲಾ ಪರೀಕ್ಷೆಗಳನ್ನು ಬರೆದು ಕಾಲೇಜು ಅಧ್ಯಯನವನ್ನು ಪೂರ್ಣಗೊಳಿಸಿದನು. 

 

ಹೌದು, ನನಗೆ ಪ್ರಿಯವಾದವರೇ, ದೇವರು ತಾಳ್ಮೆಯುಳ್ಳವರಿಗೆ ಕೃಪೆಯನ್ನು ಅನುಗ್ರಹಿಸುತ್ತಾರೆ. ದೇವರು ಹೆಮ್ಮೆಯನ್ನು ವಿರೋಧಿಸುತ್ತಾರೆ. ಇದನ್ನು ಅರಿತುಕೊಂಡು, ನಮ್ಮಲ್ಲಿ ಕಂಡುಬರುವ ವ್ಯರ್ಥ ಹೆಮ್ಮೆಯನ್ನು ತ್ಯಜಿಸೋಣ ದೇವರ ಬಳಿಯೂ, ನಮ್ಮ ಸಹವರ್ತಿಗಳ ಬಳಿಯೂ ತಾಳ್ಮೆಯಿಂದ ನಡೆದು ದೇವರನ್ನು ಮಹಿಮೆಪಡಿಸೋಣ!

- Mrs ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯದ ಸೇವಕರು ಮಾಡುವ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet