By Village Missionary Movement
Friday, 09-May-2025ಧೈನಂದಿನ ಧ್ಯಾನ(Kannada) – 09.05.2025
ಮುದ್ರೆಯಾಗಿ ಪಡೆಯಲ್ಪಟ್ಟ ಪವಿತ್ರಾತ್ಮನು
"ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ; ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ." - ಎಫೆಸ 4:30
ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಒಮ್ಮೆ ಕೊಳಕು ಮುಖ ಹೊಂದಿರುವ ಹುಡುಗನಿಗೆ, "ನೀನು ಮುಖ ತೊಳೆದುಕೊಂಡು ಬಂದರೆ 25 ಸೆಂಟ್ ಹಣಕೊಡುತ್ತೇನೆ" ಎಂದು ಹೇಳಿದರು. ಆ ಹುಡುಗ ಮುಖ ತೊಳೆದುಕೊಂಡು ಬಂದ ಕೂಡಲೇ 25 ಸೆಂಟ್ ಹಣವನ್ನು ಕೊಟ್ಟು, "ಇದರಿಂದ ಏನು ಮಾಡುತ್ತೀಯ?" ಎಂದು ಕೇಳಿದರು. "ನೀವು ನಿಮ್ಮ ಕೂದಲನ್ನು ಕತ್ತರಿಸಿಕೊಂಡು ಬಂದರೆ, ನಾನು ನಿಮಗೆ ಕೊಟ್ಟುಬಿಡುತ್ತೇನೆ" ಎಂದನು. ಇಂದು ನಾವು ಇತರರ ತಪ್ಪುಗಳನ್ನು ಮಾತ್ರ ನೋಡುತ್ತೇವೆ, ನಮ್ಮ ತಪ್ಪುಗಳನ್ನು ನೋಡುವುದಿಲ್ಲ. ಯೋಹಾನ 16:8 ರಲ್ಲಿ "ಆತನು ಬಂದಾಗ ಪಾಪ ನೀತಿ ನ್ಯಾಯ ತೀರ್ವಿಕೆಯ ವಿಷಯಗಳಲ್ಲಿಯೂ ಲೋಕವನ್ನು ಗದರಿಸಿ ಎಚ್ಚರಿಸುತ್ತಾರೆ" ಎಂದು ಹೇಳಲ್ಪಟ್ಟಿದೆ. ಪವಿತ್ರಾತ್ಮನು ನಮ್ಮನ್ನು ಗದರಿಸಿ ಎಚ್ಚರಿಸಲು ನಮ್ಮೊಂದಿಗಿದ್ದಾರೆ.
ಪವಿತ್ರಾತ್ಮನು ತನ್ನೊಂದಿಗೆ ಸದಾಕಾಲ ಇರಬೇಕೆಂದು ಅರಸನಾದ ದಾವೀದನು ಬೇಡಿಕೊಂಡರು. ಪವಿತ್ರಾತ್ಮನು ಸದಾಕಾಲ ಇರುವಾಗ ಪಾಪ ಮಾಡುವುದು ಅಸಾಧ್ಯವೆಂದು ಕೀರ್ತನೆ 51 ರಲ್ಲಿ ಅವರು ದೃಢವಾಗಿ ನಂಬಿದ್ದರು. 1 ಕೊರಿಂಥ 3:16 ರಲ್ಲಿ, ಪೌಲನು, "ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? ಎನ್ನುತ್ತಾರೆ.
ನಾವು ದೇವರ ಆಲಯ (ಪ್ರಾರ್ಥನಾ ಮನೆ) ಎಂಬುದನ್ನು ಮರೆತು, ಇತರರಿಗಾಗಿ ಪ್ರಾರ್ಥಿಸಬೇಕಾದ ನಾವು, ಇತರರನ್ನು ಪ್ರೀತಿಸದೆ ಇದ್ದೇವೆ. ಪೇತ್ರನಿಗೆ ಕೊರ್ನೇಲ್ಯನನ್ನು ಪ್ರೀತಿಸಲು ಸಾಧ್ಯವಾಗಲಿಲ್ಲ, ದೇವರು ಪಕ್ಷಪಾತಿಯಲ್ಲ ಎಂದು ವಿವರಿಸಲು ಅವರಿಗೆ ಒಂದು ದರ್ಶನ ಬೇಕಾಯಿತು. ಇಂದು ನಾವು ಪಕ್ಷಪಾತದಿಂದ ದೇವರನ್ನು ಮತ್ತು ಪವಿತ್ರಾತ್ಮನನ್ನು ದುಃಖಿಸುತ್ತೇವೆ. ಒಳ್ಳೆಯ ಸಮಾರ್ಯನಂತೆ ವರ್ತಿಸಬೇಕಾದ ನಾವು, ಲೇವಿಯರು ಮತ್ತು ಯಾಜಕರ ಹಾಗೆ ದೂರ ಹೋಗುತ್ತೇವೆ. ನಾವು ಪವಿತ್ರಾತ್ಮನನ್ನು ದುಃಖಪಡಿಸಿದರೆ, ಆತನು ನಮ್ಮಿಂದ ಹೊರಟುಹೋಗುತ್ತಾರೆ. ಆತನು ನಿಷೇಧಿಸಿದ್ದನ್ನು ಅರಿಯದ ಸಂಸೋನನಂತೆ ನಾವು ಕಾಣಲ್ಪಡುತ್ತೇವೆ. ಪವಿತ್ರಾತ್ಮವನ್ನು ಹೊಂದಿದ್ದವರಾಗಿ ತಿಳಿಯಲ್ಪಟ್ಟಿದ್ದ ದಾನಿಯೇಲನ ಹಾಗೆ, ಯೋಸೇಫನ ಹಾಗೆ, ಹನೋಕನ ಹಾಗೆ, ನೋಹನ ಹಾಗೆ ದೇವರೊಂದಿಗೆ ಸಂಚರಿಸುವವರಾಗಿದ್ದರೆ, ಆತನು ನಮ್ಮೊಂದಿಗಿರುವುದನ್ನು ತಿಳಿದುಕೊಳ್ಳಬಹುದು.
ಪರಿಶುದ್ಧ ಪೌಲ ಅಪೊಸ್ತಲನ ಹಾಗೆ "ಕ್ರಿಸ್ತನು ನನಗೆ ಜೀವವು, ಸಾವು ನನಗೆ ಲಾಭವು" ಎಂದು ಹೇಳೋಣ. ಈ ಒಂದು ಹೇಳಿಕೆಯು ನಾವು ಈ ಲೋಕಕ್ಕೆ ಸೇರಿದವರಲ್ಲ, ಸಾವು ನಿಶ್ಚಿತ ಮತ್ತು ಮರಣದ ಮೂಲಕ ನಾವು ನಿತ್ಯಜೀವವಾಗಿರುವ ಕ್ರಿಸ್ತನನ್ನು ಸ್ವೀಕರಿಸಲು ಪರಲೋಕಕ್ಕೆ ಹೋಗುತ್ತೇನೆ ಎಂಬ ನೆನಪಿನೊಂದಿಗೆ ಕಾಣಲ್ಪಡೋಣ. ಪರಲೋಕಕ್ಕೆ ಕರೆದೊಯ್ಯುವವರು ಪವಿತ್ರಾತ್ಮನೇ! ಆಮೆನ್.
- Rev. D. ಸೆಲ್ವರಾಜ್
ಪ್ರಾರ್ಥನಾ ಅಂಶ:
VBS ಸೇವೆಗಾಗಿ ಸ್ವಯಂಸೇವಕರಾಗಿ ಸೇವೆ ಮಾಡುವವರನ್ನು ದೇವರು ನಮ್ಮೊಂದಿಗೆ ಸೇರಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482