By Village Missionary Movement
Friday, 16-May-2025ಧೈನಂದಿನ ಧ್ಯಾನ(Kannada) – 16.05.2025
ದುಷ್ಟತನದ ದೊಡ್ಡ ಅಪಾಯ
"ನೀವು ಬದುಕುವ ಹಾಗೆ.... ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ದನ್ನು ಹುಡುಕಿರಿ" - ಆಮೋಸ 5:14
ಒಬ್ಬ ಹಿರಿಯ ಸೇವಕರು ತಮ್ಮ ಸಂದೇಶದಲ್ಲಿ ಒಂದು ಘಟನೆಯನ್ನು ವಿವರಿಸಿದರು. ಆ ಘಟನೆಯ ಸಾರಾಂಶ ಇದುವೇ. ಎರಡು ಊರುಗಳ ನಡುವೆ ದೀರ್ಘಕಾಲದ ಜಗಳ, ವಿರೋಧ. ಒಂದು ದಿನ, ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಒಂದು ಹಸು ಹೊರಟು ಹೋಯಿತು. ಸ್ಥಳೀಯ ವ್ಯಕ್ತಿಯೊಬ್ಬ ಹಸುವನ್ನು ಹಿಡಿದು ಅದು ಜೀವಂತವಾಗಿರುವಾಗಲೇ ಅದರ ಚರ್ಮ ಸುಲಿದುಬಿಟ್ಟ. ಹಸು ನೋವಿನಿಂದ ನರಳುತ್ತಿತ್ತು. ಅದು ತನ್ನ ಪ್ರಾಣ ಹೋಗುವವರೆಗೂ ಕಿರುಚುತ್ತಲೇ ಇತ್ತು. ಹಲವು ವರ್ಷಗಳು ಕಳೆದವು. ಆ ಹಸುವಿನ ಚರ್ಮ ಸುಲಿದ ವ್ಯಕ್ತಿಗೆ ಮದುವೆಯಾಗಿ ಏಳು ಗಂಡು ಮಕ್ಕಳು ಜನಿಸಿದರು. ಆ ಏಳು ಗಂಡುಮಕ್ಕಳ ತೋಳುಗಳು ಮತ್ತು ಕಾಲುಗಳು ಹಸುವಿನ ಕಾಲುಗಳಂತೆಯೇ ಇದ್ದವು.
ದೇವರನ್ನು ಅರಿಯದ ಒಬ್ಬ ವ್ಯಕ್ತಿ ಆ ಹಸುವಿಗೆ ಮಾಡಿದ್ದನ್ನು ನೋಡಿಯೇ ಅದಕ್ಕೆ ಪ್ರತಿಯಾಗಿ ಮಾಡಿದರೆಂದರೆ, ದೇವರನ್ನು ತಿಳಿದುಕೊಂಡು ಆತನಲ್ಲಿ ಸಂಪೂರ್ಣವಾಗಿ ನಂಬಿಕೆ ಇಟ್ಟಿರುವ ನಿಮಗೆ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವವರನ್ನು ಕಂಡು, ಕಾಣದಂತೆ ಇದ್ದಾರೆ ಎಂದು ಭಾವಿಸುತ್ತೀರಾ, "ಯುಕ್ತಿವಂತರ ಕೈಯಿಂದ ಏನೂ ಆಗದಂತೆ ಅವರ ಉಪಾಯಗಳನ್ನು ಭಂಗಪಡಿಸುತ್ತಾನೆ" (ಯೋಬ 5:12) ಎಂದು ಸತ್ಯವೇದವು ಹೇಳುತ್ತಿದೆಯಲ್ಲಾ. ಆದ್ದರಿಂದ ಚಿಂತಿಸಬೇಡಿ. ಅದೇ ರೀತಿ, ಯೆಹೋಶುವನ ದಿನಗಳ ನಂತರ, ಯೆಹೂದವು ಕರ್ತನ ನಿರ್ದೇಶನದ ಮೇರೆಗೆ ಕಾನಾನ್ಯರ ವಿರುದ್ಧ ಯುದ್ಧಕ್ಕೆ ಹೋಯಿತು. ಅಲ್ಲಿ ಅವರು ಬೆಜೆಕಿನಲ್ಲಿ ಅದೋನೀಬೆಜೆಕನನ್ನು ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿ ಹಾಕಿದರು. ಇದು ಕಾಕತಾಳೀಯವೆಂದು ತೋರಿದರೂ, ಇದರಲ್ಲಿ ದೇವರ ತೀರ್ಪು ಕೂಡ ಒಳಗೊಂಡಿದೆ. ಹೌದು, ನ್ಯಾಯಸ್ಥಾಪಕರು 1:7 ರಲ್ಲಿ, ಅದೋನೀಬೆಜೆಕನು - "ನಾನು ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿ ಬಿಟ್ಟ ಎಪ್ಪತ್ತು ಮಂದಿ ಅರಸರು ನನ್ನ ಮೇಜಿನ ಕೆಳಗೆ ಬೀಳುವ ಚೂರುಗಳನ್ನು ಕೂಡಿಸಿಕೊಂಡು ತಿನ್ನುತ್ತಿದ್ದರು; ನಾನು ಅವರಿಗೆ ಮಾಡಿದಂತೆಯೇ ದೇವರು ನನಗೆ ಮಾಡಿದ್ದಾನೆ" ಅಂದನು. ಅವರು ಅವನನ್ನು ಯೆರೂಸಲೇವಿುಗೆ ತೆಗೆದುಕೊಂಡು ಬರಲು ಅಲ್ಲಿ ಸತ್ತನು ಎಂಬುದಾಗಿ ಸತ್ಯವೇದವು ಹೇಳುತ್ತಿದೆ.
ಹೌದು, ಪ್ರಿಯರೇ! ಅದೋನೀಬೆಜೆಕನು ಎಪ್ಪತ್ತು ಅರಸರನ್ನು ನಡೆಸಿಕೊಂಡಂತೆಯೇ ಅವನಿಗೂ ಮಾಡಲಾಯಿತು. ಆ ಮೂಕ ಪ್ರಾಣಿಗೆ ಮಾಡಿದ ಹಾನಿಯು, ಆ ಕೃತ್ಯ ಎಸಗಿದ ವ್ಯಕ್ತಿಯ ಮೇಲೆ ದೇವರ ತೀರ್ಪಿನಂತೆ ಬಹಿರಂಗವಾಯಿತು. ದುಷ್ಟ ಉದ್ದೇಶಗಳು ಪಾಪವಂತೆ (ಜ್ಞಾನೋಕ್ತಿ 24:9), ಕುಯುಕ್ತಿಯುಳ್ಳವರು ದಾರಿತಪ್ಪಿದವರೇ ಸರಿ (ಜ್ಞಾನೋಕ್ತಿ 14:22) ಎಂದು ಸತ್ಯವೇದವು ನಮಗೆ ಎಚ್ಚರಿಸುತ್ತಿದೆ. ಯಾರ ವಿರುದ್ಧವೂ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಳ್ಳಬೇಡಿ. ಒಳ್ಳೆಯದನ್ನು ಯೋಚಿಸುವವರಿಗೆ ಜೀವನವೂ ಮತ್ತು ಗೌರವವೂ ಇದೆ. ಒಳ್ಳೆಯದನ್ನು ಮಾತ್ರ ಯೋಚಿಸೋಣ. ದೇವರ ಆಶೀರ್ವಾದವನ್ನು ಪಡೆಯೋಣ. ಹಲ್ಲೇಲೂಯಾ!.
- R.ಮಂಜುಳಾ
ಪ್ರಾರ್ಥನಾ ಅಂಶ:
VBS ಕಥೆಗಳು ಅನೇಕ ಮಕ್ಕಳ ಹೃದಯಗಳಲ್ಲಿ ಬದಲಾವಣೆಯನ್ನು ತರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482