Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.05.2025
Share:

By Village Missionary Movement

Thursday, 22-May-2025

ಧೈನಂದಿನ ಧ್ಯಾನ(Kannada) – 22.05.2025

 

ಶಿಲುಬೆಯ ಪ್ರೀತಿ

 

"ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ." - ಎಫೆಸ 2:13

 

ಕಮ್ಯುನಿಸ್ಟ್ ದೇಶಗಳಿಗೂ ಮತ್ತು ಅಮೆರಿಕ ಸಂಯುಕ್ತ ದೇಶಗಳ ನಡುವೆ ಶೀತಲ ಸಮರ ನಡೆಯುತ್ತಿದ್ದ ಸಮಯ ಅದು. ರೊಮೇನಿಯಾದಲ್ಲಿ ಬಹಿರಂಗವಾಗಿ ಸುವಾರ್ತೆಯನ್ನು ಸಾರುವುದನ್ನು ನಿಷೇಧಿಸಲಾಗಿದ್ದರೂ, ಅಮೇರಿಕ ದೇಶಕ್ಕೆ ಸೇರಿದ ಬೋಧಕರೊಬ್ಬರು ಕೆಲವೊಂದು ಸೇವೆಗಳನ್ನು ಮಾಡಲು ರಹಸ್ಯವಾಗಿ ಹೋಗಿದ್ದರು. ಒಂದು ದಿನ, ಕೊರೆಯುವ ಚಳಿಯಲ್ಲಿ ನಿರ್ಜನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಒಬ್ಬ ಮನುಷ್ಯನ ಶಿಳ್ಳೆಯ ಶಬ್ದವು ಅವರನ್ನು ಒಂದು ಕ್ಷಣ ಬೆಚ್ಚಿಬೀಳಿಸಿತು. ಏಕೆಂದರೆ ಅವನು ಶಿಳ್ಳೆ ಹೊಡೆಯುತ್ತಾ "ನಮ್ಮ ರಕ್ಷಕನಾದ ಯೇಸು" ಎಂಬ ಸ್ತುತಿಗೀತೆಯನ್ನು ಹಾಡುತ್ತಾ ಸಾಗುತ್ತಿದ್ದರು.

 

ಕ್ರಿಸ್ತನನ್ನು ತಿರಸ್ಕರಿಸಿದ ದೇಶದಲ್ಲಿ ಅಂತಹ ವ್ಯಕ್ತಿಯನ್ನು ಕಂಡು ಸಂತೋಷಪಟ್ಟು ಅವರು ಆ ವ್ಯಕ್ತಿಯನ್ನು ಹಿಂಬಾಲಿಸಿದರು. ಯಾರಾದರೂ ನೋಡಿದರೆ ತೊಂದರೆಯಾಗಬಹುದೆಂಬ ಭಯದಿಂದ ಸ್ವಲ್ಪ ದೂರ ಸದ್ದಿಲ್ಲದೆ ಹೋದ ನಂತರ ಅವರು ಕೂಡ ಆ ಹಾಡನ್ನು ಶಿಳ್ಳೆ ಹೊಡೆದು ಹಾಡಲು ಪ್ರಾರಂಭಿಸಿದರು. ಆ ಹಾಡನ್ನು ಕೇಳಿದ ಕೂಡಲೇ ರೊಮೇನಿಯನ್ ಆಶ್ಚರ್ಯದಿಂದ ಹಿಂತಿರುಗಿ ಬಂದು, ಸೇವಕನನ್ನು ಅಪ್ಪಿಕೊಂಡರು ಮತ್ತು ತನ್ನ ಭಾಷೆ ಅವರಿಗೆ ಅರ್ಥವಾಗಲಿಲ್ಲ ಎಂದು ಅರಿತುಕೊಂಡು, ಅವರ ಹೃದಯದ ಮೇಲೆ ತನ್ನ ಕೈಗಳನ್ನು ಇಟ್ಟರು. ನಂತರ ತನ್ನ ಕೈಗಳನ್ನು ನೇರವಾಗಿ ಆಕಾಶದ ಕಡೆಗೆ ಎತ್ತಿ ಶಿಲುಬೆಯ ಚಿಹ್ನೆಯನ್ನು ಬರೆದು ತೋರಿಸಿದರು. ಭಾಷೆ ಮತ್ತು ಸಂಸ್ಕೃತಿಯು ಸಂಪೂರ್ಣವಾಗಿ ಭಿನ್ನವಾಗಿದ್ದ, ಪರಸ್ಪರ ಸಂಬಂಧವಿಲ್ಲದ ಜಗತ್ತಿನಲ್ಲಿ ವಾಸಿಸುತ್ತಿದ್ದ ಈ ಇಬ್ಬರು ಮಿತಿಯಿಲ್ಲದ ಸಂತೋಷದಿಂದ, ಶಿಲುಬೆಯ ಪ್ರೀತಿಯಿಂದ ಕೆಲವೇ ನಿಮಿಷಗಳಲ್ಲಿ ಒಂದಾದರು.

 

ಅಪೊಸ್ತಲನಾದ ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ ಈ ರೀತಿಯಾಗಿ ಹೇಳುತ್ತಾರೆ. ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ ಎಂದು. ಶಿಲುಬೆಯ ಪ್ರೀತಿಯಿಂದ ದೂರವಿದ್ದ ನಮ್ಮನ್ನು ಕರ್ತನು ರಕ್ಷಿಸಿ, ಆತನೊಂದಿಗೆ ಐಕ್ಯವಾಗುವ ಭಾಗ್ಯವನ್ನು ಕೊಟ್ಟಿದ್ದಾರೆ. ಶಿಲುಬೆಯ ಪ್ರೀತಿಯನ್ನು ಪ್ರತಿದಿನ ನಮ್ಮ ಹೃದಯಗಳಲ್ಲಿ ಸುರಿಯಲಾಗುತ್ತಿದೆ, ಅದು ನಮ್ಮೊಳಗಿನ ಪಾಪದ ಕತ್ತಲೆಯನ್ನು ಬಿಟ್ಟು ಬೆಳಕಿನಲ್ಲಿ ಆನಂದಿಸಲು ಅನುವು ಮಾಡಿಕೊಡುತ್ತಿದೆ.

  

ಪ್ರಿಯರಾದವರೇ! ನಾವು ಮುಂಚೆ ಕ್ರಿಸ್ತನನ್ನು ಅರಿಯದ ಹಿಂದಿನ ದಿನಗಳಲ್ಲಿ, ನಾವು ಶಿಲುಬೆಯಿಂದ ದೂರವಿದ್ದೆವು. ಯಾರೋ ಒಬ್ಬರು ನಮಗೆ ತನ್ನ ಪ್ರೀತಿಯನ್ನು ಘೋಷಿಸಿದ ಪರಿಣಾಮವಾಗಿ ನಾವು ಯೇಸುವನ್ನು ನಮ್ಮ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದ್ದೇವೆ. ಅನೇಕರು ಇನ್ನೂ ಈ ಶಿಲುಬೆಯ ಪ್ರೀತಿಯಿಂದ ದೂರವಿದ್ದಾರೆ. ಇಂತಹ ಜನರಿಗಾಗಿ ಜವಾಬ್ದಾರಿ ಐಚ್ಚಯಾರು ಭರವಸೆ ನೀಡುತ್ತಾರೆ? ಅನೇಕ ಭಾಷೆಗಳು ಮತ್ತು ಜನಾಂಗಗಳ ಜನರು ಕ್ರಿಸ್ತನಿಂದ ದೂರವಿರುತ್ತಾರೆ. ಇಂದು, ನೀವು ಮತ್ತು ನಾನು ಕ್ರಿಸ್ತನ ಪ್ರೀತಿಯ ಸೇತುವೆಯಿಂದ ಒಂದಾಗಿರುವಂತೆಯೇ, ಇತರ ಅನೇಕರು ಆತನ ಪ್ರೀತಿಯನ್ನು ಕಂಡುಕೊಳ್ಳಲು ಸಹಾಯ ಮಾಡೋಣ.

- Mrs. ಶಕ್ತಿ ಶಂಕರ್‌ರಾಜ್

 

ಪ್ರಾರ್ಥನಾ ಅಂಶ:

ವಿಬಿಎಸ್ ಸೇವೆ ಮಾಡುತ್ತಿರುವವರು ಅದನ್ನು ಸಮರ್ಪಣಾಭಾವ ಮತ್ತು ಪ್ರಾಮಾಣಿಕತೆಯಿಂದ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet