Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.04.2025
Share:

By Village Missionary Movement

Wednesday, 09-Apr-2025

ಧೈನಂದಿನ ಧ್ಯಾನ(Kannada) – 09.04.2025

 

ರಕ್ಷಣೆಯನ್ನು ಸ್ಥಿರಪಡಿಸು

 

"ಎಚ್ಚರವಾಗಿರು; ಸಾಯುವ ಹಾಗಿದ್ದ ಉಳಿದವುಗಳನ್ನು ದೃಢಪಡಿಸು. ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಸಂಪೂರ್ಣವಾದದ್ದೆಂದು ನಾನು ಕಾಣಲಿಲ್ಲ" - ಪ್ರಕಟಣೆ. 3:2

 

ಇತ್ತೀಚೆಗೆ, ನನಗೆ ಪರಿಚಯವಿರುವ ಒಂದು ಯೌವನಸ್ಥ ಮಗಳನ್ನು ಭೇಟಿಯಾದೆ. ತುಂಬಾ ಸಂತೋಷವಾಯಿತು. ಏಕೆಂದರೆ ಅವಳ ಎಲ್ಲಾ ಮಾತುಗಳು ಪರಿಶುದ್ಧವಾಗಿಯೂ, ಭಕ್ತಿಪೂರ್ವಕವಾಗಿಯೂ ಇದ್ದವು. ತಾನು ಹೊಂದಿಕೊಂಡ ರಕ್ಷಣೆಯಲ್ಲಿ ಇಷ್ಟೊಂದು ದೃಢನಿಶ್ಚಯದಿಂದ ಇದ್ದಾಳಲ್ಲಾ ಎಂದು ದೇವರನ್ನು ಸ್ತುತಿಸಿದೆ. ಒಂದೆರಡು ದಿನಗಳಲ್ಲಿ, ಆ ಮಗಳ ತಾಯಿ ತನ್ನ ಮಗಳ ಬಿಡುಗಡೆಗಾಗಿ ಪ್ರಾರ್ಥಿಸಲು ನನ್ನನ್ನು ಕೇಳಿಕೊಂಡರು. "ಕಳೆದ ಒಂದು ವರ್ಷದಿಂದ, ಅವಳು ಮನೆಯಲ್ಲಿ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿಲ್ಲ, ಯಾವಾಗಲೂ ಫೋನ್‌ನಲ್ಲಿಯೇ ಇರುತ್ತಾಳೆ, ತನ್ನ ಅಧ್ಯಯನದತ್ತ ಗಮನ ಹರಿಸುವುದಿಲ್ಲ, ಹೆತ್ತವರನ್ನು ಬೆದರಿಸುತ್ತಾಳೆ, ಕೆಟ್ಟ ಮಾತುಗಳಿಂದ ಶಪಿಸುತ್ತಾಳೆ, ಎಲ್ಲದಕ್ಕೂ ಹೆತ್ತವರನ್ನು ದೂಷಿಸುತ್ತಾಳೆ, ಸ್ನೇಹಿತರೊಂದಿಗೆ ಸುತ್ತಾಡುತ್ತಾಳೆ, ಬೈಬಲ್ ಓದುವುದಿಲ್ಲ, ಮತ್ತು ಪ್ರಾರ್ಥಿಸುವುದಿಲ್ಲ. ಆದರೆ ಅವಳು ಕೀಬೋರ್ಡ್ ವಾದಕಿ, ಗಿಟಾರ್ ವಾದಕಿ, ಗಾಯಕವೃಂದದ ಸದಸ್ಯೆ - ಅವಳಿಗೆ ದೇವರೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಅಳುತ್ತಾ ಇನ್ನೂ ಅನೇಕ ವಿಷಯಗಳನ್ನು ಹೇಳಿದರು. ಆಗ ನನಗೆ ಒಂದು ಸತ್ಯವೇದದ ಮಾತು ನೆನಪಾಯಿತು. "...ಜೀವಿಸುವವನು ಎಂದು ಹೆಸರು ನಿನಗಿದ್ದರೂ ಸತ್ತವನಾಗಿದ್ದೀ." ಪ್ರಕಟನೆ 3:1. ಅವಳು ಹೊರಗೆ ನೋಡಲು ರಕ್ಷಿಸಲ್ಪಟ್ಟವಳು; ದೇವರ ಮಗು; ಆಧ್ಯಾತ್ಮಿಕಳು; ಅಂದರೆ, ಜೀವಂತವಾಗಿರುವವಳು. ಆದರೆ ಆಂತರಿಕ ಜೀವನವು ಸತ್ತ ಸ್ಥಿತಿಯಲ್ಲಿದೆ. ಆಧ್ಯಾತ್ಮಿಕ ಜೀವನವಿಲ್ಲ. ಈ ಕೊನೆಯ ದಿನಗಳಲ್ಲಿ ಸಾವಿರಾರು ಜನರಿರುವುದು ಹೀಗೆಯೇ. ಆರಾಧನೆಗಳು, ನೃತ್ಯಗಳು, ಉಪವಾಸ ಮತ್ತು ಹಬ್ಬಗಳಿಗೆ ಯಾವುದೇ ಕೊರತೆಯಿಲ್ಲ. ಹೊರಗಿನ ನೋಟ ಹಸಿರು ಮರದಂತಿದೆ. ಒಳಗೆ, ಅವು ನಿರ್ಜೀವ, ಒಣಗಿದ ಮರಗಳಂತೆ ಕಾಣುತ್ತಿವೆ.

 

ಇದನ್ನು ಓದುತ್ತಿರುವ ದೇವಜನರೇ! ನಾವು ದೇವರಿಗೆ ಇಷ್ಟವಿಲ್ಲದ ವಿಷಯಗಳಲ್ಲಿ ಸಿಕ್ಕಿಹಾಕಿಕೊಂಡು, ಪ್ರಾರ್ಥನಾ ಜೀವನವನ್ನು ಕಳೆದುಕೊಂಡು, ಭಕ್ತಿಯುಳ್ಳವರಾಗಿ ವೇಷ ಧರಿಸಿಕೊಂಡು ನಟಿಸುತ್ತಾ ಆಲಯದಲ್ಲೂ, ಕಚೇರಿಯಲ್ಲೂ ಸುತ್ತುತ್ತಿದ್ದೇವೆ! ನಾವು ಎಚ್ಚರಗೊಳ್ಳುವ ಸಮಯ ಬಂದಿದೆ. ನಾವು ಹಿಂದೆ ಕರ್ತನಲ್ಲಿ ಜೀವಂತವಾಗಿರುವ ಜನರಾಗಿ ಹೇಗೆ ವರ್ತಿಸಿದೆವು ಎಂಬುದರ ಕುರಿತು ಚಿಂತಿಸಲು, ನಮ್ಮ ಆಧ್ಯಾತ್ಮಿಕ ಜೀವನವು ಯಾವ ರೀತಿಯಲ್ಲಿ ಸತ್ತುಹೋಗಿದೆ ಎಂಬುದನ್ನು ಪರೀಕ್ಷಿಸಲು ಮತ್ತು ಪುನಃ ಸ್ಥಾಪಿಸಲು, ದುರಸ್ತಿ ಮಾಡಲು, ನವೀಕರಿಸಲು ಮತ್ತು ಪಶ್ಚಾತ್ತಾಪ ಪಡಲು ದೇವರು ನಮ್ಮನ್ನು ಎಚ್ಚರಿಸುತ್ತಿದ್ದಾರೆ. ನಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಕಣ್ಣೀರಿಟ್ಟು, ದೇವರ ಬಳಿ ರಕ್ಷಣೆಯನ್ನು ಕೇಳಿ ಪಡೆದುಕೊಂಡಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ರಕ್ಷಣೆಯನ್ನು ಕಾಪಾಡಿಕೊಳ್ಳುವ ಮೂಲಕ ಪಶ್ಚಾತ್ತಾಪಕ್ಕೆ ಯೋಗ್ಯವಾದ ಫಲವನ್ನು ನೀಡಲು ನಾವು ಎಚ್ಚರಗೊಳ್ಳೋಣ.             

 

ರಕ್ಷಣೆಯ ಉಡುಪನ್ನು ಮಲಿನ (ಕೊಳಕು) ಮಾಡದವರಿಗೆ ದೇವರು ಗೌರವಿಸಿ ಬಿಳಿ ನಿಲುವಂಗಿಗಳನ್ನು ಕೊಡುತ್ತಾರೆ. ಜೀವ ಪುಸ್ತಕದಿಂದ ಆ ಹೆಸರು ಅಳಿಸಲ್ಪಡುವುದಿಲ್ಲ. ಅವರ ಹೆಸರುಗಳನ್ನು ಯೇಸುವಿನ ಮೂಲಕ ಪರಲೋಕದಲ್ಲಿ ಘೋಷಿಸಲಾಗುತ್ತದೆ. ನಾವು ಕೂಡ ನಮ್ಮ ಜೀವನವನ್ನು ಪುನರ್ನಿರ್ಮಿಸಿದರೆ, ದೇವರ ಮುಂದೆ ನಾವು ಪರಿಪೂರ್ಣರಾಗಿ ಕಂಡುಬರುತ್ತೇವೆ. God bless you!

- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಚೆನ್ನಾಗಿ ಓದಿರುವ ಜ್ಞಾನವಂತರಾದ ಸೇವಕರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al