By Village Missionary Movement
Thursday, 08-May-2025ಧೈನಂದಿನ ಧ್ಯಾನ(Kannada) – 08.05.2025
ನನಗೆ ಅರ್ಹತೆ ಇದೆಯಾ?
"...ಕರ್ತನು ಶೀಲೋವಿನಲ್ಲಿ ತನ್ನ ವಾಕ್ಯದಿಂದ ಸಮುವೇಲನಿಗೆ ತನ್ನನ್ನು ಪ್ರಕಟಿಸಿಕೊಂಡನು" - 1 ಸಮುವೇಲ 3:21
ಮಾನಾಸಿ ಎಂಬ 12 ವರ್ಷದ ಚೀನಾ ದೇಶದ ಬಾಲಕನ ತಂದೆಯನ್ನು ಹುಡುಕಿಕೊಂಡು ಕುದುರೆಯ ಮೇಲೆ ವ್ಯಕ್ತಿಯೊಬ್ಬರು ವೇಗವಾಗಿ ಬಂದರು. ಬೋಧಕರಾದ ಅವರ ತಂದೆ ಮನೆಯಲ್ಲಿ ಇಲ್ಲದ ಕಾರಣ ಅವರು ಈ ಚಿಕ್ಕ ಹುಡುಗನ ಬಳಿಗೆ ಬಂದು, "ನನ್ನ ಆಪ್ತ ಸ್ನೇಹಿತನ ಮನೆಯಲ್ಲಿರುವ ಒಂದು ಮಹಿಳೆಗಾಗಿ ಪ್ರಾರ್ಥಿಸಬೇಕು. ಅವಳು ತನ್ನ ಬಟ್ಟೆಗಳನ್ನು ಹರಿದುಕೊಂಡು ಕೂದಲನ್ನು ಕಿತ್ತುಕೊಳ್ಳುತ್ತಾಳೆ. ವಸ್ತುಗಳನ್ನು ಹೊರಗೆ ಎಸೆಯುತ್ತಾಳೆ. ಹಾದುಹೋಗುವವರಿಗೆ ಹೊಡೆಯುತ್ತಾಳೆ. ಯಾರಿಂದಲೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ನಿನ್ನ ತಂದೆ ಬರಲು ಸಮಯ ಆಗುವುದಾದರೆ, ನೀನು ಬಂದು ಪ್ರಾರ್ಥಿಸು... ನೀನು ಕೂಡ ಯೇಸುವಿನ ಮಗು ತಾನೇ" ಎಂದು ಅವನನ್ನು ಬೇಡಿ ಕರೆದರು.
ಮಾನಾಸಿಯು ಯೇಸುವಿಗೆ ಸಂಪೂರ್ಣವಾಗಿ ತನ್ನನ್ನು ಒಪ್ಪಿಸಿಕೊಟ್ಟಿದ್ದದರಿಂದ ಅವರೊಂದಿಗೆ ಹೋದನು. ಅವನು ದಾರಿಯುದ್ದಕ್ಕೂ ಪ್ರಾರ್ಥಿಸುತ್ತಲೇ ಇದ್ದನು. "ನಾನು ದೇವರಿಂದ ಉಪಯೋಗಿಸಲ್ಪಡಲು ಅರ್ಹನೇ? ನನ್ನ ಹೃದಯ ಶುದ್ಧವಾಗಿದೆಯೇ? ನನ್ನೊಳಗೆ ಪಾಪದ ಕಲೆಗಳೇನಾದರೂ ಇವೆಯೇ?" ಅವನು ತನ್ನನ್ನು ತಾನು ಪರೀಕ್ಷಿಸಿಕೊಳ್ಳುತ್ತಾ ಪ್ರಾರ್ಥಿಸುತ್ತಾ ಮುಂದುವರೆದನು. ಆ ಸ್ತ್ರೀಗಾಗಿ ಪ್ರಾರ್ಥಿಸುವುದು ದೇವರ ಚಿತ್ತವೆಂದು ಅರಿತುಕೊಂಡು, ಅವನು "ಚಿಕ್ಕ ಸಮುವೇಲ" ನಂತೆ ದೇವರಿಗೆ ವಿಧೇಯನಾದನು. ಅವನ ಆಗಮನದ ಸುದ್ದಿ ತಿಳಿದ ದೆವ್ವ, "ಮಾನಾಸಿ ಎಂಬ ದೈವೀಕ ಮನುಷ್ಯ ಬರುತ್ತಿದ್ದಾನೆ, ನನ್ನನ್ನು ಬಿಟ್ಟುಬಿಡಿ, ನಾನು ಹೊರಟು ಹೋಗುತ್ತೇನೆ, ನನ್ನಿಂದ ಅವನನ್ನು ಭೇಟಿಯಾಗಲು ಸಾಧ್ಯವಿಲ್ಲ" ಎಂದಿತು.
ಮನೆಯೊಳಗೆ ಪ್ರವೇಶಿಸಿದ ಮಾನಾಸಿ, "ಕರ್ತನೇ, ನಿನ್ನ ನಾಮವನ್ನು ಮಹಿಮೆಪಡಿಸು" ಎಂದು ಪ್ರಾರ್ಥಿಸುತ್ತಾ, ಒಂದು ಹಾಡನ್ನು ಹಾಡಿ, ಮೊಣಕಾಲೂರಿ ಪ್ರಾರ್ಥಿಸಿ, ಯೇಸುವಿನ ಹೆಸರಿನಲ್ಲಿ ಆ ಸ್ತ್ರೀಯನ್ನು ಬಿಟ್ಟುಹೋಗುವಂತೆ ದೆವ್ವಕ್ಕೆ ಆಜ್ಞಾಪಿಸಿದನು. ತಕ್ಷಣ ದೆವ್ವವು ಹೊರಟುಹೋಯಿತು. ಅವಳಿಗೆ ಹುಷಾರಾಯಿತು. ಇದನ್ನು ನೋಡಿದ ಅನೇಕರು ಆ ದಿನದಿಂದ ಕರ್ತನನ್ನು ಅಂಟಿಕೊಳ್ಳಲು ಪ್ರಾರಂಭಿಸಿದರು. ಕರ್ತನಾದ ಯೇಸುವಿನ ನಾಮವು ಮಹಿಮೆ ಹೊಂದಿತು. ಇದನ್ನು ಓದುತ್ತಿರುವ ದೇವರ ಪ್ರಿಯ ಮಗುವೇ, ಸೇವೆಗೂ ನನಗೂ ಯಾವುದೇ ಸಂಬಂಧವಿಲ್ಲ, ನಾನು ಅರ್ಹನಲ್ಲ ಅಥವಾ ನನಗೆ ಸೇವೆ ಮಾಡುವುದು ಹೇಗೆಂದು ತಿಳಿದಿಲ್ಲ ಎಂದು ಭಾವಿಸಿ ನಿಮ್ಮನ್ನು ನೀವೇ ಒಂಟಿಯಾಗಿರಿಸಿಕೊಳ್ಳಬೇಡಿ. ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು. (2 ಕೊರಿಂಥ 3:5)
ಯೇಸುಕ್ರಿಸ್ತನ ರಕ್ತದಿಂದ ಯಾರ್ಯಾರ ಪಾಪಗಳೆಲ್ಲಾ ತೊಳೆಯಲ್ಪಟ್ಟು ಶುದ್ಧೀಕರಿಸಲ್ಪಟ್ಟವರಾಗಿ ಇದ್ದೇವೋ ಅಷ್ಟೂ ಜನರು ದೇವರ ಸೇವೆ ಮಾಡಲು ಅರ್ಹರೇ. ದಂಡು ಎಂಬ ದೆವ್ವದಿಂದ ಬಿಡುಗಡೆಯಾದ ಸಮಾಧಿಯಲ್ಲಿರುವ ಮನುಷ್ಯನಿಗೂ ಸಹ ಯೇಸು ತನ್ನ ಸ್ವಂತ ಜನರಿಗೆ ಸಾಕ್ಷಿ ಹೇಳಲು "ಸಾಕ್ಷಿಯ ಸೇವೆಯನ್ನು" ಕೊಡಲ್ಪಟ್ಟಿದ್ದರೇ. ಆದುದರಿಂದ, ಕ್ರಿಸ್ತನ ಹೆಸರನ್ನು ಹೇಳುವ ಯಾವನಾದರೂ ತನ್ನನ್ನು ಅನೀತಿಯಿಂದ ಶುದ್ಧೀಕರಿಸಿಕೊಂಡರೆ, ಅವನು ಪರಿಶುದ್ಧನಾದ ಕೂಡಲೇ ಯಜಮಾನನಿಗೆ ಉಪಯುಕ್ತವಾಗಿರುವ ಗೌರವವುಳ್ಳ ಪಾತ್ರೆಯಾಗಿರುತ್ತಾನೆ, ಅವನು ಅನುಭವಸ್ತನಾಗಿಯೂ, ಎಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಲು ಅರ್ಹನಾಗಿಯೂ ಇದ್ದಾನೆ. ಆದ್ದರಿಂದ, ಪ್ರಿಯರೇ! ನಾವು ಪ್ರತಿದಿನ ಯೇಸುವಿನ ರಕ್ತದಿಂದ ಶುದ್ಧೀಕರಿಸಲ್ಪಟ್ಟವರಾಗಿ ಸೇವೆ ಮಾಡೋಣ! ಆಗ "ಯೇಸು" ಎಂಬ ಹೆಸರು ಮಹಿಮೆ ಹೊಂದುತ್ತದೆ.
- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್
ಪ್ರಾರ್ಥನಾ ಅಂಶ:
ಎಲ್ಲಾ ಹಳ್ಳಿಗಳಲ್ಲಿ VBS ಸೇವೆಗೆ ತೆರೆದ ಬಾಗಿಲನ್ನು ದೇವರು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482