By Village Missionary Movement
Friday, 18-Apr-2025ಧೈನಂದಿನ ಧ್ಯಾನ(Kannada) – 18.04.2025
ಶಿಲುಬೆಯ ಮೇಲೆ ಅರಳಿದ ಹೂವುಗಳು
"...ಆದರೆ ಅವರು - ಅವನನ್ನು ಶಿಲುಬೆಗೆ ಹಾಕಿಸು ಎಂದು ಬಹಳವಾಗಿ ಆರ್ಭಟಿಸಿದರು." - ಮಾರ್ಕನು 15:14
ಪ್ರೀತಿಯಾಗಿ ಸೃಷ್ಟಿಯಾದ ದೇವರು, ಶಿಲುಬೆಯಲ್ಲಿ ಜಜ್ಜಲ್ಪಟ್ಟು ಅರೆ ಜೀವವಾಗಿ ನೇತಾಡುತ್ತಿರುವಾಗ 7 ವಾಕ್ಯಗಳನ್ನು ಸತತವಾಗಿ ಹೇಳಿದರು. ಅವುಗಳಲ್ಲಿ ಪ್ರತಿಯೊಂದೂ ಹೂವಾಗಿ ಅರಳಿ ಪರಿಮಳ ಬೀರುತ್ತಿವೆ. ಅವುಗಳನ್ನು ನೋಡೋಣವಾ?
ಕ್ಷಮೆ (ಹೂವು): ಯೇಸು ಕ್ರಿಸ್ತನು ಶಿಲುಬೆಯ ಮೇಲೆ ನೋವಿನ ಉತ್ತುಂಗದಲ್ಲಿ ನೇತಾಡುತ್ತಿದ್ದಾಗಲೂ, ಆತನೂ ಅವರನ್ನು ಕ್ಷಮಿಸಿ ತಂದೆಯನ್ನೂ ಕ್ಷಮಿಸುವಂತೆ ಬೇಡಿಕೊಂಡರು. ನಮಗೆ ಯಾರೂ ಅಷ್ಟು ದೊಡ್ಡ ಹಾನಿ ಮಾಡಿಲ್ಲ. ಆದ್ದರಿಂದ ಎಲ್ಲರನ್ನೂ ಕ್ಷಮಿಸೋಣ.
ರಕ್ಷಣೆ (ಹೂವು): ತನ್ನ ಪಾಪವನ್ನು ಅರಿತುಕೊಂಡು, "ನಿಮ್ಮ ರಾಜ್ಯದಲ್ಲಿ ನನ್ನನ್ನು ನೆನೆಸಿಕೊಳ್ಳಿರಿ" ಎಂದು ಬೇಡಿಕೊಂಡ ಕಳ್ಳನಿಗೆ ರಕ್ಷಣೆಯನ್ನು ಆಜ್ಞಾಪಿಸಿದರು. ಈ ರಕ್ಷಣೆಯ ಸಂದೇಶವನ್ನು ನಾವು ಸಹ ಇತರರೊಂದಿಗೆ ಹಂಚಿಕೊಳ್ಳಬೇಕೆಂದು ದೇವರು ಬಯಸುತ್ತಿದ್ದಾರೆ. ನಾವು ಎಷ್ಟು ಜನರಿಗೆ ಪ್ರಕಟಿಸಿದ್ದೇವೆ?
ಆರೈಕೆ (ಹೂವು): ಹತ್ತು ತಿಂಗಳು ತನ್ನನ್ನು ಹೊತ್ತು ಹೆತ್ತು ಸಾಕಿ ಸಲಹಿದ ತನ್ನ ತಾಯಿ ಅಸಹನೀಯ ನೋವಿನಿಂದ ಅಳುತ್ತಿರುವುದನ್ನು ನೋಡಿ, ತನ್ನ ಕೊನೆಯ ಕರ್ತವ್ಯವನ್ನು ಪೂರೈಸಲು ಆಕೆಯನ್ನು ನೋಡಿಕೊಳ್ಳಲು ತನ್ನ ಪ್ರೀತಿಯ ಶಿಷ್ಯನಿಗೆ ಒಪ್ಪಿಸುತ್ತಾರೆ. ನಾವು ಕೂಡ ಅನೇಕ ಕಷ್ಟಗಳ ಮಧ್ಯದಲ್ಲಿ ಬೆಳೆಸಿದ ಹೆತ್ತವರನ್ನು ಕೊನೆಯವರೆಗೂ ನೋಡಿಕೊಳ್ಳಬೇಕು. ಅದನ್ನು ನಮಗೆ ಒಂದು ಮೂಲ ಮಾದರಿಯಾಗಿ ಯೇಸು ಮಾಡಿ ಮುಗಿಸಿಬಿಟ್ಟರಲ್ಲಾ!
ಕರುಣೆ (ಹೂವು): ಲೋಕದ ಸಂಪೂರ್ಣ ಪಾಪವು ಯೇಸುವಿನ ಮೇಲೆ ಬಿದ್ದಿತು ಮತ್ತು ಮಧ್ಯಾಹ್ನ 12 ರಿಂದ 3 ರವರೆಗೆ ಕತ್ತಲೆ ಅವರನ್ನು ಆವರಿಸಿತು. ತಂದೆಯ ಮುಖ ಮರೆಮಾಡಲಾಗಿತ್ತು. ಅವರು ವರ್ಣಿಸಲಾಗದ ನೋವಿನಿಂದ ನರಳಿದರು. ನಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಕತ್ತಲೆಯನ್ನು ಬದಲಾಯಿಸಲು, ಕರ್ತನ ಮುಖವನ್ನು ನೋಡಲು ನಾವು ಪರಿತಪಿಸುತ್ತಾ ಪ್ರಾರ್ಥಿಸುತ್ತಿದ್ದೇವಾ?
ತವಕ (ಹೂವು): ಗೆತ್ಸೆಮನೆಯಲ್ಲಿ, ರಕ್ತವಾಗಿ ಬೆವರು ಸುರಿಯುವ ಮಟ್ಟಿಗೆ ಮನೋಭಾರಗಳು,ಶರೀರದಲ್ಲಿಯೂ, ಚಾಟಿಯೇಟುಗಳು ಮತ್ತು ಹೊಡೆತಗಳು ಸೇರಿದಂತೆ ಅನೇಕ ದೈಹಿಕ ಮತ್ತು ಮಾನಸಿಕ ಕಷ್ಟಗಳನ್ನು ಅನುಭವಿಸಿದ್ದರಿಂದ ಅವರಿಗೆ ತುಂಬಾ ಬಾಯಾರಿಕೆಯಾಯಿತು. ಮತ್ತು "ಪಾಪಿಗಳನ್ನು ರಕ್ಷಿಸಲು ಬಂದ ಆತನಿಗೆ ಆತ್ಮಗಳ ಕುರಿತಾದ ದಾಹದಿಂದ, ತವಕಿಸಿ ಬಾಯಾರಿದ್ದೇನೆ ಎಂದು ಹೇಳಿದರು. ಹೌದು, ನಾವು ಸಹ ದೇವರನ್ನು ಅರಿಯದವರಿಗೆ ಆತನನ್ನು ಪ್ರಕಟಿಸುವ ಮೂಲಕ ಆತನ ಬಾಯಾರಿಕೆಯನ್ನು ತಣಿಸುತ್ತೇವೆ.
ಮುಗಿಯಿತು (ಹೂವು): ದೇವಾಧಿ ದೇವನು ಭೂಮಿಗೆ ತಂದ ಉದ್ದೇಶವನ್ನು ಪೂರ್ಣಗೊಳಿಸಿದರು. "ನಾನು ಕ್ರಿಸ್ತನಿಗಾಗಿ ಜೀವಿಸಿ ಓಟವನ್ನು ಮುಗಿಸಿದ್ದೇನೆ" ಎಂದು ಪೌಲನು ಹೇಳಿದರು. ಅದೇ ರೀತಿ, ನಮಗೆ ಕೊಟ್ಟಿರುವ ಕೆಲಸವನ್ನು ಪೂರ್ಣಗೊಳಿಸಲು ದೃಢನಿಶ್ಚಯ ಮಾಡೋಣ.
ಒಪ್ಪಿಸುವಿಕೆ (ಹೂವು): ಒಪ್ಪಿಸುತ್ತೇನೆ ಎಂಬುದಕ್ಕೆ ಅಮೂಲ್ಯವಾದದ್ದನ್ನು ಮರಳಿ ಪಡೆಯಲು ಸುರಕ್ಷಿತ ಸ್ಥಳದಲ್ಲಿ ಕೊಟ್ಟಿಡುವ ಹಾಗೆ ತನ್ನ ಆತ್ಮವನ್ನು ತಂದೆಯ ಬಳಿ ಒಪ್ಪಿಸುತ್ತಾರೆ. ಇಂದು ನಮ್ಮ ಜೀವನವನ್ನು ಅವರಿಗೆ ಒಪ್ಪಿಸಿ ಬದುಕುತ್ತಿದ್ದೇವೆಯೇ?
ಮೂರು ಗಂಟೆಗಳಲ್ಲಿ ಇಡೀ ಕ್ರೈಸ್ತ ಜೀವನವನ್ನು ಏಳು ಹೂವುಗಳಾಗಿ ಅರಳಿಸಿದರು. ಈ ಹೂವುಗಳ ಪರಿಮಳವನ್ನು ಬೀಸುತ್ತಾ ನಾವು ಸಹ ಬದುಕೋಣ.
- Mrs. ವನಜಾ ಬಾಲರಾಜ್
ಪ್ರಾರ್ಥನಾ ಅಂಶ:
6000 ಹಳ್ಳಿಗಳಲ್ಲಿ ವಿಬಿಎಸ್ ಸೇವೆಗೆ ದೇವರು ಬಾಗಿಲುಗಳನ್ನು ತೆರೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482