Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.06.2025 (Kids Special)
Share:

By Village Missionary Movement

Sunday, 01-Jun-2025

ಧೈನಂದಿನ ಧ್ಯಾನ(Kannada) – 01.06.2025 (Kids Special)

 

ಪ್ರಯತ್ನಿಸು

 

“ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು" - ಕೀರ್ತ. 37:5

 

ಒಬ್ಬ ರಾಜನಿಗೆ ಎರಡು ಚಿಕ್ಕ ಗಿಳಿಗಳನ್ನು ಉಡುಗೊರೆಯಾಗಿ ನೀಡಲಾಯಿತು. ರಾಜನು ಅವುಗಳಿಗೆ ಹಾರಲು ಮತ್ತು ಮಾತನಾಡಲು ತರಬೇತಿ ನೀಡಲು ಹೇಳಿದರು. ಒಂದು ಗಿಳಿ ಚೆನ್ನಾಗಿ ಹಾರುವುದಲ್ಲದೆ, ಕೆಲವು ಮಾತುಗಳನ್ನು ಮಾತನಾಡಲು ಪ್ರಾರಂಭಿಸಿತು. ಏನು ಪುಟಾಣಿಗಳೇ! ನೀವು ಸಹ ಗಿಳಿಯನ್ನು ಸಾಕಿದ್ದೀರಾ? “ಹೇಳಿದ್ದನ್ನು ತಿರುಗಿಸಿ ಹೇಳುತ್ತೆ ಗಿಳಿಮರಿ” ಎಂದು ಹೇಳುತ್ತಾರೆ. ನಾವು ಏನು ಹೇಳಿದರೂ ಅದು ನಮ್ಮ ಮಾತನ್ನು ಕೇಳುತ್ತದೆ ಮತ್ತು ಅದನ್ನು ಪುನರಾವರ್ತಿಸುತ್ತದೆ ಎಂಬುದನ್ನು ನೋಡುವಾಗ ತುಂಬಾ ಸಂತೋಷವಾಗುತ್ತೆ ಅಲ್ವಾ! ನಾನು ಕೂಡ, ನಾನು ಚಿಕ್ಕ ಮಗುವಾಗಿದ್ದಾಗ, ನಮ್ಮ ಮನೆಯಲ್ಲಿ ಗಿಳಿಯನ್ನು ಸಾಕಿದೆ. ಸರಿ... ಸರಿ... ಇನ್ನೊಂದು ಗಿಳಿ ಏನಾಯಿತು ಅಂತ ತಾನೇ ಯೋಚುಸ್ತಾ ಇದ್ದೀರ. ಅದು ಮಾತನಾಡಲೇ ಇಲ್ಲ. ಒಂದು ಮರದ ಕೊಂಬೆಯ ಮೇಲೆ ಸುಮ್ಮನೆ ಕುಳಿತುಕೊಂಡೆ ಇತ್ತು, ಹಾರಲೂ ಇಲ್ಲ.

 

ರಾಜನು ಅದಕ್ಕೆ ದೊಡ್ಡ ದೊಡ್ಡ ಜ್ಞಾನಿಗಳ ಮೂಲಕ ತರಬೇತಿ ಕೊಟ್ಟು ನೋಡಿದರು. ಯಾವುದೇ ಪ್ರಯೋಜನವಾಗಲಿಲ್ಲ. ಇದನ್ನು ಕೇಳಿದ ರೈತನೊಬ್ಬ ರಾಜನಿಗೆ, ಆ ಗಿಣಿಯನ್ನು ಹಾರಿಸುತ್ತೇನೆಂದು ಹೇಳಿದರು. ಮರುದಿನ ಬೆಳಿಗ್ಗೆ, ರಾಜ ಎಚ್ಚರವಾದಾಗ, ಗಿಳಿ ಮರದ ಸುತ್ತಲೂ ಹಾರುತ್ತಿತ್ತು. ರಾಜನು ಸಂತೋಷದಿಂದ ಆಶ್ಚರ್ಯಚಕಿತನಾದನು. ಈ ಅದ್ಭುತವನ್ನು ಹೇಗೆ ಮಾಡಿದಿರಿ ಎಂದು ಕೇಳಿದಾಗ, ರೈತ ವಿನಮ್ರವಾಗಿ, ಅದು ಸುಲಭವಾದ ಕೆಲಸ ಅರಸರೇ! ನಾನು ಮರವನ್ನು ಹತ್ತಿ ಏನು ಮಾಡಿದೆ ಗೊತ್ತಾ? ಹಾರಲಾಗದ ಗಿಳಿ ಕುಳಿತಿದ್ದ ಕೊಂಬೆಯನ್ನು ಕತ್ತರಿಸಿಬಿಟ್ಟೆ. ತಾನು ಕೆಳಗೆ ಬೀಳಲಿದ್ದೇನೆಂದು ತಿಳಿದ ಕೂಡಲೇ, ಗಿಳಿ ಎಡವುತ್ತಾ ಎಡವುತ್ತಾ ಹಾರಲು ಪ್ರಾರಂಭಿಸಿತು ಎಂದರು. ರಾಜನು ರೈತನ ಕ್ರಿಯೆಯನ್ನು ಹೊಗಳಿ, ಅವರಿಗೆ ಬಹುಮಾನ ನೀಡಿ ಅರಮನೆಯಲ್ಲಿ ಕಾವಲುಗಾರನಾಗಿ ನೇಮಿಸಿದರು.

 

ಪ್ರೀತಿಯ ಪುಟ್ಟ ಮಕ್ಕಳೇ! ಈ ರೀತಿಯಾಗಿ, ಅನೇಕ ಬಾರಿ, ಆ ಹಾರಲಾಗದ ಗಿಣಿಯಂತೆ, ನಾವು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ, ದೇವರು ನಮಗೆ ನೀಡಿರುವ ಪ್ರತಿಭೆಯನ್ನು ಅರಿತುಕೊಳ್ಳದೇ, ನನ್ನಿಂದ ಸಾಧ್ಯವಿಲ್ಲ, ನನಗೆ ಭಯವಾಗುತ್ತಿದೆ ಎನ್ನುತ್ತಾ ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನೆ ಇದ್ದು ಬಿಡುತ್ತೇವೆ. ಪ್ರಯತ್ನವನ್ನು ಬಿಡದೇ ಸತತವಾಗಿ ಮುಂದುವರಿಯುತ್ತಿದ್ದರೆ, ನಾವು ಖಂಡಿತವಾಗಿಯೂ ಯಶಸ್ಸಿನ ಫಲವನ್ನು ಪಡೆಯುತ್ತೇವೆ ಪುಟಾಣಿಗಳೇ! ಯೇಸಪ್ಪನ ಮೇಲೆ ನಂಬಿಕೆ ಇಟ್ಟು, ನಿಮ್ಮ ಪ್ರತಿಭೆಯನ್ನು ಕಂಡುಹಿಡಿದು ಪ್ರಯತ್ನಿಸಿ ನೋಡಿ. ಅವರು ಕಾರ್ಯಗಳನ್ನು ಸಫಲವಾಗುವಂತೆ ಮಾಡುತ್ತಾರೆ. ಆಮೆನ್.

- Mrs ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş