Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.05.2025
Share:

By Village Missionary Movement

Saturday, 03-May-2025

ಧೈನಂದಿನ ಧ್ಯಾನ(Kannada) – 03.05.2025

 

ಕರ್ತನ ಭೋಜನ 

 

"ನಮ್ಮನ್ನು ನಾವೇ ವಿಚಾರಿಸಿಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ" - 1 ಕೊರಿಂಥ 11:31

 

ನಾವು ಕರ್ತನ ಭೋಜನವನ್ನು ಅನುಸರಿಸುವಾಗ, ಯೇಸು ಕ್ರಿಸ್ತನ ದೇಹವಾಗಿರುವ ರೊಟ್ಟಿಯನ್ನು ತಿಂದು, ಆತನ ರಕ್ತವಾಗಿರುವ ದ್ರಾಕ್ಷಾರಸವನ್ನು ಕುಡಿಯುವಾಗ ಆತನನ್ನು ನೆನೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಯೇಸುವನ್ನು ನೆನೆಸಿಕೊಂಡು ನಾವು ಹೇಗೆ ಕರ್ತನ ಭೋಜನವನ್ನು ಆಚರಿಸುತ್ತಿದ್ದೇವೆ? ಅದೊಂದು ಆಚಾರವಾಗಿ ಕ್ರಿಸ್ತನ ಕುರಿತಾದ ಯಾವುದೇ ತಿಳುವಳಿಕೆ ಇಲ್ಲದೆ ಆಚರಿಸುತ್ತಿದ್ದೇವಾ ಅಥವಾ ಆತನನ್ನು ನೆನಪಿಸಿಕೊಳ್ಳುವ ಸರಿಯಾದ ರೀತಿಯಲ್ಲಿ ಆಚರಿಸುತ್ತಿದ್ದೇವಾ? ಎಂಬುದನ್ನು ನಾವು ಹೆಚ್ಚಾಗಿ ಯೋಚಿಸಿ ಕಾರ್ಯನಿರ್ವಹಿಸಬೇಕೆಂದು ದೇವರ ಆತ್ಮವು ಬಯಸುತ್ತಿದೆ. 

 

ಪ್ರತಿಯೊಂದು ಕರ್ತನ ಭೋಜನದ ಪೂರ್ವಸಿದ್ಧತಾ ಪ್ರಾರ್ಥನೆಯಲ್ಲಿ, "ಕರ್ತನೇ, ನಾವು ನಿನ್ನ ಮರಣವನ್ನು ನೆನಪಿಸಿಕೊಳ್ಳುತ್ತೇವೆ" ಎಂದು ಮೊದಲ ಅರಿಕೆಯನ್ನು ಮಾಡುತ್ತೇವೆ, ನಮ್ಮ ಪಾಪಗಳಿಗಾಗಿ ಯೇಸು ತನ್ನ ರಕ್ತವನ್ನು ಸುರಿಸಿ, ನಮಗೆ ಪಾಪಕ್ಷಮಾಪಣೆಯನ್ನು ಉಚಿತವಾಗಿ ನೀಡಿ, ತಂದೆಯೊಂದಿಗೆ ನಮ್ಮನ್ನು ಸಮಾಧಾನಪಡಿಸಿದ ಸಂಗತಿಯನ್ನು ನಾವು ನೆನಪಿಸಿಕೊಂಡು ಅವರಿಗೆ ಕೃತಜ್ಞತೆ ಹೇಳಬೇಕು. ಪ್ರತಿಯೊಂದು ಕರ್ತನ ಭೋಜನದ ಆರಾಧನೆಗೂ ಮೊದಲು ಸ್ವಲ್ಪ ಸಮಯ ತೆಗೆದುಕೊಂಡು, ನಮ್ಮನ್ನು ನಾವೇ ದೇವರ ಸಮ್ಮುಖದಲ್ಲಿ ನಿಧಾನವಾಗಿ ಪರೀಕ್ಷಿಸಿಕೊಂಡು ತಿಳಿದುಕೊಳ್ಳಬೇಕು. ನಾವು ನಮ್ಮ ಪಾಪಗಳನ್ನು, ನಾವು ಮಾಡುವ ಚಿಕ್ಕ ತಪ್ಪುಗಳನ್ನು ಸಹ, ಯೇಸುವಿನ ಬಳಿ ಒಪ್ಪಿಕೊಂಡು ದೇಹ ಮತ್ತು ಆತ್ಮಗಳನ್ನು ಆತನ ರಕ್ತದಿಂದ ತೊಳೆದುಕೊಳ್ಳಲ್ಪಡಬೇಕು. 

 

ಎರಡನೆಯ ಅರಿಕೆಯಾಗಿ, "ನಾವು ನಿಮ್ಮ ಪುನರುತ್ಥಾನವನ್ನು ಅರಿಕೆಮಾಡುತ್ತೇವೆ" ಎಂದು ಹೇಳುತ್ತೇವೆ. ಅವರು ಯಾತಕ್ಕಾಗಿ ಪುನರುತ್ಥಾನಗೊಂಡರು? ಆತನು ನಮ್ಮೆಲ್ಲರೊಂದಿಗೂ ಸದಾಕಾಲವೂ ಇರುವುದಕ್ಕಾಗಿ ಎಂಬುದನ್ನು ಗ್ರಹಿಸಿ ಅವರನ್ನು ಸ್ತುತಿಸಬೇಕು. ಮೂರನೆಯದಾಗಿ, "ನಿಮ್ಮ ಬರೋಣಕ್ಕಾಗಿ ನಾವು ಕಾಯುತ್ತಿದ್ದೇವೆ" ಎಂದು ಅರಿಕೆ ಮಾಡುತ್ತೇವೆ. ಹಾಗಾದರೆ ನಾವು ಪ್ರತಿದಿನ ಅವರ ಆಗಮನಕ್ಕಾಗಿ ಎದುರು ನೋಡುತ್ತಾ, ಅವರ ಆಗಮನಕ್ಕಾಗಿ ಬಹಳ ಎಚ್ಚರಿಕೆಯಿಂದ ಸಿದ್ಧರಾಗುತ್ತಿದ್ದೇವೆಯೇ? ಯೋಚಿಸೋಣ. 

 

ಮೇಲಿನ ಮೂರು ಅರಿಕೆಗಳನ್ನು ಸತ್ಯವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಮಾಡಬೇಕು. ಏಕೆಂದರೆ ಸತ್ಯವೇದದಲ್ಲಿ, "ದೇವರ ಮುಂದೆ ಮಾತಾಡಲು ಬಾಯಿದುಡುಕಬೇಡ, ಎಂದು ಹೇಳಲ್ಪಟ್ಟಿದೆ. (ಪ್ರಸಂ. 5:2)

 

ಪ್ರಿಯರೇ! ನಾವು ಇನ್ನೂ ಅಂತಹ ಪ್ರಾಮಾಣಿಕ ಘೋಷಣೆಗಳೊಂದಿಗೆ ಕರ್ತನ ಭೋಜನದಲ್ಲಿ ಭಾಗವಹಿಸದವರಾಗಿದ್ದರೆ, ನಾವು ನ್ಯಾಯ ವಿಚಾರಣೆಗೆ ಒಳಗಾಗದಂತೆ ಈ ಕೃಪೆಯ ಸಮಯದಲ್ಲಿ ನಮ್ಮನ್ನು ನಾವೇ ನಿಧಾನವಾಗಿ ಪರೀಕ್ಷಿಸಿಕೊಂಡು, ಸರಿಪಡಿಸಿಕೊಳ್ಳಲು ನಿರ್ಧರಿಸೋಣ. ದೇವರೇ ನಮಗೆ ಕೃಪೆಯನ್ನು ಅನುಗ್ರಹಿಸಲಿ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಕೂಟದಲ್ಲಿ ಭಾಗವಹಿಸಿದ ಯುವಜನರು ತಾವು ಪಡೆದ ಅಭಿಷೇಕವನ್ನು ಕಾಪಾಡಿಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş