Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.05.2025
Share:

By Village Missionary Movement

Saturday, 17-May-2025

ಧೈನಂದಿನ ಧ್ಯಾನ(Kannada) – 17.05.2025

 

ಮಾರ್ಗ ಸರಿಯಾಗಿದೆಯೇ?

 

"ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ." - ಯೆಶಾಯ 55:8

 

ಒಬ್ಬ ಕಲಾವಿದ ತನ್ನ ಮನೆಯ ಟೆರೇಸ್ ಮೇಲೆ ಚಿತ್ರ ಬಿಡಿಸುತ್ತಿದ್ದ. ಅವನು ಚಿತ್ರ ಬಿಡಿಸಿ ಮುಗಿಸಿದ ನಂತರ, ತನ್ನ ಚಿತ್ರ ಹೇಗಿದೆ ಎಂದು ನೋಡಲು ಸ್ವಲ್ಪ ಹಿಂದಕ್ಕೆ ಹೆಜ್ಜೆ ಹಾಕಿದನು. ಅದು ತುಂಬಾ ಸುಂದರವಾಗಿತ್ತು. ಇನ್ನೂ ಸ್ವಲ್ಪ ಹಿಂದೆ ಹೋಗಿ ನೋಡೋಣ ಎಂದು ಹಿಂದೆ ಹೋಗಿ ನೋಡಿದರು. ಅದು ಮೊದಲಿಗಿಂತ ಹೆಚ್ಚು ಸುಂದರವಾಗಿತ್ತು. ಇನ್ನೂ ಸ್ವಲ್ಪ ಮುಂದೆ ಹೋಗಿ ನೋಡೋಣ ಎಂದು ದೂರದಲ್ಲಿ ನಿಂತು ನೋಡಿದರು. ಆ ಸಮಯದಲ್ಲಿ ಮನೆಯೊಳಗಿದ್ದ ಅವರ ಹೆಂಡತಿ ಅವರಿಗೆ ಕುಡಿಯಲು ಕಾಫಿ ತೆಗೆದುಕೊಂಡು ಮೇಲೆ ಬಂದರು. ಮೇಲಕ್ಕೆ ಬಂದ ಹೆಂಡತಿಗೆ ಆಘಾತ. ಅದೇನೆಂದರೆ ತನ್ನ ಪತಿ ಆ ವರ್ಣಚಿತ್ರವನ್ನು ಮೆಚ್ಚಿ ನೋಡುತ್ತಾ ನೋಡುತ್ತಾ ಅಡ್ಡಗೋಡೆ ಇಲ್ಲದ ಮಹಡಿಯ ಮೇಲಂತಸ್ತಿನ ತುಟ್ಟ ತುದಿಯಲ್ಲಿ ನಿಂತಿದ್ದರು. ಹೆಂಡತಿ ಗಾಬರಿಯಾಗದೆ, ತಕ್ಷಣ ತನ್ನ ಕೈಯಲ್ಲಿದ್ದ ಕಾಫಿಯನ್ನು ಚಿತ್ರಕಲೆಯ ಮೇಲೆ ಸುರಿದಳು. ಇದನ್ನು ನೋಡಿದ ಗಂಡ ಕೋಪದಿಂದ ಹೆಂಡತಿಯ ಬಳಿಗೆ ಬಂದರು. ನಂತರ ನಡೆದದ್ದನ್ನು ತಿಳಿದುಕೊಂಡು ಹಿಂತಿರುಗಿ ನೋಡಿದರು. ಆಗ ಅರಿವಾಯಿತು, ನಾನು ಇನ್ನು ಒಂದು ಹೆಜ್ಜೆ ಹಿಂದಕ್ಕೆ ಇಟ್ಟಿದ್ದರೆ, ಕೆಳಗೆ ಬಿದ್ದು ಹೋಗುತ್ತಿದ್ದೆ ಎಂದು! 

 

ಇದರಂತೆಯೇ ಅಪಾಯ ಎಂದು ಅರಿತುಕೊಳ್ಳದೆಯೇ ಮಾದಕ ದ್ರವ್ಯಗಳನ್ನು ಬಳಸುವ ಅನೇಕ ಜನರಿದ್ದಾರೆ. ಸರ್ಕಾರ ಪ್ರವಾಹ ಮತ್ತು ಸುನಾಮಿಯ ಬಗ್ಗೆ ಎಚ್ಚರಿಕೆ ನೀಡಿದಾಗಲೂ, ಅವರು ಅವುಗಳನ್ನು ನಿರ್ಲಕ್ಷಿಸಿ ಸೆಲ್ಫಿ ತೆಗೆದುಕೊಂಡು ತಮ್ಮನ್ನು ತಾವು ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಾರೆ. ಮೀಮ್ಸ್ ಮತ್ತು ರೀಲ್‌ಗಳಿಗಾಗಿ ಮೋಟಾರ್‌ಸೈಕಲ್‌ನಲ್ಲಿ ವೀಲಿಂಗ್ ಮಾಡುವುದು ಅಥವಾ ರೈಲಿನ ಮುಂದೆ ಸೆಲ್ಫಿ ತೆಗೆದುಕೊಳ್ಳುವಂತಹ ಅಪಾಯವನ್ನು ಅರಿತುಕೊಳ್ಳದೆ ನಾವು ಎಷ್ಟು ತಪ್ಪುಗಳನ್ನು ಮಾಡುತ್ತೇವೆ? ನಾವು ದೇವರಿಗೆ ವಿಧೇಯರಾಗಿ ಆತನ ರಕ್ಷಣೆಯ ಮಾರ್ಗದಲ್ಲಿ ಆತನ ಚಿತ್ತವನ್ನು ಮಾಡಬೇಕು. ನಾವು ಕರ್ತನಿಂದ ಆರಿಸಲ್ಪಟ್ಟವರು, ಪಾರಿವಾಳಗಳಂತೆ ನಿಷ್ಕಪಟರಾಗಿಯೂ, ಸರ್ಪಗಳಂತೆ ಬುದ್ಧಿವಂತರಾಗಿಯೂ ಇರಬೇಕೆಂದು ಕರ್ತನು ಮತ್ತಾಯ 10:16 ರಲ್ಲಿ ನಮಗೆ ಉಪದೇಶಿಸುತ್ತಾರೆ. ಹಾವನ್ನು ಹೆಚ್ಚಾಗಿ ದುಷ್ಟತನ ಮತ್ತು ಸೈತಾನನ ಸಂಕೇತವಾಗಿ ಬಳಸಲಾಗಿದ್ದರೂ, ಇಲ್ಲಿ ದೇವರು ಹಾವನ್ನು ಬುದ್ಧಿವಂತಿಕೆಯಿಂದ ನಡೆಯುವ ಸಂಕೇತವಾಗಿ ತೋರಿಸಿದ್ದಾರೆ. ಹಾವುಗಳಿಗೆ ಕಿವಿಗಳಿಲ್ಲ, ಆದ್ದರಿಂದ ಅವು ಸಣ್ಣದೊಂದು ಕಂಪನಗಳನ್ನು ಸಹ ಗ್ರಹಿಸುತ್ತವೆ ಮತ್ತು ಯಾವಾಗಲೂ ಎಚ್ಚರವಾಗಿರುತ್ತವೆ. ಅದೇ ರೀತಿ, ನಾವು ಕೂಡ ಜಾಗರೂಕತೆಯಿಂದ ವರ್ತಿಸಬೇಕಾದ ಸಮಯ ಇದು. ಇದು ಅತ್ಯಂತ ಬುದ್ಧಿವಂತರು ಸಹ ಮೋಸ ಹೋಗುವ ಸಮಯ. ಆದ್ದರಿಂದ, ದೇವರು ನಮಗೆ ಕೊಟ್ಟಿರುವ ಈ ಸಮಯದಲ್ಲಿ, ಆತ್ಮನ ಮಾರ್ಗದರ್ಶನದಲ್ಲಿ, ನಾವು ಪ್ರತಿಯೊಂದು ಹೆಜ್ಜೆಯನ್ನೂ ಬಹಳ ಎಚ್ಚರಿಕೆಯಿಂದ ಇಡೋಣ. ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು. (ಕೀರ್ತನೆ 146:5)

- M. ಹೆಪ್ಸಿಬಾ

 

ಪ್ರಾರ್ಥನಾ ಅಂಶ:

VBS ನಲ್ಲಿ ಕಲಿಸಿಕೊಡುವ ಸತ್ಯವೇದದ ವಾಕ್ಯಗಳು ಒಳ್ಳೆಯ ನೆಲದಲ್ಲಿ ಬಿದ್ದ ಬೀಜಗಳಂತೆ ಅವರ ಹೃದಯಗಳಲ್ಲಿ ಫಲ ನೀಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş