Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.05.2025
Share:

By Village Missionary Movement

Tuesday, 06-May-2025

ಧೈನಂದಿನ ಧ್ಯಾನ(Kannada) – 06.05.2025

 

ನಿಮ್ಮ ಕೈಲಾದಷ್ಟು ಮಾಡಿ.

 

"ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ;…" - ಮಾರ್ಕನು 14:8

 

ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಇದ್ದು ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಆ ಭರಣಿಯನ್ನು ಒಡೆದು ತೈಲವನ್ನು ಆತನ ತಲೆಯ ಮೇಲೆ ಹೊಯಿದಳು. ಕೆಲವರು ತಮ್ಮೊಳಗೆ ಕೋಪಗೊಂಡು - ಈ ತೈಲವನ್ನು ನಷ್ಟಮಾಡಿದ್ದೇಕೆ? ಇದನ್ನು ಮುನ್ನೂರು ಹಣಕ್ಕಿಂತ ಹೆಚ್ಚು ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಎಂದು ಹೇಳಿ ಆಕೆಗೆ ಛೀ ಹಾಕಿದರು. ಆಗ ಯೇಸು - ಈಕೆಯನ್ನು ಬಿಡಿರಿ. ಈಕೆಗೆ ಯಾಕೆ ತೊಂದರೆಕೊಡುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. ಅವರು ಏಕೆ ಅವಳ ಕಾರ್ಯಗಳನ್ನು ಹೊಗಳಿ ಅವಳ ಸೇವೆಯನ್ನು ಸ್ವೀಕರಿಸಿದರು? ಯೇಸು ಕ್ರಿಸ್ತನ ಮೇಲಿನ ಪ್ರೀತಿಯಿಂದಾಗಿ, ಅವಳು ತನ್ನಲ್ಲಿದ್ದ ಅತ್ಯುತ್ತಮವಾದದ್ದನ್ನು ಅವರಿಗೆ ನೀಡಲು ಸಿದ್ಧಳಾಗಿದ್ದಳು. ಅವಳು ತನ್ನಿಂದ ಸಾಧ್ಯವಾದಷ್ಟು ಮಾಡಿದಳು.   

 

ದೊರ್ಕಳು ಒಬ್ಬ ವಿಧವೆಯಾಗಿದ್ದಳು. ಆದಾಗ್ಯೂ, ಅವಳು ತನ್ನ ಹೊಲಿಗೆ ಕೌಶಲ್ಯವನ್ನು ಬಳಸಿಕೊಂಡು ಅನೇಕ ಮಹಿಳೆಯರಿಗೆ ಬಟ್ಟೆಗಳನ್ನು ಹೊಲಿದು ಕೊಡುತ್ತಿದ್ದಳು. ಅವಳು ಬಡವರಿಗೆ ಮತ್ತು ನಿರ್ಗತಿಕರಿಗೆ ತನ್ನಿಂದ ಸಾಧ್ಯವಾದದ್ದನ್ನು ಮಾಡಿದ ಕಾರಣ, ಅವಳ ಮರಣದ ನಂತರವೂ, ಪೇತ್ರ ಎಂಬ ಶಿಷ್ಯನ ಪ್ರಾರ್ಥನೆಯ ಮೂಲಕ ಅವಳು ಪುನರುತ್ಥಾನಗೊಂಡಳು. ನೀವು ಸಹ ನಿಮ್ಮಿಂದ ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡುತ್ತೀರಾ? ಶಿಕ್ಷಕರು ಟ್ಯೂಷನ್ ಮಾಡುವ ಮೂಲಕ ಬಡ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಮುನ್ನಡೆಯಲು ಸಹಾಯ ಮಾಡಬಹುದು. ಯಾವುದೇ ಕೆಲಸ ಮಾಡಲು ಸಾಧ್ಯವಾಗದವರು ಸಹ ಪ್ರಾರ್ಥನೆ ಸೇವೆಯನ್ನು ಮಾಡಬಹುದು. ನಾವು ಇತರರಿಗಾಗಿ, ದೇಶಕ್ಕಾಗಿ, ಸಭೆಗಳಿಗಾಗಿ, ಸೇವಕರುಗಳಿಗಾಗಿ, ಸೇವಾ ಸಂಸ್ಥೆಗಳಿಗಾಗಿ ಮತ್ತು ರಕ್ಷಣೆ ಹೊಂದದ ಜನರ ರಕ್ಷಣೆಗಾಗಿ ವಿಜ್ಞಾಪನೆ ಮಾಡಿ ಪ್ರಾರ್ಥಿಸಬಹುದು. "ಅವಳು ತನ್ನ ಕೈಲಾದಷ್ಟು ಮಾಡಿದಳು" ಎಂದು ಹೇಳಿ ಕರ್ತನು ಖಂಡಿತವಾಗಿಯೂ ಹೊಗಳುತ್ತಾರೆ.  

 

ಸತ್ಯವೇದದಲ್ಲಿ, ದೇವಾಲಯದಲ್ಲಿ ಹಗಲಿರುಳು ಉಪವಾಸ ಮಾಡಿ ಪ್ರಾರ್ಥಿಸುತ್ತಿದ್ದ ವಿಧವೆ ತಾಯಿಯ ಹೆಸರು ಹನ್ನಳು. ಎಷ್ಟು ದೊಡ್ಡ ಭಾಗ್ಯವನ್ನು ಪಡೆದಳೆಂದರೆ ಮರಿಯಳು ಕರ್ತನಾದ ಯೇಸು ಕ್ರಿಸ್ತನನ್ನು ಮಗುವಾಗಿದ್ದಾಗ ದೇವಾಲಯಕ್ಕೆ ತಂದದ್ದನ್ನು ನೋಡಿ, ಕೃತಜ್ಞತೆ ಸಲ್ಲಿಸಿದಳು. ಅದೇ ರೀತಿ, ಯೇಸುವಿಗಾಗಿ ನಮ್ಮಿಂದ ಸಾಧ್ಯವಾದಷ್ಟನ್ನು ಮಾಡಬೇಕೆಂದು ಆತನು ನಿರೀಕ್ಷಿಸುತ್ತಿದ್ದಾರೆ.   

 

ಪ್ರೀತಿಯ ಸಹೋದರ ಸಹೋದರಿಯರೇ, ಯೇಸುವಿಗಾಗಿ ನಿಮ್ಮಿಂದ ಸಾಧ್ಯವಾದಷ್ಟನ್ನು ಮಾಡಲು ನೀವು ಸ್ವಯಂಸೇವಕರಾಗಿ ಮುಂದೆ ಬರುತ್ತೀರಾ? ಬಹುಶಃ ನಾವು ಮಾಡುವ ಕೆಲಸವು ನಮ್ಮ ದೃಷ್ಟಿಯಲ್ಲಿ ಚಿಕ್ಕದಾಗಿ ಕಾಣಿಸಬಹುದು, ಆದರೆ ಕರ್ತನ ದೃಷ್ಟಿಯಲ್ಲಿ ಅದು ದೊಡ್ಡದಾಗಿರುತ್ತದೆ. ಆದ್ದರಿಂದ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ, ನಿಮ್ಮ ಪೂರ್ಣ ಹೃದಯದಿಂದ ನಿಮಗೆ ಸಾಧ್ಯವಾದಷ್ಟು ಮಾಡಿ. ಆಮೆನ್!

- Mrs. ಭುವನ ಧನಪಾಲನ್

 

ಪ್ರಾರ್ಥನಾ ಅಂಶ:

6,000 ಹಳ್ಳಿಗಳಲ್ಲಿ VBS ಸೇವೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş