Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.05.2021
Share:

By Village Missionary Movement

Wednesday, 19-May-2021

ಧೈನಂದಿನ ಧ್ಯಾನ(Kannada) – 19.05.2021

ಉಸಿರಾಟದ ಕಾಯಿಲೆ

"ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು." - ಲೂಕ 18:1

ಮಿಷನರಿ ಜಾನ್ ಹೈಡ್ ಒಬ್ಬ ಪ್ರಾರ್ಥನಾ ಯೋಧ.  ಭಾರತದಲ್ಲಿ ಸೇವೆ ಸಲ್ಲಿಸಲು ಬಂದ ಈ ವ್ಯಕ್ತಿ ತನ್ನ ಜೀವನವನ್ನು ಪ್ರಾರ್ಥನೆಯಲ್ಲೇ ಕಳೆದರು.  ಒಮ್ಮೆ ಅವರು ಊಟವನ್ನೇ ಮಾಡದೆ ಸತತ 10 ದಿನಗಳ ಕಾಲ ಪ್ರಾರ್ಥಿಸುತ್ತಲೇ ಇದ್ದರು.  ಕೆಲವು ದಿನಗಳು ರಾತ್ರಿಯಿಡೀ ಪ್ರಾರ್ಥಿಸುತ್ತಿದ್ದರು. ಇವರೊಂದಿಗಿದ್ದವರು ಕೂಡ ಇವರ ಪ್ರಾರ್ಥನಾ ಜೀವನವನ್ನು ಕಂಡು  ಆಶ್ಚರ್ಯವಾಗಿ  ಕೇಳುತ್ತಿದ್ದದ್ದು ಉಂಟು.  ಅದಕ್ಕೆ ಅವರು ಹೇಳುತ್ತಿದ್ದ ಉತ್ತರ,  “ಪ್ರಾರ್ಥನೆಯು ಯೇಸುಕ್ರಿಸ್ತನ ಹತ್ತಿರ ಬರಲು ಇರುವ ಏಕೈಕ ಮಾರ್ಗವಾಗಿದೆ!  ಅವರಿಗೆ ಹತ್ತಿರವಾಗಿದ್ದರೆ ಮಾತ್ರ ಆತ್ಮಗಳನ್ನು ಯೇಸುವಿನ ಬಳಿಗೆ ಸೇರಿಸಬಹುದು. ”  ಎನ್ನುತ್ತಿದ್ದರು. ಮೊಣಕಾಲುಗಳೇ ಅವರ ಜೀವನದ ಉಸಿರಾಗಿತ್ತು.  ಒಂದೊಂದು ದಿನವೂ ಇನ್ನೂ ಸ್ವಲ್ಪ ಪ್ರಾರ್ಥಿಸಲು ಸಮಯ ಸಿಕ್ಕುತ್ತದಾ ಎಂದು ಅವರು ಹಾತೊರೆಯುತ್ತಿದ್ದರು.

ಯೇಸು ಕ್ರಿಸ್ತನು ಸಹ ದೊಡ್ಡ ಶಬ್ಧದೊಂದಿಗೆ, ಕಣ್ಣೀರಿನೊಂದಿಗೆ ಪ್ರಾರ್ಥಿಸುತ್ತಿದ್ದರು.  ಅವರ ಬೆವರು ರಕ್ತದ ಹನಿಗಳಾಗಿ ಬೀಳುತ್ತಿತ್ತು .  ರಾತ್ರಿಯಿಡೀ ಪ್ರಾರ್ಥಿಸುತ್ತಿದ್ದರು, ಅರಣ್ಯದಲ್ಲಿ ಏಕಾಂಗಿಯಾಗಿ ಪ್ರಾರ್ಥಿಸುತ್ತಿದ್ದರು, ಈ ರೀತಿ ಪ್ರಾರ್ಥಿಸುವ ಅಭ್ಯಾಸವನ್ನು ಹೊಂದಿದ್ದರು.  “ ಹೇಗೆ ಪ್ರವಾಸಿಗರ ಕಣ್ಣುಗಳು ಹೊಸ ಸ್ಥಳಕ್ಕೆ ಬಂದಾಗ ಉತ್ತಮ ದೃಶ್ಯಾವಳಿಗಳನ್ನು ನೋಡಲು ಅಲೆದಾಡುತ್ತದೋ, ಹಾಗೆ ಯೇಸು ಕ್ರಿಸ್ತನು ಅವರು ಹೋದಲ್ಲೆಲ್ಲಾ ತಾನು ಏಕಾಂತವಾಗಿ ಪ್ರಾರ್ಥನೆ ಮಾಡಲು ಒಂದು ಶಾಂತವಾದ ಸ್ಥಳ ಇದೆಯಾ ಎಂದು ಅವರ ಕಣ್ಣುಗಳು ಹುಡುಕುತ್ತಿತ್ತು” ಎಂದು ಒಬ್ಬ ಪರಿಶುದ್ಧನು ಬರೆದಿದ್ದಾರೆ.

ಯೇಸುಕ್ರಿಸ್ತನೇ ಇಷ್ಟೊಂದು ಪ್ರಾರ್ಥನೆ ಮಾಡಿದರೆ, ನೀವು ಮತ್ತು ನಾನು ಎಷ್ಟು ಹೆಚ್ಚು ಪ್ರಾರ್ಥಿಸಬೇಕು?  ಹೌದು, ಪ್ರಾರ್ಥನೆ ನಮಗೆ ಉಸಿರಾಟದಂತಿದೆ.  ನಮಗೆ ಉಸಿರಾಟದ ತೊಂದರೆ ಇದ್ದರೆ ಉಸಿರಾಟದ ಅಂಗಗಳಲ್ಲಿ ಏನಾದರೂ ದೋಷವಿದೆ ಎಂದು ನಮಗೆ ತಿಳಿದಿದೆ.  ಅದೇ ರೀತಿ, ಪ್ರಾರ್ಥನೆ ಮಾಡುವುದು ನಮಗೆ ಕಷ್ಟವಾಗಿದ್ದರೆ, ಅದಕ್ಕೆ ಕಾರಣ ಅಸ್ವಸ್ಥತೆ ನಮ್ಮೊಳಗಿದೆ.

ದೇವರ ಮಕ್ಕಳೇ!  ನಮ್ಮ ದೈನಂದಿನ ಜೀವನದಲ್ಲಿ ಪ್ರತಿಯೊಂದು ಸಣ್ಣ  ವಿಷಯವನ್ನು ದೇವರಿಗೆ ತಿಳಿಸುವುದು ಮತ್ತು ಆತನೊಂದಿಗೆ ಸಂಬಂಧ ಹೊಂದಲು ಕಲಿಯುವುದು ಒಂದು ಶ್ರೇಷ್ಠವಾದ ಅಭ್ಯಾಸವಾಗಿದೆ.  ಈ ಅನುಭವವು ನಮ್ಮ ದಿನಚರಿಯ ಭಾಗವಾದ ನಂತರ, ನಾವು ದಿನವಿಡೀ ಪ್ರಾರ್ಥನೆಯ ಮನೋಭಾವದಿಂದ ತುಂಬಿರುತ್ತೇವೆ.  ಪ್ರಾರ್ಥನೆ ಒಂದು ಆಚರಣೆ, ಮತ್ತು ಕಠಿಣವಾದ ಕಾರ್ಯವಾಗಿರುವುದಿಲ್ಲ. ದೇವರು ನಮ್ಮ ಹೃದಯದಲ್ಲಿ ಇಡುವ ಸಣ್ಣ ಸಣ್ಣ ಹೊರೆಗಳಿಗಾಗಿ ನಾವು ಪ್ರಾಮಾಣಿಕವಾಗಿ ಪ್ರಾರ್ಥಿಸಿದರೆ, ದೇವರು ನಮ್ಮ ಹೃದಯದಲ್ಲಿ ಹೆಚ್ಚು ಹೆಚ್ಚು ಹೊರೆಗಳನ್ನು ನೀಡುತ್ತಿರುವುದನ್ನು ನಾವು ಗ್ರಹಿಸಬಹುದು.  ಈ ರೀತಿಯಾಗಿ ನಾವೂ ಸಹ ಪ್ರಾರ್ಥನಾ ಯೋಧರಾಗಬಹುದು, ಜಾನ್ ಹೈಡ್‌ನಂತಹ ಪ್ರಾರ್ಥನಾ ಯೋಧರಾಗಿರಬಹುದು.
-    Mrs. ಸೂಸನ್ನಾಲ್ ಮ್ಯಾಥ್ಯೂ

ಪ್ರಾರ್ಥನಾ ಅಂಶ:-
ಎಲ್ಲಾ ರಾಜ್ಯಗಳಿಂದಲೂ 12  ಮಿಷನರಿಗಳನ್ನು ದೇವರು ಕರೆತರುವಂತೆ, ಮತ್ತು ಅವರನ್ನು  ಈ ಸೇವೆಯಲ್ಲಿ ಕರ್ತನು ಉಪಯೋಗಿಸುವಂತೆ  ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin