Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.05.2021
Share:

By Village Missionary Movement

Saturday, 22-May-2021

ಧೈನಂದಿನ ಧ್ಯಾನ(Kannada) – 22.05.2021

ಬದಲಾವಣೆ ಅಗತ್ಯ

 "ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ" - ರೋಮಾ 12:2

ತೀಟೆ ಹುಡುಗ ಒಬ್ಬ ತನ್ನ ಸ್ನೇಹಿತರೊಂದಿಗೆ ಬೀದಿಯಲ್ಲಿ ಆಟವಾಡುತ್ತಿದ್ದಾಗ ಬಚ್ಚಿಟ್ಟುಕೊಂಡು ಆಟವಾಡಲು ಒಂದು ಒಳ್ಳೆ ಸ್ಥಳವನ್ನು ಹುಡುಕಿದನು. ಹುಡುಕಾಡುತ್ತಿದ್ದವನ ಕಣ್ಣುಗಳಿಗೆ ಹತ್ತಿರದಲ್ಲಿದ್ದ ಒಂದು ಆಲಯವು ಕಾಣಿಸಿತು.  "ಓ, ಕ್ರಿಸ್ಮಸ್ ನಂದು ನಾವು ಹೋದ Church ತಾನೆ ಇದು" ಎಂದು ನೆನೆಸಿದ ಅವನು ವೇಗವಾಗಿ ಒಳಗೆ ಹೋಗಿ ಬಚ್ಚಿಟ್ಟುಕೊಳ್ಳಲು ಮುಂದಾದನು. ಅದನ್ನು ನೋಡಿದ ಅಲ್ಲಿನ ಸೇವಕರು ಅವನನ್ನು ತನ್ನ ಹತ್ತಿರ ಕರೆದು ಕೂರಿಸಿ ಅವನ ಬಳಿ  "ದೇವರು ಎಲ್ಲಿ?" ಎಂಬ ಪ್ರಶ್ನೆಯನ್ನು ಕೇಳಿದರು. ಆ ಚಿಕ್ಕ ಹುಡುಗನಿಗೆ ಏನು ಉತ್ತರ ಹೇಳುವುದೆಂದು ಗೊತ್ತಾಗಲಿಲ್ಲ. ಪುನಃ  "ದೇವರು ಎಲ್ಲಿ?" ಎಂದು ಶಬ್ದವಾಗಿ ಕೇಳಲು ಅವನಿಗೆ ಭಯದಿಂದ ಬೆವರು ಸುರಿಯಲು ಪ್ರಾರಂಭಿಸಿತು. ಮೂರನೇ ಬಾರಿ ಸೇವಕರು ಅವನ ಬಳಿ ಕೋಪದಿಂದ ಕೇಳುವ ಹಾಗೆ ಕೇಳಲು, ಅವನು ಒಂದೇ ಓಟದಿಂದ ಮನೆಗೆ ಓಡಿ ಬಂದುಬಿಟ್ಟನು. ಅದು ನೋಡಿದ ಅವನ ಅಣ್ಣ,  "ಯಾಕೆ ತಮ್ಮ, ಹೀಗೆ ಬೆವರು ಸುರಿಯುವಂತೆ ಓಡಿ ಬರುತ್ತಿದ್ದೀಯಾ?"  ಎಂದು ಕೇಳಿದನು. ಅದಕ್ಕೆ ಆ ಚಿಕ್ಕ ಹುಡುಗ,  " ಅಣ್ಣ, ನಾವು ಬಹುದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದೇವೆ. ಈ ಬಾರಿ ದೇವರು ಕಾಣುತ್ತಿಲ್ಲವಂತೆ. ನಾವೇ ಕದ್ದು ಬಿಟ್ಟಿದ್ದೇವೆ ಎಂದು ಸಂದೇಹ ಪಡುತ್ತಿದ್ದಾರೆ" ಎಂದನು. ಇದು ಒಂದು ತಮಾಷೆಯ ಕಥೆಯಾಗಿದ್ದರೂ ಕೂಡ ಚಿಂತಿಸಬೇಕಾದದ್ದು ಅಗತ್ಯ! 

ನಮ್ಮ ಜೀವನದಲ್ಲಿ ದೇವರು ಎಂದಾದರೂ ಕಾಣದೆ ಹೋದದ್ದು ಉಂಟಾ? ನಮ್ಮ ನಡತೆಯನ್ನು, ಜೀವನವನ್ನು ನೋಡುತ್ತಿರುವ ಎಷ್ಟು ಜನ ನಮ್ಮಲ್ಲಿ ಕ್ರಿಸ್ತನನ್ನು ನೋಡುತ್ತಿದ್ದಾರೆ. ಕ್ರಿಸ್ತನ ಜನನ ಕ್ರಿ.ಶ, ಕ್ರಿ.ಪೂ, ಎಂದು ಪ್ರಪಂಚದ ಚರಿತ್ರೆಯನ್ನೇ ಬೇರ್ಪಡಿಸಿತು. ನಮ್ಮ ಜೀವನದಲ್ಲಿ ಕೂಡ ಕ್ರಿಸ್ತನನ್ನು ಅಂಗೀಕರಿಸುವುದಕ್ಕೆ ಮುಂಚೆ,  ಕ್ರಿಸ್ತನನ್ನು ಅಂಗೀಕರಿಸಿಕೊಂಡ ನಂತರ ಎಂಬ ವ್ಯತ್ಯಾಸವು ಕಾಣಲ್ಪಡಬೇಕೇ! ಯೇಸುಕ್ರಿಸ್ತನನ್ನು ರಕ್ಷಕನಾಗಿ ಅಂಗೀಕರಿಸಿಕೊಂಡದ್ದು ಮಾತ್ರವಲ್ಲ ನಮ್ಮ ಸ್ವಭಾವಗಳಲ್ಲಿಯೂ, ಜೀವನದಲ್ಲಿಯೂ ಬದಲಾವಣೆ ಕಾಣಲ್ಪಡಬೇಕಾದದ್ದು ಅಗತ್ಯ.

 ಐಗುಪ್ತದ ಅರಮನೆಯಲ್ಲಿ ಬೆಳೆದ ಮೋಶೆ ಕೋಪದ ನಿಮಿತ್ತವಾಗಿ ಒಬ್ಬನನ್ನು ಸಾಯಿಸಿದ್ದರಿಂದ ಅದಕ್ಕೆ ಹೆದರಿ ದೇಶವನ್ನೇ ಬಿಟ್ಟು ಓಡಿ ಹೋದರು. ಅದೇ ಮೋಶೆ ಮುಳ್ಳಿನಗಿಡದಲ್ಲಿ ಕರ್ತನನ್ನು ಕಂಡ ನಂತರ ಧೈರ್ಯಗೊಂಡವನಾಗಿ ಪುನಃ ಐಗುಪ್ತಕ್ಕೆ ಹೋಗಿ ದಾಸತ್ವದಿಂದ ಜನರನ್ನು ಬಿಡಿಸಿ ಅವರನ್ನು ಮುನ್ನಡೆಸುವ ನಾಯಕನಾಗಿ ಮಾರ್ಪಟ್ಟನು. ಅದು ಮಾತ್ರವಲ್ಲ ಅವರ ಸ್ವಭಾವವು ಮಾರ್ಪಟ್ಟು, ಭೂಮಿಯಲ್ಲಿರುವ ಎಲ್ಲಾ ಮನುಷ್ಯರಿಗಿಂತ ಬಹು ಶಾಂತವುಳ್ಳವರಾಗಿದ್ದರು ಎಂದು ಸತ್ಯವೇದವು ಅವರ ಬಗ್ಗೆ ಸಾಕ್ಷಿ ಹೇಳುತ್ತಿದೆ(ಅರಣ್ಯಕಾಂಡ.12:3). ಕ್ರಿಸ್ತನೊಂದಿಗೆ ಉಂಟಾದ ಒಂದು ಭೇಟಿಯೇ ಅವರ ಜೀವನವನ್ನೇ ಮಾರ್ಪಡಿಸಿತು. ಮಾನಸಾಂತರ ಹೊಂದುವುದು ಎಂಬುದು ನಮಗೆ ಸೇರಿದ್ದು. ಒಬ್ಬನು ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗುವನು; ಹಳೆಯದೆಲ್ಲ ನಶಿಸಿ ಹೋದವು, ಎಲ್ಲವೂ ಹೊಸದಾಯಿತು. ನಮ್ಮ ಜೀವನದಲ್ಲಿಯೂ ಕರ್ತನನ್ನು ದುಃಖ ಪಡಿಸುವ ಹಳೆಯ ಕಹಿ, ಕೋಪ, ವೈರಾಗ್ಯ, ಶಾರೀರಿಕ ಇಚ್ಛೆಗಳನ್ನು ಬಿಟ್ಟು ಬಿಟ್ಟು ಕ್ರಿಸ್ತನ ಸ್ವಾರೂಪ್ಯವನ್ನು ಪ್ರತಿಬಿಂಬಿಸುವವರಾಗಿ ಕಾಣಲ್ಪಡೋಣ.
-    Mrs. ವಸಂತಿ ರಾಜ್ ಮೋಹನ್

ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ ಎಂಬ ಮಾಸಪತ್ರಿಕೆಯು ಅನೇಕರಿಗೆ ಪ್ರಯೋಜನಕರವಾಗಿ ಕಾಣಲ್ಪಡಲು, ಇದರ ಮೂಲಕ ಅನೇಕರ ಭಕ್ತಿ ವೃದ್ಧಿಯಾಗಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş