Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.06.2025
Share:

By Village Missionary Movement

Monday, 02-Jun-2025

ಧೈನಂದಿನ ಧ್ಯಾನ(Kannada) – 02.06.2025

 

ನಿಮ್ಮೊಂದಿಗೆ ಇರುವುದೇ

 

"ಆಗ ಆತನೊಂದಿಗೆ ಬೆಳೆದ ವನಂತೆ ಆತನ ಹತ್ತಿರ ಇದ್ದೆನು; ದಿನಾಲು ನಾನು ಆತನ ಆನಂದವಾಗಿ ಆತನ ಮುಂದೆ ಯಾವಾಗಲೂ ಸಂತೋಷಿಸುತ್ತಿದ್ದೆನು" - ಜ್ಞಾನೋ. 8:30

 

ಪ್ರಿಯ ಶಿಕ್ಷಕರೇ ಮತ್ತು ವಿದ್ಯಾರ್ಥಿಗಳೇ, ಈ ಶೈಕ್ಷಣಿಕ ವರ್ಷಕ್ಕಾಗಿ ನಾನು ನಿಮ್ಮೆಲ್ಲರನ್ನು ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಆಶೀರ್ವದಿಸುತ್ತೇನೆ. ಈ ವರ್ಷ ನಿಮಗೆ ಸಂತೋಷ, ಬೆಳವಣಿಗೆ ಮತ್ತು ಒಳ್ಳೆಯತನವನ್ನು ತರಲಿ. 

 

ಈ ಹೊಸ ಶೈಕ್ಷಣಿಕ ವರ್ಷದಲ್ಲಿ, ಮೊದಲು ಪ್ರತಿದಿನ ದೇವರಿಗೆ ಪ್ರತ್ಯೇಕವಾಗಿ ಸಮಯವನ್ನು ನೀಡಿ. ನಿಮ್ಮ ಪರಿಸ್ಥಿತಿಗೆ ಸೂಕ್ತವಾದಂತೆ ಬೆಳಿಗ್ಗೆ, ಸಂಜೆ ಅಥವಾ ರಾತ್ರಿ ದೇವರೊಂದಿಗೆ ನಿರ್ದಿಷ್ಟ ಸಮಯವನ್ನು ಕಳೆಯಿರಿ. ನಾವು ಪ್ರತಿದಿನ ಬೆಳಿಗ್ಗೆ ಪ್ರಾರ್ಥಿಸಿ ದೇವರ ಕೃಪೆಯನ್ನು ಪಡೆಯುತ್ತಿದ್ದೇವಲ್ಲವೇ? ಅದೇ ರೀತಿ, "ಪಡೆಯುವುದಕ್ಕಿಂತ ಕೊಡುವುದು ಹೆಚ್ಚು ಧನ್ಯ" ಎಂಬ ಮಾತಿಗೆ ಅನುಗುಣವಾಗಿ, ನಮ್ಮ ಸಮಯವನ್ನು ದೇವರಿಗೆ ನೀಡುವ 'ಹನೋಕ್' ಆಗಿ ಮಾರ್ಪಡೋಣ. ನಾವು ದೇವರಿಗಾಗಿ ಸಮಯವನ್ನು ಮೀಸಲಿಟ್ಟಾಗ, ನಮ್ಮ ದಿನದಲ್ಲಿ ನಾವು ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು ನಮಗೆ ಅಗತ್ಯವಿರುವ ಧೈರ್ಯ ಮತ್ತು ಸಹಾಯವನ್ನು ಆತನು ಕೃಪೆಯಾಗಿ ನೀಡುತ್ತಾರೆ. ಮತ್ತು ನಾವು ಯಾರಿಗಾಗಿ ಪ್ರಾರ್ಥಿಸುತ್ತೇವೆಯೋ ಅವರಿಗೆ ಒಳ್ಳೆಯ ಕಾರ್ಯಗಳನ್ನು ಸಹ ನೀಡುತ್ತಾರೆ. 

 

ಕರ್ತನು, ತನ್ನ ಮಕ್ಕಳು ತನಗೆ ವಿಧೇಯರಾಗಬೇಕೆಂದು ಮತ್ತು ತನ್ನ ಯೋಜನೆ ಹಾಗೂ ಚಿತ್ತವನ್ನು ಪೂರೈಸಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸಬೇಕು (1 ಪೂರ್ವಕಾಲವೃತ್ತಾಂತ 28:9) ಎಂದೇ ಬಯಸುತ್ತಿದ್ದಾರೆ. ಬಹಳಷ್ಟು ಓದಬೇಕಾಗಿದೆ, tution, project ಎಂದು ಬಹಳ ಕೆಲಸಗಳಿವೆ, ಹೇಗೆ ನಾನು ದೇವರಿಗೆ ಸಮಯ ಕೊಡಲು ಸಾಧ್ಯ ಎಂದು ವಿದ್ಯಾರ್ಥಿಗಳು ನೆನೆಸುವುದುಂಟು. ಕೆಲಸಕ್ಕೆ ಹೋಗುವುದು, ಮನೆಕೆಲಸಗಳನ್ನು ಮಾಡುವುದು ಮತ್ತು ಶಾಲಾ ಕೆಲಸಗಳು ಹೆಚ್ಚುತ್ತಿವೆ, ದೇವರಿಗೆ ಸಮಯವನ್ನು ಹೇಗೆ ನೀಡಲು ಸಾಧ್ಯ ಎಂದು ಶಿಕ್ಷಕರು

ಆಗಾಗ್ಗೆ ಚಿಂತಿಸುತ್ತಾರೆ. ನಿರುತ್ಸಾಹಗೊಳ್ಳಬೇಡಿ. 

 

ನೀವು ಆತನಿಗಾಗಿ ಒಂದು ಹೆಜ್ಜೆ ಮುಂದಿಟ್ಟರೆ, ಕರ್ತನು ನಿಮಗೆ ಸಹಾಯ ಮಾಡುತ್ತಾರೆ. ನೀವು ಅಂತಹ ನಿರ್ಧಾರವನ್ನು ಮಾಡಿದಾಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ನಿಮ್ಮನ್ನು ಅಪಹಾಸ್ಯ ಮಾಡಬಹುದು. ನಿರುತ್ಸಾಹಗೊಳ್ಳಬೇಡಿ. ನೀವು ನಿಮ್ಮ ಸಮಯವನ್ನು ದೇವರಿಗೆ ನೀಡಿದಾಗ, ನೀವು ದೇವರ ಕೃಪೆ ಮತ್ತು ಸಂತೋಷವನ್ನು ಸಂಪೂರ್ಣವಾಗಿ ಅನುಭವಿಸುವಿರಿ. ಆತ್ಮವು ನಮಗೆ ಬುದ್ಧಿವಂತಿಕೆ, ತಿಳುವಳಿಕೆ, ಸಲಹೆ, ಶಕ್ತಿ, ಕೃಪೆಯ ಆತ್ಮ ಮತ್ತು ಜ್ಞಾನವನ್ನು ನೀಡುತ್ತದೆ. ಕರ್ತನ ಕೃಪೆಯು ನಿಮ್ಮೊಂದಿಗೆ ಇರಲಿ! ಆಮೆನ್.

- Rev. ಎಲಿಜಬೆತ್

 

ಪ್ರಾರ್ಥನಾ ಅಂಶ:

ಈ ತಿಂಗಳು ಸೇವೆಗಳಿಗಾಗಿ ಮತ್ತು ಅವರ ಪ್ರಯಾಣದಲ್ಲಿ ಸೇವಕರ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al