Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.05.2025
Share:

By Village Missionary Movement

Friday, 30-May-2025

ಧೈನಂದಿನ ಧ್ಯಾನ(Kannada) – 30.05.2025

 

ಹರಕೆ ಮಾಡಿ ಪ್ರಾರ್ಥಿಸಿ

 

"ದೇವರೇ, ನೀನು ನನ್ನ ಹರಕೆಗಳಿಗೆ ಲಕ್ಷ್ಯಕೊಟ್ಟಿದ್ದೀ;..." - ಕೀರ್ತನೆ 61:5

 

ಕುಟುಂಬದ ಬಡತನದಿಂದಾಗಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ಕಾರ್ಲ್ ಬೇಕರ್ ಕೆಲಸಕ್ಕೆ ಸೇರಿದರು. ಅವರು ತಮ್ಮ ವಿಧವೆ ತಾಯಿ ಮತ್ತು ಅವಿವಾಹಿತ ಸಹೋದರಿಯನ್ನು ಕಾಪಾಡಲು ಒತ್ತಾಯಿಸಲ್ಪಟ್ಟರು. ಆದರೆ ಅವರು ಉನ್ನತ ಶಿಕ್ಷಣವನ್ನು ಕಲಿಯಲು ಬಯಸಿದ್ದರು. ಹಲವು ವರ್ಷಗಳ ನಂತರವೂ ಅವರು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲೇ ಇಲ್ಲ. ಆ ಸಮಯದಲ್ಲಿ, ಕಾರ್ಲ್ ಬೇಕರ್ "ನೀವು ನನ್ನನ್ನು ಓದಿಸಿದರೆ, ನಾನು ನಿಮ್ಮ ಸೇವೆಯನ್ನು ಮಾಡುತ್ತೇನೆ" ಎಂದು ಹರಕೆಯೊಂದಿಗೆ ದೇವರ ಬಳಿ ಪ್ರಾರ್ಥಿಸಿದರು. ಅವರು ಸಂಪಾದಿಸಿದ ಆದಾಯದಿಂದ ಸ್ವಲ್ಪ ಸ್ವಲ್ಪವಾಗಿ ಉಳಿಸಿ 100 ಡಾಲರ್‌ಗಳೊಂದಿಗೆ, ವೈದ್ಯಕೀಯ ಅಧ್ಯಯನ ಮಾಡಲು ಫಿಲಡೆಲ್ಫಿಯಾ ವೈದ್ಯಕೀಯ ಕಾಲೇಜಿಗೆ ಸೇರಿಕೊಂಡರು. ಆ ಸಮಯದಲ್ಲಿ, ಮೊದಲನೆಯ ಮಹಾಯುದ್ಧ ಪ್ರಾರಂಭವಾಗಿತ್ತು, ಮತ್ತು ಯುದ್ಧದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ವೈದ್ಯರ ಅಗತ್ಯವಿದೆ ಎಂದು ಸರ್ಕಾರ ಭಾವಿಸಿತು. ಆದ್ದರಿಂದ, ಅವರು ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಕೊಠಡಿ, ಊಟ ಮತ್ತು ಪ್ರೋತ್ಸಾಹ ಧನವನ್ನು ನೀಡಿದರು. ಕಾರ್ಲ್ ಬೇಕರ್ ಉಚಿತವಾಗಿ ಅಧ್ಯಯನ ಮಾಡಿದರು. ತಾನು ಹರಕೆ ಮಾಡಿದಂತೆಯೇ ಆಫ್ರಿಕಾ ದೇಶಕ್ಕೆ ವೈದ್ಯಕೀಯ ಮಿಷನರಿಯಾಗಿ ಹೋದರು. 

 

ಸತ್ಯವೇದದಲ್ಲಿಯೂ ಸಹ, ಹನ್ನಳಿಗೆ ಮಕ್ಕಳಿರಲಿಲ್ಲ. ಅವಳ ಸವತಿಯು ಅವಳನ್ನು ದುಃಖಿತಳನ್ನಾಗಿ ಮಾಡಿ ಖಿನ್ನತೆಗೆ ಒಳಪಡಿಸುತ್ತಿದ್ದಳು. ಹನ್ನಳು ಅಳುತ್ತಾ ಊಟವೂ ಸಹ ಮಾಡುತ್ತಿರಲಿಲ್ಲ. ಅವಳ ಗಂಡನ ಮಾತುಗಳು ಅವಳನ್ನು ಸಮಾಧಾನಪಡಿಸಲಿಲ್ಲ. ಇದು ರೂಢಿಯಾಗಿತ್ತು. ಆದರೆ ಹನ್ನಳು ಹರಕೆಯೊಂದಿಗೆ ದೇವರನ್ನು ಪ್ರಾರ್ಥಿಸಿದಳು. ಏನು ಹರಕೆ, ನನ್ನನ್ನು ನೆನಪಿಸಿಕೊಂಡು, ನನಗೊಂದು ಮಗುವನ್ನು ಕೊಡು, ಕೊಟ್ಟರೆ ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿಕೊಡುವೆನು ಎಂಬುದೇ. ಏನು ನಡೆಯಿತು ಗೊತ್ತಾ, ಕರ್ತನು ಹನ್ನಳನ್ನು ನೆನಪಿಸಿಕೊಂಡರು. ಮುಚ್ಚಿದ ಗರ್ಭ ತೆರೆಯಲ್ಪಟ್ಟಿತು. ಅವಳು ಒಬ್ಬ ಮಗನಿಗೆ ಜನ್ಮ ನೀಡಿದಳು. ಅದೇ ರೀತಿಯಲ್ಲಿ, ಅವಳು ತನ್ನ ಹರಕೆಯನ್ನು ಪೂರೈಸಿದಳು. ಹೌದು, ಹರಕೆಯ ಪ್ರಾರ್ಥನೆಯು ಹನ್ನಳ ಜೀವನದಲ್ಲಿ ತಡೆಯಾಗಿದ್ದ ಕಾರ್ಯವನ್ನು ಪಡೆಯುವಂತೆ ಮಾಡಿತು. ಇದನ್ನು ಓದುತ್ತಿರುವ ಪ್ರಿಯರೇ! ನಿಮ್ಮ ಜೀವನದಲ್ಲಿಯೂ ಸಹ ತಡೆಯಾಗಿರುವ ಆಶೀರ್ವಾದಗಳನ್ನು ಪಡೆಯಲು ಬಯಸುತ್ತೀರಾ? ಹರಕೆ ಮಾಡಿ ದೇವರ ಬಳಿ ಪ್ರಾರ್ಥಿಸಿರಿ. 

 

ವರ್ಷಗಳು ಕಳೆದರೂ, ನಿಮ್ಮ ಪ್ರಾರ್ಥನೆ ವ್ಯರ್ಥವಾಗುವುದಿಲ್ಲ. ಕಾರ್ಲ್ ಬೇಕರ್ ಹರಕೆಯೊಂದಿಗೆ ಪ್ರಾರ್ಥಿಸಿದರೂ, ಹಲವು ವರ್ಷಗಳ ನಂತರ, 22 ನೇ ವಯಸ್ಸಿನಲ್ಲಿ, ಉನ್ನತ ಶಿಕ್ಷಣದ ಅವಕಾಶ ಬಂದಿತು. ಆದರೆ ಅದ್ಭುತವಾಗಿ ಉಚಿತವಾಗಿ ಅಧ್ಯಯನ ಮಾಡಲು ದೇವರು ಕೃಪೆ ತೋರಿದರು. ನಿಮಗಾಗಿ ವಿಳಂಬವಾಗುವ ಆಶೀರ್ವಾದವು ನಿಮಗೆ ಆಶ್ಚರ್ಯವಾಗುವುದಿಲ್ಲ, ಆದರೆ ನಿಮ್ಮ ಸುತ್ತಮುತ್ತಲಿನವರಿಗೆ ಮತ್ತು ಅದನ್ನು ಕೇಳುವವರಿಗೆ ಆಶ್ಚರ್ಯವಾಗಿರುತ್ತದೆ. ಆದ್ದರಿಂದ, ಹರಕೆ ಮಾಡಿ ಪ್ರಾರ್ಥಿಸಿ ಮತ್ತು ಆಶೀರ್ವಾದಗಳನ್ನು ಪಡೆಯಿರಿ. ನಂಬಿಗಸ್ತರಾಗಿದ್ದು ಹರಕೆಯನ್ನು ಪೂರೈಸಿ. ನಿಮ್ಮ ಜೀವನದ ಮೂಲಕ ಅನೇಕರು ದೇವರನ್ನು ಮಹಿಮೆಪಡಿಸುವರು. ಆಮೆನ್. 

- Mrs. ಅನ್ಬು ಜ್ಯೋತಿ ಸ್ಟಾಲಿನ್ 

 

ಪ್ರಾರ್ಥನಾ ಅಂಶ:

VBS ಸೇವೆಯ ಮೂಲಕ ಒಂದು ಲಕ್ಷ ಮಕ್ಕಳನ್ನು ಭೇಟಿಯಾಗಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş