By Village Missionary Movement
Monday, 19-May-2025ಧೈನಂದಿನ ಧ್ಯಾನ(Kannada) – 19.05.2025
ನೀವೇ ಮಾದರಿಯಾಗಿರಿ
"...ಮಕ್ಕಳ ಭೂಷಣವು ಅವರ ತಂದೆ ಗಳೇ" - ಜ್ಞಾನೋಕ್ತಿ 17:6
ಒಂದು ದಿನ ಭಾನುವಾರ ಶಾಲೆಯಲ್ಲಿ, ಕಥೆ ಹೇಳುವ ಮೊದಲು, ಶಿಕ್ಷಕರು ವಿದ್ಯಾರ್ಥಿಗಳ ಬಳಿ ನಿಮ್ಮ ತಂದೆ ಬೆಳಿಗ್ಗೆ ಎದ್ದಕೂಡಲೇ ಏನು ಮಾಡುತ್ತಾರೆ ಎಂದು ಕೇಳಿದ ಕೂಡಲೇ, ಮುರಳಿ "ಪೇಪರ್ ಓದುತ್ತಾರೆ" ಎಂದನು. ವಂದನಾ, "ವಾಕಿಂಗ್ ಗೆ ಹೋಗುತ್ತಾರೆ" ಎಂದಳು. ಮಯಿಲ್ ವಾಗನನ್, "ಆಟವಾಡಲು ಹೋಗುತ್ತಾರೆ" ಎಂದನು. ರಮೇಶ್, "ಕುಡಿಯಲು ಹೋಗುತ್ತಾರೆ" ಎಂದನು. ದಿನೇಶ್ "ಮಂಡಿಯೂರಿ ಪ್ರಾರ್ಥಿಸುತ್ತಾರೆ" ಎಂದನು. ಕೂಡಲೇ ಶಿಕ್ಷಕರು ಕಥೆಯನ್ನು ಪ್ರಾರಂಭಿಸಿ ಮುಗಿಸಿದರು.
ಹೌದು, ನಮ್ಮ ಮಕ್ಕಳು ನಮ್ಮನ್ನು ಗಮನಿಸುತ್ತಿದ್ದಾರೆ. ಅವರು ನಾವು ಮಾಡುವ ಎಲ್ಲವನ್ನೂ, ನಮ್ಮ ಪ್ರತಿಯೊಂದು ನಡೆಯನ್ನೂ ಸಹ ಗಮನಿಸುತ್ತಿದ್ದಾರೆ. ನಮ್ಮ ಮಕ್ಕಳಿಗೆ ಅನೇಕ ವಿಷಯಗಳನ್ನು ಕಲಿಸುವ ಬದಲು, ಅವುಗಳನ್ನು ನಾವೇ ಮಾಡಿದಾಗ ಅದು ಅಭ್ಯಾಸವಾಗುತ್ತದೆ. ಮಕ್ಕಳು ಮಾಡಲು ಬಯಸುವ ಕಾರ್ಯಗಳನ್ನು ನಾವೇ ಮಾಡೋಣ. ನಮ್ಮ ಮಕ್ಕಳಿಗಾಗಿ ನಮ್ಮ ಮಾರ್ಗವನ್ನು ನೇರಗೊಳಿಸೋಣ, ಏಕೆಂದರೆ ಅವರು ಸಮಯ, ಸಂದರ್ಭ ಅಥವಾ ಅವಕಾಶವನ್ನು ಲೆಕ್ಕಿಸದೆ ನಮ್ಮೊಂದಿಗಿರುತ್ತಾರೆ ಮತ್ತು ನಮ್ಮನ್ನು ಗಮನಿಸುತ್ತಾರೆ. ನಮ್ಮ ಮಕ್ಕಳು ಕಲಿಯಬೇಕಾದ ವಿಷಯಗಳು ನಮ್ಮಲ್ಲಿವೆಯೇ ಎಂದು ಯೋಚಿಸಿ ನೋಡೋಣ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡೋಣ. ನಾವು ಕೇವಲ ಹೇಳುವವರಾಗಿರದೆ, ಕಾರ್ಯ ನಿರ್ವಹಿಸುವವರಾಗಿಯೂ ಇರೋಣ. ನಾವು ಕುಟುಂಬ ಪ್ರಾರ್ಥನೆಗಳೊಂದಿಗೆ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಪ್ರಾರ್ಥಿಸಬೇಕು. ಜಾನ್ ಪ್ಯಾಟನ್ ಎಂಬ ಸೇವಕರು ಬಾಲ್ಯದಲ್ಲಿ ತನ್ನ ತಂದೆ ಪ್ರಾರ್ಥನಾ ಕೋಣೆಯೊಳಗೆ ಹೋಗಿ ಪ್ರಾರ್ಥಿಸುವುದನ್ನು ನೋಡಿ ಪ್ರಾರ್ಥಿಸಲು ಕಲಿತರು. ಅಷ್ಟೇ ಅಲ್ಲ, ತಾನು ತನ್ನ ತಾಯಿಯಿಂದ ನಂಬಿಕೆಯನ್ನೂ ಸಹ ಕಲಿತೆ ಎಂದು ಹೇಳಿದರು. ಇದು ಅವರ ಸೇವಾ ಮಾರ್ಗದಲ್ಲಿ ಹೊಸ ಉತ್ಸಾಹ ಮತ್ತು ಪ್ರೋತ್ಸಾಹವನ್ನು ನೀಡಿತು ಎಂದು ಅವರು ಹೇಳಿದರು. ಅವರು ನ್ಯೂ ಹೆಬ್ರೈಡ್ಸ್ ದ್ವೀಪಗಳಲ್ಲಿ ತಮ್ಮ ಸೇವೆಯನ್ನು ಪೂರೈಸಿದರು. ಅಲ್ಲಿನ ಜನರು ಅಸಂಸ್ಕೃತರು ಮತ್ತು ಮನುಷ್ಯರನ್ನು ಕೊಂದು ತಿನ್ನುವವರು. ಅವರು ತನ್ನ ಹೆತ್ತವರಿಂದ ಕಲಿತದ್ದು ಅವರ ಜೀವನದುದ್ದಕ್ಕೂ ಅವರಿಗೆ ಬೆಂಬಲ ನೀಡಿತು.
ಪೋಷಕರಾದ ನಾವು ಯೋಚಿಸೋಣ. ನಾನು ನನ್ನ ಮಕ್ಕಳ ಮುಂದೆ ಯಾವುದೇ ತಪ್ಪು ಮಾಡಿಲ್ಲ ಎಂದು ನಟಿಸುತ್ತಾ ಎರಡು ಜೀವನ ನಡೆಸುತ್ತಿದ್ದೇವೆಯೇ? ನಮ್ಮ ಮಕ್ಕಳಿಗೆ ಅದು ತಿಳಿದಿದೆ. ಅವರು ದೊಡ್ಡವರಾದಾಗಲೂ ಅದನ್ನೇ ಮಾಡುತ್ತಾರೆ. ನಾವು ಕರ್ತನಿಗೆ ಭಯಪಟ್ಟು ನೀತಿವಂತರಾಗಿ ಬದುಕೋಣ. ಒಳ್ಳೆಯ ಮಾದರಿಯಾಗಿ ಬದುಕಲು ಪ್ರಯತ್ನಿಸೋಣ. ಆ ಭಾನುವಾರ ಶಾಲಾ ಶಿಕ್ಷಕರು ಅಂದು ಕೇಳಿದ ಪ್ರಶ್ನೆಯನ್ನೇ ಇಂದು ನಮ್ಮ ಮಕ್ಕಳ ಬಳಿ ಕೇಳಿದರೆ ನಮ್ಮ ಮಕ್ಕಳ ಉತ್ತರ ಏನಾಗಿರಬಹುದೆಂದು ಯೋಚಿಸೋಣ! ಕಾರ್ಯಮಾಡೋಣ! ಉತ್ತಮವಾಗೋಣ!
- Mrs. ಗ್ರೇಸ್ ಜೀವಮಣಿ
ಪ್ರಾರ್ಥನಾ ಅಂಶ:
VBS ಸೇವೆಗಾಗಿ ಸೇವಕರು ಮಾಡುವ ಪ್ರಯತ್ನಗಳಿಗೆ ಪ್ರತಿಫಲವಾಗಿ ದೇವರು ಗುಂಪು ಗುಂಪಾಗಿ ಚಿಕ್ಕಮಕ್ಕಳನ್ನು ಕೊಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482