Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.05.2025
Share:

By Village Missionary Movement

Wednesday, 28-May-2025

ಧೈನಂದಿನ ಧ್ಯಾನ(Kannada) – 28.05.2025

 

ಸ್ಥಿರವಾಗಿ ನಿಲ್ಲುವುದು

 

"...ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ?..." - ಯೋಬ 2:9

 

ನವೀನ್ ದೇವರನ್ನು ಅರಿಯದ ಕುಟುಂಬದಲ್ಲಿ ಜನಿಸಿ, ಕರ್ತನನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿ, ದೇವರಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದ. ಬಡ ಕುಟುಂಬವಾಗಿರುವುದರಿಂದ, ದೈನಂದಿನ ಅಗತ್ಯಗಳಿಗೂ ಸಹ ತುಂಬಾ ಕಷ್ಟವೇ. ಆದರೆ ದೇವರಲ್ಲಿನ ಅವನ ನಂಬಿಕೆಯಿಂದಾಗಿ, ದೇವರು ಅವನನ್ನು ಕೈಬಿಡಲಿಲ್ಲ ಮತ್ತು ಪ್ರತಿದಿನ ಅವನ ಅಗತ್ಯಗಳನ್ನು ಅದ್ಭುತವಾಗಿ ಪೂರೈಸುತ್ತಿದ್ದರು. ಒಂದು ದಿನ ನವೀನ್ ಇದ್ದಕ್ಕಿದ್ದಂತೆ ಅಸ್ವಸ್ಥನಾಗಿ ಆಸ್ಪತ್ರೆಗೆ ಹೋಗಬೇಕಾಯಿತು. ವೈದ್ಯರು ಆತನನ್ನು ಪರೀಕ್ಷಿಸಿದಾಗ, ಆತನ ದೇಹದ ಅಂಗಾಂಗಗಳು ಹಾನಿಗೊಳಗಾಗಿರುವುದು ಕಂಡುಬಂದಿದೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಅವರ ಬಳಿ ಇಲ್ಲ. ಆದರೆ ದೇವರು ಗುಣಪಡಿಸುವನೆಂಬ ನಂಬಿಕೆ ಅವನಿಗಿದ್ದ ಕಾರಣ, ಅವನು ಕೊನೆಯವರೆಗೂ ಪಟ್ಟುಹಿಡಿದು ದೇವರಿಂದ ಸ್ವಸ್ಥತೆಯನ್ನು ಪಡೆದನು.

 

ಹಳೆಯ ಒಡಂಬಡಿಕೆಯಲ್ಲಿ ಬರುವ ನೀತಿವಂತನಾದ ಯೋಬನ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅವರು ಅಪಾರ ಆರ್ಥಿಕ ಶಕ್ತಿ ಮತ್ತು ದೇವರಲ್ಲಿ ಬಲವಾದ ನಂಬಿಕೆ ಉಳ್ಳವರು. ಒಂದು ದಿನ ಅವರು ಸೈತಾನನಿಂದ ಶೋಧಿಸಲ್ಪಟ್ಟರು. ಕರ್ತನ ಅನುಮತಿಯೊಂದಿಗೆ ಸೈತಾನನು ಯೋಬನನ್ನು ಪರೀಕ್ಷಿಸಿದನು. ಯೋಬನ ಎಲ್ಲಾ ಆಶೀರ್ವಾದಗಳು ಒಂದೇ ದಿನದಲ್ಲಿ ಕಸಿದುಕೊಳ್ಳಲ್ಪಟ್ಟವು. ಅವರ ಮಕ್ಕಳೂ ಸತ್ತರು. ಆದರೂ ಯೋಬನು ಕರ್ತನಿಂದ ದೂರ ಸರಿಯಲಿಲ್ಲ. ದೇವರ ಬಗ್ಗೆ ಕೊರತೆಯೂ ಹೇಳಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ದೇವರಲ್ಲಿನ ನಂಬಿಕೆಯಲ್ಲಿ ದೃಢವಾಗಿ ನಿಂತರು. ಆದರೆ ಯೋಬನಿಗೆ ತಾನು ಕಳೆದುಕೊಂಡ ಎಲ್ಲಾ ಆಶೀರ್ವಾದಗಳು ಒಂದು ದಿನ ಸಿಗುತ್ತವೆ ಎಂದು ತಿಳಿದಿರಲಿಲ್ಲ. ಯೋಬನು ಕಳೆದುಕೊಂಡ ಎಲ್ಲಾ ಆಶೀರ್ವಾದಗಳನ್ನು ಎರಡರಷ್ಟು ಪಡೆದುಕೊಂಡರು.

 

ಪ್ರೀತಿಯ ಸಹೋದರ ಸಹೋದರಿಯರೇ! ಸತ್ಯವೇದದಲ್ಲಿ ದೃಢವಾಗಿ ನಿಂತು ಪರಲೋಕದ ಆಶೀರ್ವಾದ ಮತ್ತು ಉನ್ನತಿಯನ್ನು ಪಡೆದ ಅನೇಕರನ್ನು ನಾವು ಕಾಣಬಹುದು. ಕ್ರೈಸ್ತ ಜೀವನದಲ್ಲಿ ಸಮಸ್ಯೆಗಳು ಮತ್ತು ಹೋರಾಟಗಳು ಉದ್ಭವಿಸುವುದು ಸಹಜ. ಹೋರಾಟಗಳನ್ನು ದಾಟಲು ನಾವು ದೇವರಲ್ಲಿ ಶಕ್ತಿಯನ್ನು ಕೇಳಿದಾಗ, ನಾವು ಖಂಡಿತವಾಗಿಯೂ ಹೋರಾಟವನ್ನು ಜಯಿಸಬಹುದು. ಇದಕ್ಕೆ ವಿರುದ್ಧವಾಗಿ, ನಾವು ದೇವರಿಂದ ಮತ್ತು ನಮ್ಮ ನಂಬಿಕೆಯಿಂದ ದೂರ ಸರಿದರೆ, ನಾವು ವಿಜಯಶಾಲಿ ಜೀವನವನ್ನು ನಡೆಸಲು ಸಾಧ್ಯವಿಲ್ಲ. ನಾವು ಕ್ರಿಸ್ತನಲ್ಲಿ ನೆಲೆಗೊಂಡರೆ, ನಾವು ಕೃಪೆಯನ್ನು ಪಡೆದು ಫಲಪ್ರದ ಜೀವನವನ್ನು ನಡೆಸಬಹುದು. ಹಲ್ಲೇಲೂಯಾ!

- Sis. ರಂಜಿತಾ ಗ್ರೇಸ್

 

ಪ್ರಾರ್ಥನಾ ಅಂಶ:

ನಮ್ಮ ವಿಲೇಜ್ ಟಿವಿಯಲ್ಲಿ ಪ್ರಸಾರವಾಗುವ VBS ಕಾರ್ಯಕ್ರಮಗಳ ಮೂಲಕ ಅನೇಕ ಮಕ್ಕಳು ದೇವರನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin