Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.04.2025
Share:

By Village Missionary Movement

Tuesday, 29-Apr-2025

ಧೈನಂದಿನ ಧ್ಯಾನ(Kannada) – 29.04.2025

 

ಚೆನ್ನಾಗಿ ನೋಡಿಕೊಳ್ಳುತ್ತೇನೆ

 

"...ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವೆನು;..." - ಯೆರೆಮಿಯ 40:4

 

ಸೆಪ್ಟೆಂಬರ್ 11 ರಂದು ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದಾಗ, ಅವರ ನಾಯಿ ರೋಸಿ ತನ್ನ ಕುರುಡು ಮಾಲೀಕ ಪೀಟಿಯನ್ನು ರಹಸ್ಯ ಮಾರ್ಗದ ಮೂಲಕ ರಕ್ಷಿಸಿ ಸುರಕ್ಷಿತವಾಗಿ ಕರೆತಂದಿತು. ತನ್ನ ಯಜಮಾನನನ್ನು ರಕ್ಷಿಸಿದ ನಂತರ, ರೋಸಿ ನಾಯಿ ಮತ್ತೆ ಒಳಗೆ ಹೋಗಿ ಅವಶೇಷಗಳಲ್ಲಿ ಸಿಲುಕಿಕೊಂಡು ತನ್ನ ಪ್ರಾಣವನ್ನು ಕಳೆದುಕೊಂಡಿತು. ತನಗೆ ಆಹಾರ ನೀಡಿ ರಕ್ಷಿಸಿದ್ದಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಅದು ತನ್ನ ಯಜಮಾನನನ್ನು ಸುರಕ್ಷಿತವಾಗಿ ರಕ್ಷಿಸಿತು. 

 

ಒಬ್ಬ ಬಡ ವಿಧವೆಗೆ ಒಬ್ಬನೇ ಮಗನಿದ್ದನು, ಅವನು ಸಹ ಚಿಕ್ಕವನು. ಊರಲ್ಲೆಲ್ಲಾ ಬರಗಾಲ. ಅವಳ ಮನೆಯಲ್ಲಿ ಸ್ವಲ್ಪ ಹಿಟ್ಟು ಮತ್ತು ಸ್ವಲ್ಪ ಎಣ್ಣೆ ಮಾತ್ರ ಇತ್ತು. ಆ ಹಿಟ್ಟು ಮತ್ತು ಎಣ್ಣೆಯಿಂದ ತಾವು ಎಷ್ಟು ದಿನ ಮಾತ್ರ ಬದುಕಲು ಸಾಧ್ಯ, ಒಂದು ದಿನ ಏನೂ ಮಾತಾಡದೆ ಅವುಗಳನ್ನು ತಿಂದು ಇಬ್ಬರೂ ಸತ್ತುಹೋಗೋಣ ಎಂದು ನಿರ್ಧರಿಸಿ, ಚಾರೆಪ್ತಾ ಗ್ರಾಮದ ಪ್ರವೇಶದ್ವಾರದ ಬಳಿ ಕಟ್ಟಿಗೆಗಳನ್ನು ಸಂಗ್ರಹಿಸಲು ಹೋದಳು. ಅವಳು ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಅವಳ ಹೃದಯ ಎಷ್ಟು ತೊಂದರೆಗೀಡಾಗಿರಬೇಕು. ಅಲ್ಲಿಗೆ ದೇವರ ಆಜ್ಞೆಯಂತೆ ಪ್ರವಾದಿಯಾದ ಎಲೀಯನು ಬರುತ್ತಾರೆ, ಬಂದು ಆಕೆಯ ಬಳಿ ಕುಡಿಯಲು ನೀರು ಕೇಳುತ್ತಾರೆ. ಅವಳು ಮನೆಯೊಳಗೆ ಹೋಗುವಾಗ ಒಂದು ಸಣ್ಣ ರೊಟ್ಟಿ ಸುಟ್ಟುಕೊಂಡು ಬರುವಂತೆ ಹೇಳಿದರು. ಆ ವಿಧವೆ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಾಳೆ. ನಾನು ಮತ್ತು ನನ್ನ ಮಗ ಈ ಸ್ವಲ್ಪ ಹಿಟ್ಟಿನಲ್ಲಿ ರೊಟ್ಟಿ ಮಾಡಿ ತಿಂದು ಬಿಟ್ಟು ಸಾಯಲಿದ್ದೇವೆ ಎಂದು ಎಲೀಯ ಪ್ರವಾದಿಯ ಬಳಿ ಹೇಳಿದಳು. ಅವರು "ಮೊದಲು ಅದರಲ್ಲಿ ನನಗೆ ಒಂದು ರೊಟ್ಟಿ ಸುಟ್ಟುಕೊಂಡು ತೆಗೆದುಕೊಂಡು ಬಾ" ಎಂದರು. ಆ ವಿಧವೆ ತಾಯಿ ವಿಧೇಯಳಾದಳು. ಅವಳು ರೊಟ್ಟಿ ಮಾಡಿದ ನಂತರವೂ ಮಡಕೆಯಲ್ಲಿರುವ ಹಿಟ್ಟು ತೀರಲಿಲ್ಲ, ತಂಬಿಗೆಯಲ್ಲಿರುವ ಎಣ್ಣೆಯು ಮುಗಿಯಲಿಲ್ಲ. ಅವಳು ಮತ್ತು ಅವಳ ಕುಟುಂಬದವರು ಹಲವು ದಿನಗಳ ಕಾಲ ತೃಪ್ತಿಯಾಗಿ ತಿಂದರಂತೆ. 

 

ಹೌದು, ಪ್ರಿಯರೇ! ಹಲವು ಬಾರಿ, ಇದು ನಮ್ಮ ಜೀವನದ ಕೊನೆಯ ಕ್ಷಣ, ಮತ್ತು ಇನ್ನು ಬದುಕಲು ದಾರಿ ಇಲ್ಲ ಎಂದು ಭಾವಿಸುವವರಲ್ಲಿ ನೀವು ಒಬ್ಬರಾಗಿದ್ದೀರಾ? ದೇವರು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ. "ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" (ಯೆರೆಮಿಯ 40:4) ಎಂದು. ಚಿಂತಿಸಬೇಡಿ, ನಮ್ಮ ದೇವರು ಇಂದಿಗೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ. ಆತನು ನಿಮ್ಮ ಎಲ್ಲಾ ನಷ್ಟಗಳು, ಸೋಲುಗಳು ಮತ್ತು ಕೊರತೆಗಳನ್ನು ಬದಲಾಯಿಸುವರು ಮತ್ತು ಅವುಗಳನ್ನು ತನ್ನ ಹೇರಳವಾದ ಆಶೀರ್ವಾದಗಳಿಂದ ತುಂಬಿಸುವರು. ದೇವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುವಾಗ ವ್ಯರ್ಥವಾಗಿ ಚಿಂತಿಸುವುದೇಕೆ? ಕರ್ತನ ಮೇಲೆ ನಿಮ್ಮ ಭಾರ ಮತ್ತು ಚಿಂತೆಯನ್ನು ಹಾಕಿಬಿಡಿರಿ ಆತನೇ ನಿಮ್ಮನ್ನು ಉದ್ದಾರ ಮಾಡುತ್ತಾರೆ. ಹಲ್ಲೇಲೂಯಾ!

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ಈ ವರ್ಷ 1000 ಮಿಷನರಿಗಳು ನಮ್ಮೊಂದಿಗೆ ಸೇರಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice