Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.04.2025
Share:

By Village Missionary Movement

Tuesday, 22-Apr-2025

ಧೈನಂದಿನ ಧ್ಯಾನ(Kannada) – 22.04.2025

 

ಕಾದಿರುವ ದೇವರು

 

"...ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು;…" - ಯೆಶಾಯ 30:18

 

ಕಾಯುವುದು ಎಂಬುದು ಒಂದು ಕಠಿಣ ಅನುಭವವೇ. ದೇವರಿಂದ ಉನ್ನತೀಕರಿಸಲ್ಪಡಲು ಮತ್ತು ಆಶೀರ್ವದಿಸಲ್ಪಡಲು ಕಾಯುವುದು ಬಹಳ ಮುಖ್ಯ. ಮೊಗ್ಗು ಅರಳುವವರೆಗು ಮತ್ತು ಕಾಯಿ ಹಣ್ಣಾಗುವವರೆಗೂ ಕಾಯುವುದು ಅವಶ್ಯಕ. ದೇವರ ವಾಗ್ದಾನಗಳು ನಮ್ಮಲ್ಲಿ ನೆರವೇರಲು ಕರ್ತನ ಸಮಯಕ್ಕಾಗಿ ಕಾಯುವುದು ಅತ್ಯಗತ್ಯ.

 

ಸತ್ಯವೇದದಲ್ಲಿ, ವಿಶ್ವಾಸಿಗಳ ತಂದೆಯಾದ ಅಬ್ರಹಾಮನು ನಮಗೆ ಗೊತ್ತು. ಕರ್ತನು ಅಬ್ರಹಾಮನನ್ನು ಕರೆದಾಗ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆಗ ಕರ್ತನು ಅಬ್ರಹಾಮನಿಗೆ, “ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು” (ಆದಿಕಾಂಡ 12:3,4) ಎಂದು ಹೇಳಿದರು. ಅಬ್ರಹಾಮನು ಕರ್ತನ ಮಾತಿಗೆ ವಿಧೇಯನಾಗಿ, 25 ವರ್ಷಗಳು ಕಾದಿದ್ದು ವಾಗ್ದಾನದ ಮಗನಾದ ಇಸಾಕನನ್ನು ಪಡೆದರು. (ಆದಿಕಾಂಡ 21:5). ನಾವು ಇಲ್ಲಿ ನೋಡುವಾಗ, ಅಬ್ರಹಾಮನು ಸಹ ಕಾದಿದ್ದರು. ಅಬ್ರಹಾಮನನ್ನು ಕರೆದ ಕರ್ತನು ಸಹ ವಾಗ್ದಾನವನ್ನು ಪೂರೈಸಲು ಕಾಯುತ್ತಿದ್ದಾರೆ. ದೇವರ ವಾಗ್ದಾನಕ್ಕಾಗಿ ಅವರು ಕಾಯುತ್ತಿರುವಾಗ ಅನೇಕ ಕಷ್ಟಗಳನ್ನು ಎದುರಿಸಿರಬಹುದು. ಆದರೆ ಕರ್ತನು ಅವರನ್ನು ನಾಚಿಕೆಪಡಿಸುವುದಿಲ್ಲ ಎಂದು ಅವರಿಗೆ ಖಚಿತವಾಗಿ ತಿಳಿದಿತ್ತು. ಹೌದು, ನಂಬಿಕೆಯಿಂದ ಕಾದಿದ್ದ ಅಬ್ರಹಾಮನು ನಂಬಿಕೆಯ ತಂದೆಯಾದರು. 

 

ಪ್ರಿಯರೇ! ಕಾಯುವಿಕೆಯ ಗಂಟೆಗಳು ಮತ್ತು ಕಾಲಾವಧಿಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ನಾವು ಕಾದಿರುವ ಸಮಯದಲ್ಲಿ ಕರ್ತನು ನಮಗೆ ನೀಡುವ ಆಶೀರ್ವಾದಗಳಿಗೆ ನಾವು ಅರ್ಹರಾ? ಆತನು ನಮ್ಮನ್ನು ಪರೀಕ್ಷಿಸಿ, ಆತನು ದಯಪಾಲಿಸುವ ಆಶೀರ್ವಾದಗಳಿಗೆ ಅರ್ಹರಾದ ಪಾತ್ರೆಗಳಾಗಿ ನಮ್ಮನ್ನು ರೂಪಿಸುತ್ತಾರೆ. ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನುಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು. (ಯೆಶಾಯ 40:31) ಹೌದು, ಕರ್ತನನ್ನು ನಿರೀಕ್ಷಿಸುವವರಿಗೆ ಹೊಸ ಬಲವು ಸಿಗುತ್ತದೆ. ಕಾಯುತ್ತಿದ್ದ ಅಬ್ರಹಾಮನನ್ನು ಕರ್ತನು ನಾಚಿಕೆಪಡಿಸಲಿಲ್ಲ. ನಮ್ಮನ್ನೂ ನಾಚಿಕೆಗೆ ಗುರಿ ಮಾಡುವುದಿಲ್ಲ. ಏಕೆಂದರೆ ವಾಗ್ದಾನ ಮಾಡಿದಾತನು ನಂಬಿಗಸ್ತನು. ನಾವು ಆತನಿಗಾಗಿ ಕಾಯುವಾಗ, ಸ್ವಲ್ಪ ಕಾಲ ಆಲಸ್ಯವಾಗಬಹುದೇ ಹೊರತು, ಒಂದು ದಿನವೂ ಕಾಲಾವಧಿ ಆಗುವುದಿಲ್ಲ. ಕಾಯುತ್ತಿರುವಾಗ, ಯಾಕೆ, ಏನು ಯಾವ ಉದ್ದೇಶಕ್ಕಾಗಿ ಎಂಬ ಪ್ರಶ್ನೆಗಳು ಖಂಡಿತವಾಗಿಯೂ ಉದ್ಭವಿಸಬಹುದು. ಆದರೆ ಖಂಡಿತವಾಗಿಯೂ ಉತ್ತರವಿದೆ.

- Bro. ಕುಮಾರ್

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿರುವ ಮಿಷನರಿಗಳ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş