By Village Missionary Movement
Sunday, 27-Apr-2025ಧೈನಂದಿನ ಧ್ಯಾನ(Kannada) – 27.04.2025
ಹಠಮಾರಿ ಬಿನು
"ಈಗಲಾದರೋ ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ." - ಕೊಲೊಸ್ಸೆ 3:8
ಬಿನು ಮತ್ತು ಪ್ರಿನ್ಸಿ ಅಕ್ಕ, ತಮ್ಮ ಇಬ್ಬರೂ ಅಪ್ಪ ಅಮ್ಮನಿಗೆ ಮುದ್ದು ಮಕ್ಕಳು. ತಮ್ಮ ಬಿನು ತುಂಬಾ ತೀಟೆ, ಎತ್ತಿದ್ದಕ್ಕೆಲ್ಲಾ ಹಠ ಮಾಡ್ತಾನೆ. ಅವನಿಗೆ ಏನಾದರೂ ಬೇಕಾದರೆ ಹಠ ಹಿಡಿದು ಅಮ್ಮನ ಬಳಿ ತೆಗೆದುಕೊಂಡು ಬಿಡುತ್ತಾನೆ. ಅವನು ಚಿಕ್ಕವನಾಗಿರುವುದರಿಂದ, ಅಂಗಡಿಯಲ್ಲಿ ಕೆಲವು ಸಣ್ಣ ವಸ್ತುಗಳನ್ನು ತೆಗೆದುಕೊಂಡು ಬರಲು ಕಳುಹಿಸುತ್ತಿದ್ದರು. ಪ್ರಿನ್ಸಿ ಸ್ವಲ್ಪ ದೊಡ್ಡವಳಾಗಿರುವುದರಿಂದ, ಮನೆಕೆಲಸಗಳಲ್ಲಿ ಸಹಾಯ ಮಾಡಲು ತಾಯಿ ಅವಳನ್ನು ಕರೆದುಕೊಳ್ಳುತ್ತಿದ್ದರು. ಪ್ರಿನ್ಸಿ ಪ್ರತಿದಿನ ತನ್ನ ತಾಯಿಯೊಂದಿಗೆ ಪಾತ್ರೆ ತೊಳೆಯುವುದು, ಮನೆ ಸ್ವಚ್ಛಗೊಳಿಸುವುದು ಮತ್ತು ಬಟ್ಟೆಗಳನ್ನು ಮಡಚುವಂತಹ ಕೆಲಸಗಳನ್ನು ಮಾಡುತ್ತಿದ್ದಳು.
ಒಂದು ದಿನ, ತಾಯಿ ಬಿನುಗೆ ಸೋಪು ತೆಗೆದುಕೊಂಡು ಬರಲು ಅಂಗಡಿಗೆ ಹೋಗುವಂತೆ ಹೇಳಿದರು, ಆದರೆ ಅವನು ಹೋಗುವುದಿಲ್ಲ ಎಂದು ಹಠ ಹಿಡಿದನು. ಅವನು ಪ್ರತಿದಿನ ನಾನೇ ಹೋಗುತ್ತೇನೆ, ಇವತ್ತು ಅಕ್ಕನನ್ನು ಕಳುಹಿಸಿ ಎಂದು ಕೂಗಿದನು. ತಕ್ಷಣ ಪ್ರಿನ್ಸಿ, ಅಮ್ಮಾ, ಅವನನ್ನು ಏನೂ ಅನ್ನಬೇಡಿ, ನಾನು ಹೋಗಿ ಬೇಗ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಅಂಗಡಿಗೆ ಹೋದಳು. ದಾರಿಯಲ್ಲಿ ಒಂದು ನಾಯಿ ಅವಳನ್ನು ಬೆನ್ನಟ್ಟಿತು, ಅವಳು ಭಯದಿಂದ ರಸ್ತೆಯ ಬದಿಗೆ ಓಡಿದಳು. ಓಡುತ್ತಿದ್ದವಳು ರಸ್ತೆಯಲ್ಲಿ ಬರುತ್ತಿದ್ದ ಬೈಕನ್ನು ಗಮನಿಸಲಿಲ್ಲ, ಆದ್ದರಿಂದ ಅವಳು ಅದಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಳು. ಆಕೆಯ ಕಾಲಿನ ಮೂಳೆ ಮುರಿಯಿತು. ನೆರೆಹೊರೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು.
ಮನೆಯಲ್ಲಿ ಅಮ್ಮ ಬಿನುಗೆ ಎಲ್ಲೋ ಇನ್ನೂ ಅಕ್ಕ ಕಾಣುತ್ತಿಲ್ಲ ಎಂದು ಹೇಳಲು, ಅವನು ನಾನು 20 ನಿಮಿಷಗಳಲ್ಲಿ ಓಡಿಹೋಗಿ ಬರುತ್ತಿದ್ದೆ ಇವಳು ಇನ್ನೂ ಬಂದಿಲ್ಲವಲ್ಲಾ, ನಾನು ಹೋಗಿ ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಬಿನು ಹೊರಟನು. ಆ ಕ್ಷಣದಲ್ಲಿ, ಒಂದು ಅಪರಿಚಿತ ಸಂಖ್ಯೆಯಿಂದ ಫೋನ್ ಕರೆ ಬಂತು, ಅವರು ಯಾರೆಂದು ವಿಚಾರಿಸಲು, ಇನ್ನೊಂದು ಕಡೆಯಿಂದ ನಾವು ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಮಗಳು ಗಾಯಪಟ್ಟು ಇಲ್ಲಿದ್ದಾಳೆ, ತಕ್ಷಣ ಬನ್ನಿ ಎಂದು ಹೇಳಿದರು. ತಕ್ಷಣ, ಅವರು ಭಯಭೀತರಾಗಿ ಓಡಿಹೋದರು, ಅಮ್ಮ ಬಿನುವನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು. ಅವರು ಅಲ್ಲಿಗೆ ಹೋಗಿ ತಮ್ಮ ಮಗಳ ಸ್ಥಿತಿಯನ್ನು ನೋಡಿ ಕಣ್ಣೀರು ಸುರಿಸಿದರು. ಬಿನು ಕೂಡ ಅಳುತ್ತಾ ತನ್ನ ಅಕ್ಕನ ಬಳಿ ಕ್ಷಮೆಯಾಚಿಸಿದನು, ನನ್ನ ಹಠಮಾರಿ ಸ್ವಭಾವದಿಂದಲೇ ನಾನು ನನ್ನ ಅಕ್ಕನನ್ನು ಈ ಪರಿಸ್ಥಿತಿಗೆ ತಂದಿದ್ದೇನೆ ಎಂದು ಹೇಳಿದನು.
ಪ್ರಿಯ ತಮ್ಮ, ತಂಗಿ! ಹಠವು ಪೈಶಾಚಿಕ ದುಷ್ಟ ಗುಣವಾಗಿದೆ. ನೀವು ಅದಕ್ಕೆ ಜಾಗ ಕೊಡಬಾರದು. ನೀವೂ ಸಹ ಅಕ್ಕ, ಅಣ್ಣ, ತಮ್ಮ, ತಂಗಿಯ ಬಳಿ ಬಿಟ್ಟುಕೊಟ್ಟು ಹೋಗಬೇಕು. ಹಠಮಾರಿತನವು ಅನೇಕ ಸಮಸ್ಯೆಗಳನ್ನು ತಂದುಹಾಕುತ್ತದೆ. ಬಿಟ್ಟುಕೊಟ್ಟರೆ, ಸಂತೋಷದಿಂದ ಬದುಕಬಹುದು. O.k...
- Mrs. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482