Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.04.2025
Share:

By Village Missionary Movement

Saturday, 19-Apr-2025

ಧೈನಂದಿನ ಧ್ಯಾನ(Kannada) – 19.04.2025

 

ಸವಾಲಿನ ಗುರಿಗಳು!!

 

"ಆಚೆ ಇರುವ ಫಿಲಿಷ್ಟಿಯರ ಕಾವಲುದಂಡಿಗೆ ವಿರೋಧವಾಗಿ ಹೋಗೋಣ ಬಾ...." - 1 ಸಮುವೇಲ 14:1

 

ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು 5 ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಅವರು ವಾಯುಯಾನ ಮತ್ತು ರೈಟ್ ಸಹೋದರರ ಕುರಿತು ತರಗತಿಗಳನ್ನು ಕಲಿಸಿದರು. ಆಗ ಕೆಲವು ವಿದ್ಯಾರ್ಥಿಗಳು ತುಂಟತನದಿಂದ "ಸರ್, ನಾವು ಯಾವಾಗ ವಿಮಾನದಲ್ಲಿ ಹಾರಾಡುವುದು?" ಎಂದು ಕೇಳಿದರು. ಇದನ್ನು ಸ್ವಲ್ಪವೂ ನಿರೀಕ್ಷಿಸದ ಪ್ರಾಂಶುಪಾಲರು ಉತ್ತರಿಸಲು ಸಾಧ್ಯವಾಗದೆ ಒಂದು ಕ್ಷಣ ಯೋಚಿಸಿದರು. ಆದರೆ ಅವರು ಇದನ್ನೇ ಒಂದು ಸವಾಲಾಗಿ ತೆಗೆದುಕೊಂಡು ತನ್ನ ಅನೇಕ ಸ್ನೇಹಿತರು ಮತ್ತು ಊರಿನ ಜನರಿಗೆ ಇದರ ಬಗ್ಗೆ ಹೇಳುವ ಮೂಲಕ ಹಣವನ್ನು ಸಂಗ್ರಹಿಸಿದರು. ಒಂದು ನಿರ್ದಿಷ್ಟ ದಿನದಂದು, ಅವರು 5 ನೇ ತರಗತಿಯ 20 ವಿದ್ಯಾರ್ಥಿಗಳನ್ನು ಮಧುರೈನಿಂದ ಚೆನ್ನೈಗೆ ವಿಮಾನದಲ್ಲಿ ಕರೆದೊಯ್ದರು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಇಂತಹ ಸವಾಲಿನ ಕೆಲಸವನ್ನು ಕೈಗೊಂಡಿದ್ದಕ್ಕಾಗಿ ಅನೇಕರು ಪ್ರಾಂಶುಪಾಲರನ್ನು ಶ್ಲಾಘಿಸಿದರು. 

 

1 ಸಮುವೇಲ 14 ನೇ ಅಧ್ಯಾಯದಲ್ಲಿ, ಯೋನಾತಾನನ ಸವಾಲಿನ ನಾಯಕತ್ವ ಮತ್ತು ಸವಾಲಿನ ಗುರಿಗಳನ್ನು ನಾವು ನೋಡುತ್ತೇವೆ. ಅಂದರೆ, ಅವರ ಜೊತೆ ಒಬ್ಬನೇ ಒಬ್ಬ ಆಯುಧಗಳನ್ನು ಹೊರುವ ಯುವಕನಿದ್ದರೂ, ಶತ್ರು ನೆಲೆಗೆ ಹೋಗೋಣ ಬಾ ಎಂದು ಸವಾಲು ಹಾಕಿ ಕರೆಯುತ್ತಾರೆ. ನಡೆದಿದ್ದೇನು? ಯೋನಾತಾನನು ಮತ್ತು ಅವನ ಆಯುಧ ಹೊರುವವನು ಮಹಾ ಯಶಸ್ಸನ್ನು ಕಂಡರು. 

 

ಪ್ರಿಯರೇ! ಜಗತ್ತಿನ ಅನೇಕ ನಾಯಕತ್ವಗಳು ಹೆಸರು ಮತ್ತು ಖ್ಯಾತಿಯ ಸುತ್ತ ಕೇಂದ್ರೀಕೃತವಾಗಿವೆ. ಅನೇಕ ಯುವಕರು ಅದಕ್ಕಿಂತ ಕೆಳಮಟ್ಟಕ್ಕೆ ಹೋಗುತ್ತಿದ್ದಾರೆ. ಸವಾಲಿನ ನಾಯಕತ್ವವಿಲ್ಲ, ಸವಾಲಿನ ಗುರಿಗಳಿಲ್ಲ. ಗ್ರಾಮ ಮಿಷನರಿ ಆಂದೋಲನದ ಸವಾಲಿನ ಗುರಿಗಳು ಮತ್ತು ನಾಯಕತ್ವಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ಇತರರು ತೆಗೆದುಕೊಳ್ಳಲು ಹಿಂಜರಿಯುವ ಸವಾಲಿನ ಗುರಿಗಳನ್ನು ನಮ್ಮ ಸೇವೆಯು ತೆಗೆದುಕೊಳ್ಳುವಂತೆ ದೇವರು ದಯೆಯಿಂದ ಅನುಮತಿ ಸಿದ್ದಾರೆ. ತಮಿಳುನಾಡಿನಲ್ಲಿರುವ ಗ್ರಾಮಗಳಲ್ಲೆಲ್ಲಾ ಸುವಾರ್ತಾಬೋಧನೆಯಿಂದ ಹಿಡಿದು, ಯುವ ಶಿಬಿರಗಳು ಮತ್ತು ಗ್ರಾಮ ಸೇವಕರ ಸಮ್ಮೇಳನಗಳವರೆಗು ಪ್ರತಿಯೊಂದು ಗುರಿಯೂ ಸವಾಲಿನದ್ದೇ! ಸವಾಲಿನ ನಾಯಕತ್ವ ಮತ್ತು ಗುರಿಗಳೊಂದಿಗೆ ಈ ಸೇವೆಯಲ್ಲಿ ಪಾಲುದಾರರಾಗಲು ನಾವು ನಿಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತೇವೆ! "ನಮ್ಮ ಸೇವೆಯಲ್ಲಿ, ಯಾವೊಂದು ಪ್ರತ್ಯೇಕ ವ್ಯಕ್ತಿಗಳಲ್ಲ, ನಮ್ಮ ಗುರಿಗಳೇ ಹೀರೋ" ಎಂದು ಸಹೋದರ ಡೇವಿಡ್ ಗಣೇಶನ್ ಅವರು ಹೇಳುತ್ತಾರೆ. ಹೌದು, ದರ್ಶನವಿಲ್ಲದಿರುವಲ್ಲಿ ಜನರು ನಾಶವಾಗುವರು. ನಾವು ಉನ್ನತ ಗುರಿಗಳನ್ನು ಹೊಂದಿರುವಾಗ, ನಮ್ಮ ಕಾರ್ಯಗಳು ಸಹ ಮುಂದುವರಿಯುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. 

- T. ಶಂಕರ್‌ರಾಜ್

 

ಪ್ರಾರ್ಥನಾ ಅಂಶ:

ವಿಬಿಎಸ್ ಪುಸ್ತಕಗಳ ಮುದ್ರಣದ ಅಗತ್ಯತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet casibom casibom giriş jojobet jojobet giriş perabet perabet giriş