Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.05.2025 (Kids Special)
Share:

By Village Missionary Movement

Sunday, 18-May-2025

ಧೈನಂದಿನ ಧ್ಯಾನ(Kannada) – 18.05.2025 (Kids Special)

 

ಬೇಡಿಕೊಳ್ಳಿರಿ ದೊರೆಯುವುದು

 

"ಬೇಡಿಕೊಳ್ಳಿರಿ, ನಿಮಗೆ ದೊರೆಯುವದು;..." - ಮತ್ತಾಯ 7:7

 

ಮಕ್ಕಳು ಮಾತನಾಡುವ, ನಗುವ ಮತ್ತು ಆಟವಾಡುವ ಶಬ್ದ ಎಲ್ಲೆಡೆ ಜೋರಾಗಿ ಕೇಳಿಬರುತ್ತಿತ್ತು. ಈ ಶಬ್ದ ಯಾವುದೋ ಶಾಲಾ ಆವರಣದಿಂದ ಬರುತ್ತಿದೆ ಎಂದು ನೀವು ಭಾವಿಸುತ್ತಿದ್ದೀರಾ? ಇಲ್ಲವೇ ಇಲ್ಲ.  

 

ಅದು ಅನಾಥ ಮಕ್ಕಳು ವಾಸಿಸುವ ತೆರೇಸಾ ಹೋಂನಿಂದ ಬರುತ್ತಿದ್ದ ಶಬ್ದವಾಗಿತ್ತು. ಈ ಅನಾಥಾಶ್ರಮವನ್ನು ಡೇವಿಡ್ ಎಂಬ ಅಂಕಲ್ ನಡೆಸುತ್ತಿದ್ದರು, ಮತ್ತು ಇಲ್ಲಿನ ಮಕ್ಕಳಿಗೆ ಹಾಡುಗಳನ್ನು ಹಾಡುವುದು ಮತ್ತು ಕಥೆಗಳನ್ನು ಕೇಳುವುದು ಎಂದರೆ ತುಂಬಾ ಇಷ್ಟ. ಆ ಅಂಕಲ್ ಈ ಮಕ್ಕಳನ್ನು ಪ್ರಾರ್ಥನೆಯಲ್ಲಿ ಮುನ್ನಡೆಸಿದರು. ಅವರ ಅಗತ್ಯಗಳಿಗಾಗಿ ಯಾವುದೇ ಹಣ ವಿದೇಶದಿಂದ ಬಂದಿಲ್ಲ. ಈ ಸಂಪೂರ್ಣ ಆಶ್ರಮವು ನಂಬಿಕೆಯ ಮೇಲೆಯೇ ನಡೆಸಲ್ಪಟ್ಟಿತು. ನಿಮಗೆ ಏನಾದರೂ ಬೇಕಾದರೆ, ಮೊದಲು ನಿಮ್ಮ ಹೆತ್ತವರನ್ನು ಕೇಳುತ್ತೀರಿ, ಹೌದಲ್ವಾ? ಆದರೆ ಇಲ್ಲಿನ ಮಕ್ಕಳಿಗೆ ಏನಾದರೂ ಅಗತ್ಯವಿದ್ದರೆ, ಅವರು ಮೊದಲು ಯೇಸಪ್ಪನ ಬಳಿಯೇ ಕೇಳುತ್ತಾರೆ. ಅದರ ನಂತರವೇ ಆ ಅಂಕಲ್ ಬಳಿ ಕೇಳುತ್ತಾರೆ. ಅವರನ್ನು ಹಾಗೆಯೇ ಬೆಳೆಸಲಾಯಿತು. 

 

ಒಂದು ದಿನ, ಈ ಆಶ್ರಯದಲ್ಲಿ ಅಡಿಗೆ ಮಾಡುವಾಗ, ಗ್ಯಾಸ್ ಖಾಲಿಯಾಯಿತು. ಆ ಸಮಯದಲ್ಲಿ ಆ ಅಂಕಲ್ ಸಹ ಅಲ್ಲಿರಲಿಲ್ಲ. ಎಲ್ಲಿಗೆ ಕರೆ ಮಾಡಿದರೂ, ಗ್ಯಾಸ್ ಸಿಗುವ ಸಾಧ್ಯತೆಯೇ ಇಲ್ಲ. ರಾತ್ರಿ 8.45 ಆಗಿದೆ. ಮಕ್ಕಳು ಓದು ಮುಗಿಸಿ ಊಟ ಮಾಡಲು ಬಂದುಬಿಟ್ಟಿದ್ದಾರೆ. ನೋಡಿದರೆ ಅಡಿಗೆಯೇ ಆಗಿಲ್ಲ. ಮಕ್ಕಳು ಚಿಕ್ಕವರಾಗಿರುವುದರಿಂದ ಅವರಿಗೆ ಹಸಿವು ತಾಳಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಅಳಲು ಪ್ರಾರಂಭಿಸಿದರು. ನಂತರ ಹಾಸ್ಟೆಲ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಹೋದರಿ ನಾವೆಲ್ಲರೂ ಮೊಣಕಾಲೂರಿ ಪ್ರಾರ್ಥಿಸೋಣ. ಎಲೀಯ ತಾತನನ್ನು ಕಾಗೆಗಳ ಮೂಲಕ ಆಹಾರ ಕಳುಹಿಸಿ ಪೋಷಿಸಿದ ಯೇಸಪ್ಪ ನಮ್ಮನ್ನೂ ಪೋಷಿಸುತ್ತಾರೆ ಎಂದು ಹೇಳಿ ಅವರನ್ನು ಪ್ರಾರ್ಥಿಸುವಂತೆ ಮಾಡಿದರು. ಮಕ್ಕಳು ಕೂಡ ಶ್ರದ್ಧೆಯಿಂದ ಪ್ರಾರ್ಥಿಸಿದರು. ಪ್ರಾರ್ಥನೆ ಮಾಡಿ ಮುಗಿಸಿ ಹೊರಗೆ ಹೋಗಿ ನೋಡಿದಾಗ ಎಂತಹ ಆಶ್ಚರ್ಯ, ಒಬ್ಬ ಅಂಕಲ್ ಆಶ್ರಮದ ಬಾಗಿಲಲ್ಲಿ ಒಂದು ದೊಡ್ಡ ಬುಟ್ಟಿಯೊಂದಿಗೆ ನಿಂತಿದ್ದರು. ನಂತರ ಅಂಕಲ್ ಅದರಲ್ಲಿದ್ದ ಪೊಟ್ಟಣವನ್ನು ಅಲ್ಲಿದ್ದ ಆ ಅಕ್ಕನ ಕೈಗೆ ಕೊಟ್ಟು ಇದರಲ್ಲಿ ಊಟ ಇದೆ, ತಿನ್ನಿ ಎಂದು ಹೇಳಿಬಿಟ್ಟು ಹೊರಟುಹೋದರು. ಆ ಪೊಟ್ಟಣವನ್ನು ಬಿಚ್ಚಿ ನೋಡಿದಾಗ, ಒಳಗೆ ಪರೋಟ ಮತ್ತು ಇಡ್ಲಿ ಇತ್ತು. ಮಕ್ಕಳಿಗೆ ಸಂತೋಷ ತಡೆಯಲಾಗಲಿಲ್ಲ. ಯೇಸಪ್ಪ ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ತರ ಕೊಟ್ಟುಬಿಟ್ಟಿದ್ದಾರೆಂದು ಯೇಸಪ್ಪನಿಗೆ ಧನ್ಯವಾದ ಹೇಳಿ ಮಕ್ಕಳು ಊಟ ಮಾಡಲು ಪ್ರಾರಂಭಿಸಿದರು. ತಿಂದ ನಂತರ ಉಳಿದದ್ದನ್ನು ಎತ್ತಿಡುವಷ್ಟು ಮಟ್ಟಿಗೆ ಯೇಸಪ್ಪ ಕೃಪೆ ತೋರಿದರು.

 

ಪುಟ್ಟ ತಮ್ಮ- ತಂಗಿಯರೇ ನೋಡುದ್ರಾ? ಎಷ್ಟು ದೊಡ್ಡ ಅದ್ಭುತ ಎಂದು, ನೀನು ಕೂಡ ನಮ್ಮ ಮನೆಯಲ್ಲಿ ಊಟಕ್ಕೆ ಕಷ್ಟವಾಗಿದೆ. ನನ್ನ ಹತ್ತಿರ ಒಳ್ಳೆಯ ಬಟ್ಟೆ ಕೂಡ ಇಲ್ಲ ಅಂತ ಚಿಂತಿಸುತ್ತಿದ್ದೀಯಾ? ನೀನು ಸಹ ಈ ಮಕ್ಕಳಂತೆ ಯೇಸಪ್ಪನ ಬಳಿ ಕೇಳು, ನಿನಗೂ ಯೇಸಪ್ಪ ಕೊಡುತ್ತಾರೆ. ಸರೀನಾ!  

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş pokerklas betpas maximcasino pashagaming pashagaming egebet casibom casinolevant virusbet ultrabet grandpashabet royalbet perabet matbet kralbet perabet perabet giriş meritbet meritbet giriş