By Village Missionary Movement
Sunday, 04-May-2025ಧೈನಂದಿನ ಧ್ಯಾನ(Kannada) – 04.05.2025 (Kids Special)
ಇರುವುದನ್ನು ಕೊಡು.
"...ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು" - 2 ಕೊರಿಂಥ 9:7
ನನ್ನ ಪ್ರೀತಿಯ ಮುದ್ದು ಮಕ್ಕಳೇ! ರಜೆಯ ದಿನಗಳು ತುಂಬಾ ಜಾಲಿಯಾಗಿದೆಯಾ? ಶಾಲೆ ಇಲ್ಲ, ಹೋಂವರ್ಕ್ ಇಲ್ಲ, ಮತ್ತು ಓದಲು ಬೆಳಿಗ್ಗೆ ಎದ್ದೇಳುವ ಅಗತ್ಯವಿಲ್ಲ. ಏನು ಪುಟಾಣಿಗಳೇ! ರಜೆಯ ದಿನಗಳನ್ನು ಬಳಸಿಕೊಳ್ಳಲು VBS ಇದೆ ಅಲ್ವಾ. ಯಾರೂ ತಪ್ಪಿಸಿಕೊಳ್ಳದೇ ಹಾಜರಾಗಬೇಕು. ನಮ್ಮ ವಿಲೇಜ್ ಟಿವಿಯಲ್ಲಿ 5 ದಿನಗಳ VBS ನೋಡಲು ಮರೆಯಬೇಡಿ. ನಿಮ್ಮ ಎಲ್ಲಾ ಸ್ನೇಹಿತರಿಗೂ ಹೇಳಿ. ಸರಿ, ಇವತ್ತು ಒಂದು ಕಥೆ ಕೇಳೋಣ್ವಾ?
ರೋಜರ್ ಎಂಬ ಪುಟ್ಟ ಹುಡುಗ ಬುಗುರಿಯೊಂದಿಗೆ ಆಟವಾಡುತ್ತಿದ್ದ. ಅವನಿಗೆ ಗೋಲಿ ಆಡೋಕೆ ತುಂಬಾ ಇಷ್ಟ. ಅವನ ಕೈಯಲ್ಲಿ ಯಾವಾಗಲೂ ಬುಗುರಿ ಮತ್ತು ಗೋಲಿ ಇರುತ್ತಿತ್ತು. ಆಟವಾಡುತ್ತಾ ಆಲಯದೊಳಕ್ಕೆ ಹೋದನು. ಅಲ್ಲಿ ಚರ್ಚ್ ಕಟ್ಟಲು ಹಣ ಸಂಗ್ರಹಿಸಬೇಕು ಎಂದು ಬೋಧಕರು ಹೇಳಿದಾಗ, ಎಲ್ಲರೂ ಕಾಣಿಕೆ ಚೀಲದಲ್ಲಿ ಹಣವನ್ನು ಹಾಕಿ, ಚೆಕ್ ನೀಡಿ, ಜಿ-ಪೇ ಮಾಡಿದರು. ಪುಟ್ಟ ಹುಡುಗ ರೋಜರ್‌ಗೂ ಕೊಡಲು ಆಸೆ. ಆದರೆ ಹಣವಿಲ್ಲವಲ್ಲಾ ಏನು ಮಾಡೋದು ಅಂದುಕೊಂಡು ಜೇಬಿನಲ್ಲಿ ನೋಡಿದನು. ಬುಗುರಿ ಮತ್ತು ಗೋಲಿ ಮಾತ್ರ ಇದ್ದವು. ಅವನು ಅದನ್ನು ಕಾಣಿಕೆ ಚೀಲದಲ್ಲಿ ಹಾಕಿಬಿಟ್ಟನು. ಹಣವನ್ನು ಎಣಿಸುವಾಗ ಇದೇನಿದು ಬುಗುರಿ.... ಗೋಲಿ ಕೊಟ್ಟರೆ ಅದನ್ನಿಟ್ಟುಕೊಂಡು ಏನು ಮಾಡೋಕೆ ಸಾಧ್ಯ ಎಂದು ಕೆಲವರು ಬೈದರು. ಇದನ್ನೆಲ್ಲಾ ಗಮನಿಸಿದ ಬೋಧಕರು, ಬುಗುರಿ ಮತ್ತು ಗೋಲಿಗೆ ಪ್ರತಿಯಾಗಿ 10,000 ರೂಪಾಯಿಗಳನ್ನು ಕಾಣಿಕೆಯಾಗಿ ನೀಡಿದರು. ಆ ಚಿಕ್ಕ ಹುಡುಗ ರೋಜರ್ ಹೃದಯದಲ್ಲಿ ತನ್ನಲ್ಲಿರುವುದನ್ನು ಕೊಡಲು ನೆನೆಸಿದ ಸದುದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಂಡರು. ಆಲಯವನ್ನು ನಿರ್ಮಿಸಲು ಅಡಿಪಾಯ ಹಾಕಲು ಮೂಲೆಗಲ್ಲು ಹಾಕುತ್ತಾರೆ. ಆ ಕಲ್ಲಿನ ಅಂಚಿನಲ್ಲಿ ಬುಗುರಿ ಮತ್ತು ಗೋಲಿಯನ್ನು ಇಟ್ಟುಬಿಟ್ಟು ಬೋಧಕರು ಹೊರಟುಹೋದರು.
ಕೆಲವೇ ವರ್ಷಗಳಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಚರ್ಚ್ ಸುಂದರವಾಗಿ ಪೂರ್ಣಗೊಂಡಿತು. ಚೆನ್ನಾಗಿ ಓದಿ ಹಲವು ವರ್ಷಗಳ ನಂತರ ಉನ್ನತ ಸ್ಥಾನಕ್ಕೆ ತಲುಪಿದ ಒಬ್ಬ ವ್ಯಕ್ತಿಯೇ ಬಾಲ್ಯದಲ್ಲಿ ಬುಗುರಿ ಮತ್ತು ಗೋಲಿಯನ್ನು ಕಾಣಿಕೆಯ ಚೀಲದಲ್ಲಿ ಹಾಕಿದ ಅದೇ ಚಿಕ್ಕ ಹುಡುಗ ಎಂದು ಕಂಡು ಬೋಧಕರು ಆಶ್ಚರ್ಯಚಕಿತರಾದರು. ಅದು ಅವನ ದೃಷ್ಟಿಯಲ್ಲಿ ಅತ್ಯಲ್ಪವಾಗಿ ಕಾಣಿಸಿರಬಹುದು. ತನ್ನಲ್ಲಿರುವುದನ್ನು ಕೊಟ್ಟ ರೋಜರ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಉನ್ನತ ಸ್ಥಾನಕ್ಕೆ ಬಂದನು. ದೇವರು ಅವನು ಕೊಟ್ಟದ್ದನ್ನು ಮರೆಯದೆ ಆಶೀರ್ವದಿಸಿದರು.
ಪ್ರೀತಿಯ ಪುಟ್ಟ ಮಕ್ಕಳೇ, ನಮ್ಮೆಲ್ಲ ಸಹಾಯವನ್ನು ಒದಗಿಸುವ ಯೇಸುವಿಗೆ ನಾವು ಹೇಗೆ ಕೊಡುತ್ತೇವೆ ಎಂಬುದರ ಕುರಿತು ಯೋಚಿಸಿ. ಹಣವಿಲ್ಲದ ರೋಜರ್ ತನ್ನಲ್ಲಿದ್ದದ್ದನ್ನೆಲ್ಲಾ ನೀಡಿದಂತೆಯೇ, ನೀವು ಸಹ ನಿಮ್ಮ ಸಮಯ, ಪ್ರತಿಭೆ ಮತ್ತು ಹೃದಯವನ್ನು ಯೇಸಪ್ಪನಿಗೆ ಕೊಟ್ಟು ಆತನನ್ನು ಸಂತೋಷಪಡಿಸಿರಿ. O.k. ಪುಟಾಣಿಗಳೇ Bye.
- Sis. ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482