Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.05.2025 (Kids Special)
Share:

By Village Missionary Movement

Sunday, 25-May-2025

ಧೈನಂದಿನ ಧ್ಯಾನ(Kannada) – 25.05.2025 (Kids Special)

 

ಮೂರು ಶಿಲುಬೆಗಳು

 

"...ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು…" - ಲೂಕ 15:7

 

ಮುದ್ದು ಮಕ್ಕಳೇ, ಇಂದು ನಾವೆಲ್ಲರೂ ಯೆರೂಸಲೇಮ್ ಪಟ್ಟಣದ ಹೊರಗಿರುವ ಗೊಲ್ಗೊಥಾ ಎಂಬ ಬೆಟ್ಟದ ಮೇಲೆ ಏನಾಯಿತು ಎಂದು ನೋಡಲು 2000 ವರ್ಷಗಳ ಹಿಂದೆ ಹೋಗಲಿದ್ದೇವೆ. ಸಿದ್ಧರಿದ್ದೀರಾ?  

 

ಆ ಪರ್ವತದ ಮೇಲೆ ಮೂರು ಶಿಲುಬೆಗಳನ್ನು ನಿಲ್ಲಿಸಲಾಗಿತ್ತು. ಒಂದೊಂದು ಶಿಲುಬೆಯ ಮೇಲೂ ಒಬ್ಬೊಬ್ಬರನ್ನು ಶಿಲುಬೆಗೇರಿಸಲಾಗಿತ್ತು. ಮಧ್ಯದಲ್ಲಿರುವ ಶಿಲುಬೆಯೇ ನಿಮ್ಮನ್ನು ಮತ್ತು ನನ್ನನ್ನು ರಕ್ಷಿಸಲು ನೇತುಹಾಕಿದ್ದ ಕರ್ತನಾದ ಯೇಸು ಕ್ರಿಸ್ತನ ಶಿಲುಬೆ. ಅವರ ಎರಡೂ ಬದಿಗಳಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೇರಿಸಲಾಗಿತ್ತು. ಅವರಲ್ಲಿ ಒಬ್ಬನು ಯೇಸುವನ್ನು ನೋಡಿ ಕೂಗಾಡಿ ಆತನನ್ನು ಅಪಹಾಸ್ಯ ಮಾಡಿದನು. "ನೀನು ದೇವರಾಗಿದ್ದರೆ ಶಿಲುಬೆಯಿಂದ ಇಳಿದು ಬಂದು ಈ ಶಿಕ್ಷೆಯಿಂದ ನಮ್ಮನ್ನು ರಕ್ಷಿಸು" ಎಂದನು. ಆದಾಗ್ಯೂ, ಯೇಸು ಮೌನವಾಗಿದ್ದು, ತನ್ನ ಕೈ ಮತ್ತು ಕಾಲುಗಳಲ್ಲಿನ ಗಾಯಗಳ ನೋವನ್ನು ಸಹಿಸಿಕೊಂಡರು.

 

ಆದರೆ ನೋಡಿ, ಮತ್ತೊಬ್ಬ ಕಳ್ಳ ಆತನನ್ನು ಗೇಲಿ ಮಾಡಿದವನನ್ನು ನೋಡಿ ಕೋಪದಿಂದ, "ನಿನಗೆ ದೇವರ ಭಯವಿಲ್ಲವೇ? ನಾವು ತಪ್ಪು ಮಾಡಿದ್ದರಿಂದ ನಾವಿಬ್ಬರೂ ಶಿಕ್ಷೆ ಅನುಭವಿಸುತ್ತಿದ್ದೇವೆ. ಆದರೆ ಇವರು ಯಾವುದೇ ತಪ್ಪು ಮಾಡದೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರನ್ನು ಗೇಲಿ ಮಾಡುವುದನ್ನು ನಿಲ್ಲಿಸು" ಎಂದು ಹೇಳಿದನು. ಸ್ವಲ್ಪ ಹೊತ್ತು ಮೌನವಾಗಿದ್ದ ನಂತರ, ಅವನು ಯೇಸುವಿನ ಕಡೆಗೆ ತಿರುಗಿಕೊಂಡು ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ "ಕರ್ತನೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪು ಮಾಡಿಕೋ" ಅಂದನು. ಯೇಸಪ್ಪನಿಗೆ ಇವನು ತುಂಬಾ ಇಷ್ಟವಾಗಿಬಿಟ್ಟನು . ದಯವಿಟ್ಟು ಚೆನ್ನಾಗಿ ಗಮನಿಸಿ ಕೇಳಿ ಮಕ್ಕಳಾ! ಯೇಸು ಕ್ರಿಸ್ತನು ರೋಗಿಗಳನ್ನು ಗುಣಪಡಿಸಿದಾಗ ಮತ್ತು ಸತ್ತವರನ್ನು ಎಬ್ಬಿಸಿದಾಗ ಮುಂತಾದ ಅನೇಕ ಅದ್ಭುತಗಳನ್ನು ಮಾಡಿದಾಗಲೂ, ಕೆಲವರು ಆತನನ್ನು ನಂಬಲಿಲ್ಲ. ಆದರೆ ಇಲ್ಲಿ, ಈ ಕಳ್ಳ, ಅತ್ಯಂತ ಕೆಟ್ಟ ಅಪರಾಧಿ, ಯೇಸು ಬಹಳ ದುರ್ಬಲ ಮನುಷ್ಯನಾಗಿ ನೇತಾಡುತ್ತಿದ್ದಾಗ ಆತನನ್ನು ನಂಬಿದನು. ಸೂಪರ್ ಅಲ್ವಾ? ಯೇಸು ಅವನಿಗೆ, "ಇಂದು ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ" ಎಂದು ಹೇಳಿದರು. ಹೌದು, ಅವನು ತನ್ನ ಎಲ್ಲಾ ಪಾಪಗಳಿಗೂ ಪಾಪ ಕ್ಷಮಾಪಣೆ ಪಡೆದುಕೊಂಡವನಾಗಿ ತನ್ನ ಜೀವನದ ಕೊನೆಯ ನಿಮಿಷಗಳಲ್ಲಿ ಮಾನಸಾಂತರ ಹೊಂದಿ ಪರಲೋಕಕ್ಕೆ ಹೋಗುವ ಭಾಗ್ಯವನ್ನು ಪಡೆದುಕೊಂಡನು.

 

ಪುಟಾಣಿಗಳೇ, ಈ ಲೋಕದಲ್ಲಿ ಅನೇಕ ಜನರು ಆಶೀರ್ವಾದಕ್ಕಾಗಿ, ಅಗತ್ಯಗಳಿಗಾಗಿ, ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕಾಯಿಲೆಗಳ ಚಿಕಿತ್ಸೆಗಾಗಿ ಯೇಸುವನ್ನು ಹುಡುಕುತ್ತಾರೆ. ಆದರೆ ಕಳ್ಳನು ಇದ್ಯಾವುದನ್ನೂ ಕೇಳಲಿಲ್ಲ, ರಕ್ಷಣೆಯನ್ನು ಮಾತ್ರವೇ ಕೇಳಿದನು! ನೀವು ಸಹ ಲೌಕಿಕ ಆಶೀರ್ವಾದಗಳಿಗಾಗಿ ಕರ್ತನನ್ನು ಹುಡುಕದೆ, ನಿಮ್ಮ ಜೀವನದಲ್ಲಿ ಯೇಸು ತುಂಬಿರುವಂತೆ ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ಆತನನ್ನು ಹುಡುಕುವುದಾದರೆ, ಬೆಲೆ ಕಟ್ಟಲಾಗದಂತಂಹ ಅಮೂಲ್ಯವಾದ ಪರಲೋಕ ಜೀವನಕ್ಕೆ ಪಾಲುದಾರರಾಗಿಬಿಡುತ್ತೀರ. ಏನು O k ನಾ.

- Mrs. ಅನಿತಾ ಅಲಗರಸಾಮಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş