Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.05.2021
Share:

By Village Missionary Movement

Tuesday, 18-May-2021

ಧೈನಂದಿನ ಧ್ಯಾನ(Kannada) – 18.05.2021

ವಿದ್ಯುತ್ ತಂತಿ ಮತ್ತು ಕರೆಂಟ್ ಹುಳಗಳು

"ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ." - ಯೋಹಾನ 17:16

ಆಟವಾಡಿ ಬಿಟ್ಟು ಮನೆಗೆ ಹಿಂದಿರುಗಿದ ಜೋಯಲ್ ತನ್ನ ಮನೆಯ ಟೆರೇಸ್ ಬಳಿ ವಿದ್ಯುತ್ ಕಂಬದ ಮೇಲೆ ಕುಳಿತಿದ್ದ ಕೆಲವು ಕರೆಂಟ್ ಹುಳಗಳನ್ನು ನೋಡಿ ಅವುಗಳು ಎಬ್ಬಿಸುತ್ತಿದ್ದ ಬೆಳಕನ್ನು  ಆಳವಾಗಿ ಆಸೆಯಿಂದ ನೋಡುತ್ತಾ ಅವುಗಳಲ್ಲಿ ಒಂದನ್ನು ಹಿಡಿಯಲು ಹೊರಟನು.  ಅನಿರೀಕ್ಷಿತವಾಗಿ ಜೋಯೆಲ್ ನ  ಕೈ ವಿದ್ಯುತ್ ತಂತಿಗೆ ಬಡಿದು ಕೆಳಗೆ ಬಿದ್ದು ಹೋದನು. ಆ ಕರೆಂಟ್ ಹುಳಗಳು ಜೋರಾಗಿ ಹಾರಿಹೋದವು.  ಅದನ್ನು ನೋಡಿದ ಜೋಯೆಲ್‌ಗೆ ಒಂದು ಪ್ರಶ್ನೆ ಉದ್ಭವಿಸಿತು.  ಕರೆಂಟ್ ಹುಳಗಳು ವಿದ್ಯುತ್ ತಂತಿಗಳ  ಮೇಲೆ ಕುಳಿತಾಗ ಏನೂ ಆಗಲಿಲ್ಲವೇ?  ನನ್ನ ಕೈಗಳು ಅದನ್ನು ಲಘುವಾಗಿ ಸ್ಪರ್ಶಿಸಿದ ತಕ್ಷಣ ವಿದ್ಯುತ್ ತಂತಿಯ ಕಂಪನವನ್ನು ನಾನು ಸಹಿಸಲಾಗಲಿಲ್ಲವೇ  ಎಂದು ಗೊಂದಲಕ್ಕೊಳಗಾದ ಅವನು  ತನ್ನ ತಾಯಿಯನ್ನು ಪ್ರಶ್ನೆ ಕೇಳಿದನು.  ಅದಕ್ಕೆ ಅವನ ತಾಯಿ ಹೀಗೆ  ಉತ್ತರಿಸಿದರು, “ವಿದ್ಯುತ್ ಮಾರ್ಗದಲ್ಲಿ ಕುಳಿತಾಗ ಕರೆಂಟ್ ಹುಳಗಳಿಗೆ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲ.  ಆದರೆ ನಿನ್ನ ಕೈಯಿಂದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದಾಗ, ನಿನ್ನ ಪಾದಗಳು ಭೂಮಿಯ ಸಂಪರ್ಕದಲ್ಲಿರುವುದರಿಂದ ಆ ವಿದ್ಯುತ್ ತಂತಿಗಳ ಕಂಪನವನ್ನು ನೀನು ಅನುಭವಿಸಿದೆ” ಎಂದು ಹೇಳಿದರು.

ಹೌದು, ಈ ಕರೆಂಟ್ ಹುಳಗಳು ಭೂಮಿಗೆ ಸಂಪರ್ಕವಿಲ್ಲದೆ ಸರಳ, ಸುರಕ್ಷಿತ, ನಿರಾತಂಕದ ಜೀವನವನ್ನು ನಡೆಸುತ್ತವೆ.  ನಾವೂ ಅಂತಹ ಜೀವನವನ್ನು ನಡೆಸಲು ಕರೆಯಲ್ಪಟ್ಟಿದ್ದೇವೆ.  ಅದು ಹೇಗೆ ಎಂದು ನೀವು ಕೇಳುತ್ತೀರಾ?  ನಾವು ಲೋಕದಲ್ಲಿ ವಾಸಿಸುತ್ತಿದ್ದೇವೆ ಆದರೆ ಲೋಕಕ್ಕೆ ಸೇರಿದವರಲ್ಲ ಎಂದು ಸತ್ಯವೇದವು ಹೇಳುತ್ತದೆ.  ಅಂದರೆ, ಕಣ್ಣುಗಳ ಕಾಮ, ಮಾಂಸದ ಕಾಮ, ಮತ್ತು ಜೀವನದ ಹೆಮ್ಮೆಯ ನಂತರ ಕಾಮಿಸುವ ಮನುಷ್ಯನ ಆತ್ಮವು ಈ ಪ್ರಪಂಚದಿಂದ ಅಪವಿತ್ರಗೊಂಡಿದೆ.  ಉದಾಹರಣೆಗೆ, ಹವ್ವಳು ತನ್ನ ಕಣ್ಣುಗಳಿಂದ ಹಣ್ಣನ್ನು ಇಚ್ಚಿಸಿದಳು,  ಮತ್ತು ಅದನ್ನು ಸವಿಯಬೇಕೆಂಬ ಮಾಂಸದ ಆಸೆ ಮೇಲುಗೈ ಸಾಧಿಸಿತು.  ಏಕೆ ಗೊತ್ತಾ?  ದೇವರುಗಳಂತೆ ಮಾರ್ಪಡಬೇಕೆಂಬ ಜೀವನದ ಹೆಮ್ಮೆಯಿಂದ ತಾನೇ?  ಆದರೆ ಯೇಸುಕ್ರಿಸ್ತನು ಅರಣ್ಯದಲ್ಲಿ ಸೈತಾನನಿಂದ ಶೋಧನೆಗೆ ಒಳಗಾದಾಗ ಈ ಮೂರು ವಿಷಯಗಳನ್ನು ಜಯಿಸಿದರು.

ಪ್ರಿಯರೇ!  ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ. ಎಂದು  ಯೇಸುಕ್ರಿಸ್ತನ ಮಾತುಗಳನ್ನು ನಾವು ಯಾವಾಗಲೂ ನೆನಸಿಕೊಳ್ಳೋಣ. ನಾವು ಈ ಲೋಕದಲ್ಲಿ ಬದುಕಿದರು ಲೋಕದವರು ಮಾಡುವ ಕ್ರಿಯೆಗಳನ್ನು ಅವರ ಜೀವನದ ವಿಧಾನಗಳನ್ನು, ನಮ್ಮನ್ನು ಸೆಳೆಯಲು, ಕದಲಿಸಲು ಸ್ಥಳ ಕೊಡಬಾರದು. ಮತ್ತು ಲೋಕದಲ್ಲಿಯೂ ಲೋಕದಲ್ಲಿರುವವುಗಳ ಮೇಲೆಯೂ ನಮ್ಮ ಜೀವನ ಲೋಕವನ್ನು ಮೆಚ್ಚಿಸುವುದಾಗಿರದೇ, ದೇವರನ್ನು ಮೆಚ್ಚಿಸುವುದಾಗಿರಲಿ. ಇಂತಹ ಜೀವನವನ್ನು ಜೀವಿಸಲು ದೇವರು ನಮಗೆ ಸಹಾಯ ಮಾಡಲಿ.
-    Mrs. ಜಾಸ್ಮಿನ್ ಸಮುವೇಲ್

ಪ್ರಾರ್ಥನಾ ಅಂಶ:-
Peace centre ಗೆ chapel ಕಟ್ಟುವುದಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳನ್ನು ದೇವರು ಆಶೀರ್ವದಿಸಿಕೊಡುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet