By Village Missionary Movement
Thursday, 20-May-2021ಧೈನಂದಿನ ಧ್ಯಾನ(Kannada) – 20.05.2021
ಬರಿದಾಗಿರುವ ಸಮಾಧಿ
"ಯೇಸು ಆಕೆಯನ್ನು - ಅಮ್ಮಾ, ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ? ಎಂದು ಕೇಳಲು..." - ಯೋಹಾನ 20:15
ಯೇಸು ಶಿಲುಬೆಯಲ್ಲಿ ಜಡಿಯಲ್ಪಟ್ಟು ಮರಣ ಹೊಂದಿದ, ನಂತರ ಅವರನ್ನು ಒಂದು ಹೊಸ ಸಮಾಧಿಯಲ್ಲಿ ಇಟ್ಟರು. ಮೂರನೇ ದಿನ ಯೇಸುಕ್ರಿಸ್ತನ ಶರೀರಕ್ಕೆ ಪರಿಮಳ ತೈಲವನ್ನು ಹಚ್ಚುವುದಕ್ಕಾಗಿ ಮಗ್ಧಲದ ಮರಿಯಳು ಮತ್ತು ಕೆಲವು ಸ್ತ್ರೀಯರು ಸಮಾಧಿಯ ಬಳಿಗೆ ಬಂದಾಗ, ಸಮಾಧಿಯನ್ನು ಮುಚ್ಚಿದ್ದ ಕಲ್ಲು ತೆರೆಯಲ್ಪಟ್ಟಿರುವದನ್ನು ಯೇಸುಕ್ರಿಸ್ತನ ಶರೀರ ಅಲ್ಲಿ ಇಲ್ಲದಿರುವುದನ್ನು, ಸಮಾಧಿಯು ಬರಿದಾಗಿ ಇರುವುದನ್ನು ಕಂಡು ಗಾಬರಿಗೊಂಡರು. ಬಂದವರೆಲ್ಲಾ ಮನೆಗೆ ಹಿಂತಿರುಗಿದರೂ, ಮಗ್ಧಲದ ಮರಿಯಳು ಮಾತ್ರ ಹಿಂತಿರುಗದೇ ಸಮಾಧಿಯ ಬಾಗಿಲಲ್ಲೇ ನಿಂತು ಅಳುತ್ತಿದ್ದಳು. ಆಗ ಯೇಸುಕ್ರಿಸ್ತನು ಬಂದು, "ಸ್ತ್ರೀಯೇ ಯಾಕೆ ಅಳುತ್ತಿದ್ದೀ" ಎಂದರು. ಅವಳು ಅವರನ್ನು ತೋಟಗಾರನೆಂದು ನೆನೆಸಿ, " ಅಯ್ಯಾ ಅವರನ್ನು ಇಟ್ಟಿರುವ ಸ್ಥಳವು ಗೊತ್ತಿದ್ದರೆ ಹೇಳು. ಕೂಡಲೇ ಹೋಗಿ ಅವರನ್ನು ಎತ್ತಿಕೊಳ್ಳುತ್ತೇನೆ" ಎಂದಳು. ಎಂಥಾ ಪ್ರೀತಿ ನೋಡಿರಿ! ಇವಳು ಒಂದು ಸ್ತ್ರೀ, ಯೌವನದಲ್ಲಿ ಸತ್ತುಹೋದ ಯೇಸುಕ್ರಿಸ್ತನ ಶರೀರವನ್ನು ಹೇಗೆ ಒಬ್ಬಂಟಿಯಾಗಿ ಎತ್ತಲು ಸಾಧ್ಯ? ಆದರೂ ಅವರ ಮೇಲಿರುವ ಅಪರಿಮಿತವಾದ ಪ್ರೀತಿಯಿಂದಲೇ ನಾನೇ ಹೋಗಿ ಅವರನ್ನು ಎತ್ತಿಕೊಳ್ಳುತ್ತೇನೆ ಎಂದಳು. ಕೂಡಲೇ ಯೇಸು ಅವಳಿಗೆ ತನ್ನನ್ನು ಪ್ರಕಟಿಸಿಕೊಳ್ಳಲು ಚಿತ್ತಗೊಂಡರು. ಪುನರುತ್ಥಾನನಾದ ಯೇಸುವನ್ನು ಮೊಟ್ಟಮೊದಲು ನೋಡುವ ಭಾಗ್ಯವು ಮಗ್ಧಲದ ಮರಿಯಳಿಗೇ ಸಿಕ್ಕಿತು. ಹಿರಿಯ ಶಿಷ್ಯನಾದ ಪೇತ್ರನಿಗೂ, ಪ್ರೀತಿಯ ಶಿಷ್ಯನಾದ ಯೋಹಾನನಿಗೂ ಸಿಗಲಿಲ್ಲ. ಯೇಸುವನ್ನು ಮೊಟ್ಟಮೊದಲು ದರ್ಶಿಸುವ ಮಟ್ಟಿಗೆ ಮಗ್ಧಲದ ಮರಿಯಳು ಅವರ ಮೇಲೆ ಅಷ್ಟೊಂದು ಪ್ರೀತಿಯನ್ನಿಟ್ಟಿದ್ದಳು. ಆ ನಿಮಿಷದಿಂದ ನಂಬಿಕೆಯಿಲ್ಲದೆ ಚಿಂತೆಯಿಂದಿದ್ದ ಅವಳ ಆಲೋಚನೆಯಲ್ಲಿ ಹೊಸ ನಂಬಿಕೆ ಚಿಗುರಿತು, ಅವಳ ಬರಿದಾಗಿದ್ದ ಸ್ಥಿತಿಯು ಮಾರ್ಪಟ್ಟಿತು.
ಅವರ ಸಮಾಧಿಯು ಇದುವರೆಗೂ ಬರಿದಾಗಿಯೇ ಇದೆ. ಅದೇ, ಅವರು ಬಹುಬಲದಿಂದ ಪುನರುತ್ಥಾನರಾದದ್ದಕ್ಕೆ ಸಾಕ್ಷಿಯಾಗಿದೆ. ಹಲವು ವಿಧವಾದ ಸಮಸ್ಯೆಗಳಿಂದ ಮನೋ ದುಃಖದಿಂದ ಅಳುತ್ತಿದ್ದೀರ? ಅವರು ಜೀವಂತವಾಗೆದ್ದು ತಂದೆಯ ಬಲಪಾರ್ಶ್ವದಲ್ಲಿ ಕುಳಿತಿರುವುದು ನಿಜವಾದರೆ ನನಗೆ ಈ ಪಾಡುಗಳು? ಉಪದ್ರವಗಳು ಯಾಕೆ ಎಂದು ಕಳವಳಗೊಳ್ಳುತ್ತಿದ್ದೀರ? ನಿಮ್ಮ ಕಣ್ಣೀರನ್ನು ದೇವರು ನೋಡುತ್ತಿದ್ದಾರೆ. ಸ್ತ್ರೀಯೇ ಯಾಕೆ ಅಳುತ್ತಿದ್ದೀ? ಎಂದು ಕೇಳಿ, ಮಗ್ಧಲದ ಮರಿಯಳ ಕಣ್ಣೀರನ್ನು ಒರೆಸಿದ ಯೇಸು ಇನ್ನೂ ನಮ್ಮ ಬಳಿ ನಿಂತಿದ್ದಾರೆ. ನಮ್ಮನ್ನೂ ಸಂತೈಸುತ್ತಾರೆ, ಸಂತೋಷವನ್ನು ಕೊಡುತ್ತಾರೆ. ನಾವು ಮಗ್ಧಲದ ಮರಿಯಳ ಹಾಗೆ ಪೂರ್ಣ ಮನಸ್ಸಿನೊಂದಿಗೆ, ಪೂರ್ಣ ಪ್ರೀತಿಯೊಂದಿಗೆ ಅವರನ್ನು ಹುಡುಕಿದರೆ, ಜೀವಂತವಾಗಿ ಎದ್ದ ಯೇಸುಕ್ರಿಸ್ತನು ನಮ್ಮ ಕಣ್ಣೀರನ್ನು ಒರೆಸುತ್ತಾರೆ.
ಯೇಸುಕ್ರಿಸ್ತನು ಜೀವಂತ (ಪುನರುತ್ಥಾನ) ವಾಗಿ ಎದ್ದ ಸಂದೇಶ ಈಸ್ಟರ್ ದಿನದಂದು ಮಾತ್ರ ನೆನೆಸಬೇಕಾದ ಸಂದೇಶವಲ್ಲ. ಒಂದೊಂದು ದಿನವೂ ನಮ್ಮ ಬಿದ್ದುಹೋದ ಜೀವನವನ್ನು ಉಜ್ಜೀವಿಸುವಂತಹ ಜೀವವುಳ್ಳ ಸಂದೇಶ.
- Mrs. ಭುವನ ಧನಪಾಲ್
ಪ್ರಾರ್ಥನಾ ಅಂಶ:-
12 ಮಿಷನರಿಗಳ ಮೂಲಕ ಆಯಾ ರಾಜ್ಯಗಳಲ್ಲಿ ಸಮರ್ಪಿಸಿಕೊಂಡಿರುವ 500 ಜನ ಮಿಷನರಿಗಳನ್ನು ದೇವರು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482