By Village Missionary Movement
Friday, 25-Apr-2025ಧೈನಂದಿನ ಧ್ಯಾನ(Kannada) – 25.04.2025
ಹಾಳಾದದ್ದನ್ನು ಸರಿಮಾಡುವಾತನು
"...ನನ್ನ ರಕ್ಷಣೆಯು ಶಾಶ್ವತವಾಗಿರುವದು..." - ಯೆಶಾಯ 51:6
ಪೆಂಜಾಲ್ ಚಂಡಮಾರುತ ಮಹಾಬಲಿಪುರಂನಲ್ಲಿ ಭೂಕುಸಿತ ಉಂಟುಮಾಡಿದ್ದರಿಂದ ಉತ್ತರದ ಜಿಲ್ಲೆಗಳಿಗೆ ತೀವ್ರ ಎಚ್ಚರಿಕೆ ನೀಡಲಾಯಿತು. ಗಂಟೆಗೆ 70 ರಿಂದ 90 ಕಿ.ಮೀ. ಗಾಳಿ ಜೋರಾಗಿ ಬೀಸಿತು. ಪೆಂಜಾಲ್ ಚಂಡಮಾರುತವು ಭೂಕುಸಿತವನ್ನು ಪ್ರಾರಂಭಿಸಿದಾಗ ಮಾತ್ರ ರಕ್ಷಣಾ ತಂಡಗಳು ಅದರ ಭೀಕರ ಪರಿಣಾಮಗಳನ್ನು ವೀಕ್ಷಿಸಲು ಸಾಧ್ಯವಾಯಿತು. ಚಂಡಮಾರುತದ ಭಾರೀ ಮಳೆಯ ಮೊದಲು, ಮಳೆಯಿಂದ ಉಂಟಾದ ತಿರುವಣ್ಣಾಮಲೈನಲ್ಲಿ ಭೀಕರ ಭೂಕುಸಿತಗಳು ಸಂಭವಿಸುವ ಮೊದಲು, ಸರೋವರಗಳು ತುಂಬಿ ಒಂದು ನಿಮಿಷದಲ್ಲಿ ವಸಾಹತುಗಳನ್ನು ಆವರಿಸಿದ ಪ್ರವಾಹದಿಂದಾಗಿ ರಕ್ಷಣಾ ತಂಡಗಳು ಯಾವುದೇ ಸಹಾಯವನ್ನು ನೀಡಲು ಸಾಧ್ಯವಾಗಲಿಲ್ಲ.
ಆದರೆ ನಮ್ಮ ಜೀವನದಲ್ಲಿ ಬರುವ ನಷ್ಟಗಳನ್ನು ನಾವು ಎದುರಿಸಿದಾಗಲೆಲ್ಲಾ, ದೇವರ ಮಾತುಗಳು ಮತ್ತು ವಾಗ್ದಾನಗಳು ನಮಗೆ ಬಹಳ ಧೈರ್ಯ ತುಂಬುತ್ತವೆ. ಯೆಶಾಯ 51:3 ರಲ್ಲಿ ಆತನು ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು ಎಂದು ಹೇಳಲ್ಪಟ್ಟಿದೆ.
ನಮಗೆ ಲೋಕದಲ್ಲಿ ಕಷ್ಟಗಳಿವೆ. ಆದರೆ ಹಾಳಾದ ಸ್ಥಳಗಳನ್ನು ಕಟ್ಟಿ ಎಬ್ಬಿಸುವ ದೇವರು ನಮ್ಮ ಬಲಗಡೆಯಲ್ಲಿರುವುದರಿಂದ, ನಷ್ಟಗಳು ಎಷ್ಟೇ ಭೀಕರವಾಗಿದ್ದರೂ ಸಹ "ದೇವರ ರಕ್ಷಣೆಯು ಶಾಶ್ವತವಾಗಿರುವುದು" ಎಂದು ಯೆಶಾಯ 51:6 ಹೇಳುತ್ತದೆ. ಹೌದು, ನಮ್ಮ ಕರ್ತನು ಅರಣ್ಯವನ್ನು ಹೊಲವನ್ನಾಗಿಯೂ, ಪಾಳುಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿಯೂ ಪರಿವರ್ತಿಸಲು ಸಮರ್ಥನಾಗಿದ್ದಾನೆ. ಆದ್ದರಿಂದ ದೇವರಲ್ಲಿ ನಂಬಿಕೆಯಿಂದ ಇರೋಣ.
ಪ್ರಿಯರೇ ! ನೀವು ಯಾವ ರೀತಿಯ ನಷ್ಟಗಳನ್ನು ಅನುಭವಿಸುತ್ತಿದ್ದೀರಿ? "ಲೋಕಕ್ಕೆ ಬಾಧ್ಯನಾಗುವನೆಂಬ ವಾಗ್ದಾನವು ಅಬ್ರಹಾಮನಿಗೆ ನಂಬಿಕೆಯಿಂದಾದ ನೀತಿಯಿಂದಲೇ ದೊರೆತದ್ದು ಎಂದು ರೋಮಾ 4:13 ಹೇಳುತ್ತದೆ. ನಾವು ಸಹ "ಹಾಳಾಗಿರುವುದನ್ನು ಸರಿಮಾಡುತ್ತೇನೆ" ಎಂಬ ದೇವರ ವಾಗ್ದಾನಗಳನ್ನು ನಂಬುವುದನ್ನೇ ಆರಿಸಿಕೊಂಡು ದೇವರಿಂದ ನಮಗೆ ಸಿಗುವ ರಕ್ಷಣೆಯನ್ನು, ಬಿಡುಗಡೆಯನ್ನು ಮತ್ತು ಪ್ರಯೋಜನಗಳನ್ನು ಸ್ವತಂತ್ರಿಸಿಕೊಳ್ಳೋಣ.! ಆಮೆನ್.
- A. ಬ್ಯೂಲಾ
ಪ್ರಾರ್ಥನಾ ಅಂಶ:
38 ಜಿಲ್ಲೆಗಳಲ್ಲಿಯೂ ಸುವಾರ್ತಾಬೋಧಕರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482