Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.06.2025
Share:

By Village Missionary Movement

Friday, 06-Jun-2025

ಧೈನಂದಿನ ಧ್ಯಾನ(Kannada) – 06.06.2025

 

ಇಬ್ಬರು ಸ್ನೇಹಿತರು

 

"ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ" - ಯೋಹಾನ 15:13

 

ಗಡಿ ಯುದ್ಧದ ಸಮಯದಲ್ಲಿ ಇಬ್ಬರು ಸ್ನೇಹಿತರು ಯುದ್ಧಭೂಮಿಯಲ್ಲಿದ್ದರು. ಶತ್ರು ಸೈನ್ಯವು ದಾಳಿ ಮಾಡಿದಾಗ, ಅವರಲ್ಲಿ ಒಬ್ಬ ಸ್ನೇಹಿತನಿಗೆ ಅನಿರೀಕ್ಷಿತವಾಗಿ ಗುಂಡು ತಗುಲಿ ಸಾಯುವ ಹಂತದಲ್ಲಿದ್ದನು. ಅವನ ಸ್ನೇಹಿತ ದೂರದಿಂದ ಇದನ್ನು ನೋಡಿ, ತನ್ನ ಸ್ನೇಹಿತನನ್ನು ರಕ್ಷಿಸಲು ಓಡಿಹೋದನು ಆಗ ಅಲ್ಲಿದ್ದ ಅಧಿಕಾರಿಗೆ ನಡೆದದ್ದನ್ನು ಹೇಳಿದನು. ಅವನು ತನ್ನ ಸ್ನೇಹಿತ ಮಲಗಿದ್ದ ಸ್ಥಳಕ್ಕೆ ಹೋಗಲು ಪ್ರಯತ್ನಿಸಿದಾಗ, ಅವನ ಮೇಲಧಿಕಾರಿ ಅವನನ್ನು ತಡೆದರು. ಆದರೆ ಅವನು ತನ್ನ ಜೀವವನ್ನು ಲೆಕ್ಕಿಸದೆ, ಯುದ್ಧ ನಡೆಯುತ್ತಿದ್ದರೂ, "ಸ್ನೇಹಿತನೇ! ನಾನು ನಿನ್ನನ್ನು ರಕ್ಷಿಸಲು ಬರುತ್ತಿದ್ದೇನೆ" ಎಂದು ಹೇಳುತ್ತಲೇ ಓಡಿದನು. ಅವನು ಸಾಯಲಿರುವ ತನ್ನ ಸ್ನೇಹಿತನನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ವೇಗವಾಗಿ ಹೋದನು. ಮೇಲಧಿಕಾರಿ ಇದನ್ನು ನೋಡಿ, "ನಿನ್ನ ಪ್ರಾಣ ಸ್ನೇಹಿತ ಸತ್ತುಹೋದ" ಎಂದು ಹೇಳಿದ ಕೂಡಲೇ, ಅದಕ್ಕೆ ಅವನು ನನ್ನ ಮಡಿಲಲ್ಲೇ ನನ್ನ ಸ್ನೇಹಿತನ ಪ್ರಾಣ ಹೋಯಿತು ಎಂದನು. ತನ್ನ ಸ್ನೇಹಿತನನ್ನು ತಾನು ಸಾಯುತ್ತೇನೆಂದು ತಿಳಿದಿದ್ದರೂ ಉಳಿಸಲು ಪ್ರಯತ್ನಿಸಿದ ಆ ಸ್ನೇಹಿತನ ವಾತ್ಸಲ್ಯ ಎಷ್ಟು ಕೋಮಲವಾಗಿತ್ತು. 

 

ಪ್ರೀತಿ ಎಷ್ಟು ಅಮೂಲ್ಯವಾದದ್ದು. ಆ ಪ್ರೀತಿಯನ್ನು ಬಹಿರಂಗಪಡಿಸಿದವರು ದೇವರೇ. ಈ ಲೋಕದಲ್ಲಿ ವಾಸಿಸುವ ನಮಗೆ ನಮ್ಮ ಜೀವನದ ಕೊನೆಯವರೆಗೂ ಸ್ನೇಹಿತರು ಬೇಕು. ಅದಕ್ಕಾಗಿಯೇ "ನೀವು ಸತ್ತಾಗ, ನಿಮ್ಮ ನಿತ್ಯವಾದ ಮನೆಗಳಲ್ಲಿ ನಿಮ್ಮನ್ನು ಸ್ವೀಕರಿಸುವವರು ಇರುವಂತೆ, ಅನ್ಯಾಯದ ಸಂಪತ್ತಿನಿಂದ ನಿಮಗಾಗಿ ಸ್ನೇಹಿತರನ್ನು ಮಾಡಿಕೊಳ್ಳಿ" ಎಂದು ಸತ್ಯವೇದವು ಸಹ ಹೇಳುತ್ತಿದೆ. ಒಳ್ಳೆಯ ಸ್ನೇಹಿತರು ಎಂದರೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರು, ಬಿಟ್ಟುಕೊಡುವ ಮೂಲಕ ಬದುಕಬಲ್ಲವರು. ಅವರು ಯಾವಾಗಲೂ ಪರಸ್ಪರ ಮಧ್ಯಸ್ಥಿಕೆ ವಹಿಸುವ ಮೂಲಕ ಏಕತೆಯಿಂದ ಬದುಕುತ್ತಾರೆ. ಸ್ನೇಹಿತರನ್ನು ಕಂಡುಹಿಡಿಯುವುದು ಸುಲಭ. ಆದರೆ ಒಳ್ಳೆಯ ಸ್ನೇಹಿತರನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಆದರೆ ಯಾವಾಗಲೂ ನಮ್ಮ ಆತ್ಮೀಯ ಸ್ನೇಹಿತನಾಗಿರುವವರು ಯೇಸು ಮಾತ್ರವೇ. ನಮ್ಮನ್ನು ರಕ್ಷಿಸಲು ಅವರು ನಮಗಾಗಿ ಶಿಲುಬೆಯ ಮೇಲೆ ತನ್ನ ಕೊನೆಯ ಹನಿ ರಕ್ತವನ್ನು ಸಹ ಸುರಿಸಿಬಿಟ್ಟರು. ಯೇಸು ನಿನ್ನೆ, ಇಂದು ಮತ್ತು ಎಂದೆಂದಿಗೂ ನಮ್ಮೊಂದಿಗಿದ್ದಾರೆ.

 

ಆದ್ದರಿಂದ, ದೇವರು ನಮ್ಮನ್ನು ಪ್ರೀತಿಸಿ ನಮ್ಮ ಮೇಲೆ ಪ್ರೀತಿಯಿಂದ ಇರುವ ಹಾಗೆಯೇ, ನಾವು ಸಹ ಇತರರೊಂದಿಗೆ ಪ್ರೀತಿಯಿಂದ ಇರೋಣ. ಅನೇಕ ಸ್ನೇಹಿತರನ್ನು ಸಂಪಾದಿಸಿಕೊಳ್ಳೋಣ. ಸಂತೋಷದಿಂದ ಬದುಕೋಣ.

- P. ಪಾಲ್ ಜೆಬಸ್ಟಿನ್ ರಾಜ್

 

ಪ್ರಾರ್ಥನಾ ಅಂಶ:

ಟ್ಯೂಷನ್ ಸೆಂಟರ್ ಗೆ ಬರುವ ಮಕ್ಕಳು ಬುದ್ಧಿವಂತಿಕೆ ಮತ್ತು ದೇವರ ಜ್ಞಾನದಿಂದ ತುಂಬಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş