By Village Missionary Movement
Saturday, 07-Jun-2025ಧೈನಂದಿನ ಧ್ಯಾನ(Kannada) – 07.06.2025
ಕೋಪವನ್ನು ತ್ಯಜಿಸಿಬಿಡು
"ನನ್ನ ಪ್ರಿಯ ಸಹೋದರರೇ,... ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ" - ಯಾಕೋಬ 1:19
ಒಬ್ಬ ತಂದೆ ತನ್ನ ಹೊಸ ಕಾರನ್ನು ಸ್ವಚ್ಛಗೊಳಿಸುತ್ತಿದ್ದರು. ಆ ಸಮಯದಲ್ಲಿ, ಅವರ ಮೂರು ವರ್ಷದ ಮಗಳು ಕಾರಿನ ಬಳಿ ನಿಂತು ಕಾರನ್ನು ಸ್ವಚ್ಛಗೊಳಿಸುವ ಹಾಗೆ ಆಟವಾಡುತ್ತಿದ್ದಳು. ಸ್ವಲ್ಪ ಸಮಯದ ನಂತರ, ಅವಳು ಒಂದು ಸಣ್ಣ ಕಲ್ಲನ್ನು ಎತ್ತಿಕೊಂಡು ಕಾರಿನ ಮೇಲೆ ಏನನ್ನೋ ಗೀಚಿಬಿಟ್ಟಳು. ಇದನ್ನು ನೋಡಿ, ತಂದೆ ಕೋಪಗೊಂಡು ಹತ್ತಿರದಲ್ಲಿ ಬಿದ್ದಿದ್ದ ಕೋಲನ್ನು ತೆಗೆದುಕೊಂಡು ಮಗುವಿನ ಕೈಗೆ ತುಂಬಾ ಬಲವಾಗಿ ಹೊಡೆದರು. ಮಗುವಿಗೆ ತುಂಬಾ ನೋವಾಯಿತು. ಕೈಯಲ್ಲಿ ರಕ್ತ ಹೆಚ್ಚಾಗಿ ಹರಿಯುತ್ತಿತ್ತು, ತುಂಬಾ ದುಃಖಗೊಂಡ ತಂದೆ ಮಗುವನ್ನು ವೈದ್ಯರ ಬಳಿಗೆ ಕರೆದೊಯ್ದು ನೋಡಿದಾಗ ಮಗುವಿನ ಕೈಯಲ್ಲಿ ಮೂಳೆ ಮುರಿದಿರುವುದು ಗೊತ್ತಾಯಿತು. ಅವರು ಹೃದಯ ವಿದ್ರಾವಕವಾಗಿ ಮಗುವನ್ನು ಕಣ್ಣೀರಿನಿಂದ ಅಪ್ಪಿಕೊಂಡು ಕ್ಷಮೆಯಾಚಿಸಿದರು. ಮಗು ತಕ್ಷಣ ತಂದೆಯನ್ನು ಕಾರಿಗೆ ಕರೆದೊಯ್ದು, "ಅಪ್ಪಾ, I Love you so much" ಎಂದು ಬರೆದಿದ್ದದ್ದನ್ನು ತೋರಿಸಿತು. ತಂದೆಯ ಹೃದಯ ಮುರಿದುಹೋಯಿತು. ಆತುರ ಮತ್ತು ಕೋಪದಲ್ಲಿ ಮಾಡಿದ ಕ್ರಿಯೆ ಹೇಗೆ ಕೊನೆಗೊಂಡಿತು ಎಂದು ಗೊತ್ತಾಯಿತಾ?
ಇಂದಿನ ವಾಕ್ಯಭಾಗದಲ್ಲಿ, ಆದಾಮ ಮತ್ತು ಹವ್ವಳ ಮಕ್ಕಳಾದ ಕಾಯಿನನು ಮತ್ತು ಹೇಬೆಲರ ಬಗ್ಗೆ ನಮಗೆ ಹೇಳಲಾಗಿದೆ. ಕಾಯಿನನು ಮತ್ತು ಹೇಬೆಲರು ದೇವರಿಗೆ ಕಾಣಿಕೆ ಅರ್ಪಿಸಲು ಬಂದರು. ಕಾಯಿನನು ಭೂಮಿಯ ಫಲಗಳಲ್ಲಿ ಕೆಲವನ್ನು ಕರ್ತನಿಗೆ ಕಾಣಿಕೆಯಾಗಿ ತಂದನು. ಹೇಬೆಲನು ತನ್ನ ಹಿಂಡಿನ ಚೊಚ್ಚಲು ಮರಿಗಳಲ್ಲಿ ಕೆಲವನ್ನು ಮತ್ತು ಅವುಗಳ ಕೊಬ್ಬನ್ನು ಸಹ ತಂದನು. ಕರ್ತನು ಕಾಯಿನನನ್ನೂ ಮತ್ತು ಅವನ ಕಾಣಿಕೆಯನ್ನೂ ಆಂಗೀಕರಿಸಲಿಲ್ಲ.
ದೇವರು ಹೇಬೆಲನನ್ನು ಮತ್ತು ಅವನ ಕಾಣಿಕೆಯನ್ನು ಅಂಗೀಕರಿಸಿದರು. ಕೂಡಲೇ ಕಾಯಿನನಿಗೆ ಬಹಳ ಕೋಪವುಂಟಾಗಿ, ಅವನ ಮುಖವು ಕಳೆಗುಂದಿತು. ಆಗ ಕರ್ತನು ಕಾಯಿನನಿಗೆ, "ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಎಂದು ಕೇಳಿದರು. ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವದು ಎಂದರು. ದೇವರು ಕಾಯಿನನನ್ನು ಶಪಿಸಿದರು. ಎಫೆಸ 4:26 ರಲ್ಲಿ, "ಕೋಪಮಾಡಬೇಕಾದರೂ ಪಾಪಮಾಡಬೇಡಿರಿ" ಎಂದು ಅಪೊಸ್ತಲನಾದ ಪೌಲನು ಹೇಳುತ್ತಾರೆ. ಅರಸನಾದ ಸೊಲೊಮೋನನು ಜ್ಞಾನೋಕ್ತಿಗಳಲ್ಲಿ ಕೋಪವು ನಿಷ್ಟೂರವಾದದ್ದು ಎಂದು ಎಚ್ಚರಿಸುತ್ತಾರೆ. ಐದು ನಿಮಿಷಗಳ ಕೋಪವು ಜೀವನವಿಡೀ ನಮ್ಮನ್ನು ದುಃಖಿಸುವಂತೆ ಮಾಡುತ್ತದೆ. ಆದ್ದರಿಂದ ಕಿವಿಗೊಡುವದರಲ್ಲಿ ತೀವ್ರವಾಗಿಯೂ, ಮಾತಾಡುವದರಲ್ಲಿ ನಿಧಾನವಾಗಿಯೂ, ಕೋಪಿಸುವದರಲ್ಲಿಯೂ ನಿಧಾನವಾಗಿಯೂ ಇರೋಣ. ದೇವರ ಆಶೀರ್ವಾದವನ್ನು ಪಡೆಯೋಣ.
- Mrs. ಶೀಲಾ ಜಾನ್
ಪ್ರಾರ್ಥನಾ ಅಂಶ:
ಮಹಿಳೆಯರಿಗಾಗಿ ಪ್ರಸಾರವಾಗುವ "ಇನಿಯವಳೇ" ಎಂಬ ಕಾರ್ಯಕ್ರಮದ ಮೂಲಕ ಕ್ರಿಸ್ತನಿಗಾಗಿ ಸ್ತ್ರೀಯರು ಬಲವಾಗಿ ಕಾರ್ಯಮಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482