By Village Missionary Movement
Saturday, 10-May-2025ಧೈನಂದಿನ ಧ್ಯಾನ(Kannada) – 10.05.2025
ದೇವರು ಕರುಣೆಯುಳ್ಳವರು
"ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?...." - ಲೂಕ 18:7
ಒಮ್ಮೆ ಇಂಗ್ಲೆಂಡ್‌ಗೆ ಹೋಗುತ್ತಿದ್ದ ಹಡಗೊಂದು ಧ್ವಂಸವಾಯಿತು. ಅದರಿಂದ ಎಲ್ಲರನ್ನೂ ದೋಣಿಯಲ್ಲಿ ಹತ್ತಿಸಿ ಕಳುಹಿಸಿದರು. ಆ ದೋಣಿಯಲ್ಲಿದ್ದ 12 ಮಹಿಳೆಯರಲ್ಲಿ ಒಬ್ಬರು ಕ್ರಿಸ್ತನ ಸೇವೆಯನ್ನು ಮಾಡುತ್ತಿದ್ದ ಶ್ರೀಮತಿ. ಮಾರ್ಗರೇಟ್ ವಿಲಿಯಮ್ಸ್ ರವರು. ಇತರ 11 ಮಹಿಳೆಯರು ಆಹಾರ ಮತ್ತು ನೀರಿಲ್ಲದೆ, ಬದುಕುಳಿಯುವ ಭರವಸೆಯೇ ಇಲ್ಲದೆ ಇದ್ದಾಗ, ಸಹೋದರಿ ಮಾರ್ಗರೇಟ್ ರವರು "ಪೌಲ ಮತ್ತು ಸೀಲರು ಜೈಲಿನಲ್ಲಿದ್ದಾಗ ದೇವರನ್ನು ಸ್ತುತಿಸಿ ಕರ್ತನ ಕಾರ್ಯವನ್ನು ನೋಡಿದರು. ನಾವು ಸಹ ಅದೇ ರೀತಿ ಸ್ತುತಿಸೋಣ" ಎಂದು ಹೇಳಿ, ಎಲ್ಲರೂ ಸ್ತುತಿಸುವಂತೆ ಮಾಡಿದರು. ಇವರ ಸ್ತುತಿಯ ಹಾಡುಗಳ ಶಬ್ಧವನ್ನು ಕೇಳಿ, ಒಂದು ದೋಣಿ ಇವರನ್ನು ರಕ್ಷಿಸಲು ಬಂತು. ದೋಣಿಯಲ್ಲಿದ್ದವರೆಲ್ಲರೂ ಸ್ತುತಿಸುವುದರಿಂದ, ಕಷ್ಟದ ಸಮಯದಲ್ಲಿ ದೇವರನ್ನು ನೋಡುವುದರಿಂದ ಸಿಗುವ ಪ್ರತಿಫಲವನ್ನು ನೋಡಿ ಕೃತಜ್ಞತೆ ಸಲ್ಲಿಸಿದರು.
ಇದೇ ರೀತಿ, ಕಷ್ಟದ ಸಮಯದಲ್ಲಿ ದೇವರನ್ನು ಸ್ತುತಿಸಿ ಹಾಡಿದಂತಹ ಒಬ್ಬ ದೇವರ ಮನುಷ್ಯನಿದ್ದಾನೆ. ದಾವೀದನು ದೇವರಿಂದ ರಾಜನಾಗಿ ಅಭಿಷೇಕಿಸಲ್ಪಟ್ಟಿದ್ದರೂ ಸಹ, ಸೌಲನು ದಾವೀದನನ್ನು ಕೊಲ್ಲುವ ಉದ್ದೇಶದಿಂದ ತನ್ನ ಜೀವಮಾನವಿಡೀ ಹಿಂಬಾಲಿಸಿದನು. ಆದರೆ ದಾವೀದನು ತನ್ನ ಎಲ್ಲಾ ಕಷ್ಟಗಳಲ್ಲಿಯೂ ಕರ್ತನ ಕಡೆಗೆ ನೋಡಿದರು, ಮತ್ತು ಅವರು ಎಡೆಬಿಡದೆ ಕರ್ತನನ್ನು ಹಾಡಿ ಸ್ತುತಿಸುತ್ತಾ, "ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು" (ಕೀರ್ತನೆ 63:4) ಎಂದು ಎಡೆಬಿಡದೆ ಕರ್ತನನ್ನು ಹಾಡಿ ಸ್ತುತಿಸಿದರು. ತಾನಿರುವ ಸ್ಥಿತಿ ಮರುಭೂಮಿಯೋ ಅಥವಾ ಗುಹೆಯೋ, ಯಾವುದಾದರೂ ದೇವರನ್ನು ಸ್ತುತಿಸಿ ದೇವರ ದಯೆಯನ್ನೂ ಕನಿಕರವನ್ನೂ ಪಡೆದುಕೊಂಡರು.
ಹೌದು, ಇಂದು ನಾವು ಹಾದುಹೋಗುತ್ತಿರುವ ಲೌಕಿಕ ಜೀವನದಲ್ಲಿ, ಸಮಸ್ಯೆಗಳು ಮತ್ತು ಹೋರಾಟಗಳ ನಡುವೆಯೂ ನಾವು ಹಾಡಿ ಸ್ತುತಿಸಿ ಬೇಡಿಕೊಳ್ಳುವಾಗ ದೇವರು ಸಹಾಯ ಮಾಡುವುದನ್ನು ನೋಡಲು ಸಾಧ್ಯ. ದೇವರು ಒಳ್ಳೆಯದನ್ನು ಮಾಡುವಾತನು ಮತ್ತು ಕರುಣೆಯುಳ್ಳವರು ಸಹಾಯ ಮಾಡದೆ ಇರುತ್ತಾರೋ, ಶೀಘ್ರದಲ್ಲೇ ಸಹಾಯ ಮಾಡುತ್ತಾರೆ ಎಂದು ಯೇಸು ಹೇಳಿದ್ದಾರೆ.
ಇಬ್ರಿ. 11:6 ರಲ್ಲಿ, ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು. ಖಂಡಿತವಾಗಿಯೂ ನಮ್ಮ ದೇವರು, ನಮ್ಮ ಎಲ್ಲಾ ಬೇಡಿಕೆಗಳಿಗೂ ಸದುತ್ತರವನ್ನು ನೀಡುತ್ತಾರೆ. ಆಮೆನ್.
- Mrs. ಫಾತಿಮಾ ಸೆಲ್ವರಾಜ್
ಪ್ರಾರ್ಥನಾ ಅಂಶ:
ಒಂದು ಹಳ್ಳಿಯಲ್ಲಿ VBS ತೆಗೆದುಕೊಳ್ಳಲು, ರೂ. 5000/- ನೀಡುವವರನ್ನು ದೇವರು ಎಬ್ಬಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482