Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.04.2025
Share:

By Village Missionary Movement

Monday, 21-Apr-2025

ಧೈನಂದಿನ ಧ್ಯಾನ(Kannada) – 21.04.2025

 

ಸ್ವಲ್ಪದಲ್ಲಿ ನಂಬಿಗಸ್ತಿಕೆ

 

"...ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ;..." - ಮತ್ತಾಯ 25:21

 

ನನಗೆ ತಿಳಿದಿರುವ ಒಬ್ಬ ಸಹೋದರ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿರಲಿಲ್ಲ, ಆದರೆ ಅವರಿಗೆ ಒಂದು ಕೈ ಕೆಲಸ ತಿಳಿದಿತ್ತು. ಈ ಕೈ ಕೆಲಸವು ಅವರ ಜೀವನವನ್ನು ಸುಧಾರಿಸುವ ಮತ್ತು ಆದಾಯ ಗಳಿಸುವ ಸಾಧನವಾಗಿತ್ತು. ನಂತರ, ಅವರು ಚೆನ್ನೈನ ಕಂಪನಿಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದರು. ಕೆಲವೇ ವರ್ಷಗಳಲ್ಲಿ ಅವರಿಗೆ ಒಳ್ಳೆಯ ಉನ್ನತ ಸ್ಥಾನವು ದೊರೆಯಿತು. ಅವರೊಂದಿಗೆ ಕೆಲಸ ಮಾಡಿದವರು ವಿದ್ಯಾವಂತರಾಗಿದ್ದರೂ, ಹೆಚ್ಚು ಶಿಕ್ಷಣ ಹೊಂದಿರದ ಇವರಿಗೆ ಕೆಲವೇ ವರ್ಷಗಳಲ್ಲಿ ಉನ್ನತ ಸ್ಥಾನ ದೊರೆಯಲು ಕಾರಣ ಇವರ ಪ್ರಾಮಾಣಿಕತೆ! ಇವರ ಕೆಲಸದಲ್ಲಿನ ಪ್ರಾಮಾಣಿಕತೆ ಮತ್ತು ದೋಷರಹಿತ ಕೆಲಸದಿಂದಾಗಿ, ಅವರ ಎಂ.ಡಿ. ಈ ಸಹೋದರನನ್ನು ಹೊಸ ಸೈಟ್ ಯೋಜನೆಯಲ್ಲಿ ಸೈಟ್ ಎಂಜಿನಿಯರ್ ಆಗಿ ನೇಮಿಸಲು ನಿರ್ಧರಿಸಿದರು. ಈ ಸಹೋದರನ ಜೀವನವನ್ನು ನೋಡಿದರೆ, ಅವರು ಎಂಜಿನಿಯರಿಂಗ್ ಓದಿಲ್ಲ ಅಥವಾ ಪದವಿ ಪೂರ್ಣಗೊಳಿಸಿಲ್ಲ, ಆದರೆ ಅವರ ಕೈಯಲ್ಲಿ ಸ್ವಚ್ಛತೆ, ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ ಎಲ್ಲವೂ ಅವನ ಜೀವನದ ಗುಣಮಟ್ಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ದವು. 

 

ಹಳೆಯ ಒಡಂಬಡಿಕೆಯ ಕಾಲದಲ್ಲಿ ತನ್ನ ಯಜಮಾನನಿಗೆ ನಂಬಿಗಸ್ತನಾಗಿದ್ದ ಯೋಸೇಫನೆಂಬ ಯುವಕನ ಬಗ್ಗೆ ನಮಗೆ ತಿಳಿದಿದೆ. ಯೋಸೇಫನನ್ನು ಗುಲಾಮನಾಗಿ ಐಗುಪ್ತಕ್ಕೆ ಕರೆದೊಯ್ಯಲಾಯಿತು. ಆದರೆ ಕರ್ತನು ಯೋಸೇಫನ ಸಂಗಡ ಇದ್ದರು ಅವನು ಅಭಿವೃದ್ಧಿ ಹೊಂದಿದನು. ಅವನು ತನ್ನ ಯಜಮಾನನಾದ ಐಗುಪ್ತನ ಮನೆಯಲ್ಲಿದ್ದನು. ಕರ್ತನು ಅವನ ಸಂಗಡ ಇದ್ದಾನೆಂದೂ ಅವನು ಮಾಡುವದೆಲ್ಲವನ್ನು ಕರ್ತನು ಸಫಲ ಮಾಡುತ್ತಾನೆಂದೂ ಅವನ ಯಜಮಾನನು ನೋಡಿದಾಗ, ಅವನು ತನಗಿದ್ದ ಎಲ್ಲಾದರ ಮೇಲೆ ಅವನನ್ನು ಅಧಿಕಾರಿಯನ್ನಾಗಿ ನೇಮಿಸಿದನು. 

 

ಪ್ರಿಯರೇ! ನಿಮ್ಮ ಕುಟುಂಬವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಸಣ್ಣ ವ್ಯವಹಾರವಾಗಿರಲಿ, ದೊಡ್ಡ ವ್ಯವಹಾರವಾಗಿರಲಿ ಅಥವಾ ಮನೆಕೆಲಸ ಯಾವುದೇ ಆಗಿರಲಿ, ನಾವು ಮಾಡುವ ಕೆಲಸದಲ್ಲಿ ನಂಬಿಗಸ್ತಿಕೆ ಮತ್ತು ಕಠಿಣ ಪರಿಶ್ರಮದಲ್ಲಿ ಅತ್ಯುತ್ತಮರಾಗಿ ಮಾರ್ಪಡೋಣ. ಮೇಲೆ ತಿಳಿಸಿದ ಸಹೋದರ ಇಂದಿಗೂ ಅನೇಕರಿಗೆ ಆಶೀರ್ವಾದವಾಗಿದ್ದಾರೆ. ಕಾರಣ ದೇವರ ಮೇಲಿನ ನಂಬಿಕೆ ಮತ್ತು ಆತನ ನಂಬಿಗಸ್ತಿಕೆ. ದೇವರು ನಿಮ್ಮನ್ನು ನೇಮಿಸಿರುವ ಸ್ಥಾನ ಮತ್ತು ಜವಾಬ್ದಾರಿಗೆ ನೀವು ನಿಷ್ಠರಾಗಿದ್ದರೆ, ಒಂದು ದಿನ ದೇವರು ಖಂಡಿತವಾಗಿಯೂ ನಿಮ್ಮನ್ನೂ ಸಹ ಅಧಿಕಾರಿಯನ್ನಾಗಿ ಮಾರ್ಪಡಿಸುತ್ತಾರೆ. ನಂಬಿಗಸ್ತ ಮನುಷ್ಯನು ಪರಿಪೂರ್ಣ ಆಶೀರ್ವಾದಗಳನ್ನು ಪಡೆಯುವನು. ಹಲ್ಲೇಲೂಯಾ!

- Mrs ನ್ಯಾನ್ಸಿ ಅದಿಸಯಮಣಿ

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿರುವ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al