Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.04.2025
Share:

By Village Missionary Movement

Sunday, 06-Apr-2025

ಧೈನಂದಿನ ಧ್ಯಾನ(Kannada) – 06.04.2025

 

ಕಾಪಾಡುತ್ತಾರೆ.

 

"ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು" - ಕೀರ್ತನೆ 91:11

 

Exam ಅಂದರೆ ಭಯ, Result ಬಂದರೆ ಭಯ, ಹೀಗೆ ಚೆನ್ನಾಗಿ ಓದುವ ಮಕ್ಕಳು ಸಹ ಭಯಪಡುತ್ತಾರೆ, ಅಲ್ವಾ? ನಿನ್ನನ್ನು ಸೃಷ್ಟಿಸಿದ ದೇವರು ನೀನು ಭಯಪಡಬೇಡ! ಎಂದು ಹೇಳಿ, ನಿನಗೆ ಸಹಾಯ ಮಾಡಲು ಸಿದ್ಧರಾಗಿದ್ದಾರೆ. ಮತ್ತೆ ಇನ್ನೇನು! ನಿನಗಿರುವ ಕಷ್ಟಗಳ ಬಗ್ಗೆ ಯೇಸಪ್ಪಾಗೆ ಹೇಳಬಹುದಲ್ಲಾ! O k ನಾ... ಕಥೆ ಕೇಳೋಣ. 

 

ಮೆರ್ಲಿನ್ ಎಂಬ ಪುಟ್ಟ ಹುಡುಗಿ ಸ್ನೇಹಿತರೊಂದಿಗೆ ಸೇರಿ ಚೆನ್ನಾಗಿ ಆಟವಾಡುತ್ತಾಳೆ. ಕೆಲವೊಮ್ಮೆ ಅವಳು ತಿನ್ನುವುದನ್ನು ಸಹ ಮರೆತು ಆಟವಾಡುತ್ತಿದ್ದಳು. ಓ.... ನೀವೂ ಅಷ್ಟೇನಾ? ತಡಮಾಡಿ ನಿಮ್ಮ ತಾಯಿ ನಿಮ್ಮನ್ನು ಹುಡುಕುವಂತೆ ಮಾಡಿ ತೊಂದರೆ ಕೊಡಬಾರದು. ನೀವು ಬೇಗ ಮನೆಗೆ ಹೋಗಬೇಕು, ಸರೀನಾ? ಒಂದು ದಿನ, ಮೆರ್ಲಿನ್ ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಹತ್ತಿರದ ಗುಂಡಿಗೆ ಬಿದ್ದಳು. ಅವಳು Please help me ಎಂದು ಕಿರುಚಿದಳು, ಆದರೆ ಯಾರಿಗೂ ಅವಳ ಮಾತು ಕೇಳಿಸಲಿಲ್ಲ. ಮೆರ್ಲಿನ್ ತಾಯಿ ಕೂಡ ಎಲ್ಲೆಡೆ ಹುಡುಕಿದರು. ಸಿಗಲಿಲ್ಲ, ಆ ಗುಂಡಿಯೊಳಗಿಂದ, ಅವಳ ತಾಯಿ ಕಲಿಸಿಕೊಟ್ಟ ವಾಕ್ಯವನ್ನು ಯೋಚಿಸಿ ನೋಡಿದಳು. ತನ್ನ ಅಪಾಯದ ಸಮಯದಲ್ಲಿ ಯೇಸುವಿಗೆ ಮೊರೆಯಿಟ್ಟಳು. ಇದ್ದಕ್ಕಿದ್ದಂತೆ ಒಂದು ಕೈ ಬಂದು ಅವಳನ್ನು ಮೇಲೆತ್ತಿತು. ನಮ್ಮ ಬೀದಿಯಲ್ಲಿ ಹೀಗೆ ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿರುವ ಈ ಸುಂದರ ವ್ಯಕ್ತಿಯನ್ನು ನಾನು ಹಿಂದೆಂದೂ ನೋಡಿಲ್ಲವೇ ಎಂದು ಮಾತನಾಡುವುದರೊಳಗೆ ಕಣ್ಮರೆಯಾದರು.

 

ಅವಳು ತನ್ನ ತಾಯಿಯ ಬಳಿಗೆ ಹೋಗಿ ನಡೆದದ್ದನ್ನು ಹೇಳಿದಳು. ಅಮ್ಮ ಸಂತೋಷಪಟ್ಟರೂ, ಬೇಗನೆ ಮನೆಗೆ ಬರುವಂತೆ ಗದರಿಸಿದರು. ಮೆರ್ಲಿನ್‌ ನ ತಮ್ಮನಿಗೆ ನಿದ್ದೆಯಲ್ಲಿ ಎದ್ದು ಓಡಾಡುವ ಅಭ್ಯಾಸವಿತ್ತು. ಅವನು ಒಂದು ರಾತ್ರಿ ಕಣ್ಮರೆಯಾದನು. ಪೋಷಕರು ಆತಂಕದಿಂದ ಊರಿನಲ್ಲೆಲ್ಲಾ ಹುಡುಕಿದರು. ಮೆರ್ಲಿನ್ ಭಯವಿಲ್ಲದೆ ಪ್ರಾರ್ಥಿಸಿದಳು ಮತ್ತು ದೇವರನ್ನು ದೇವದೂತನನ್ನು ಕಳುಹಿಸುವಂತೆ ಕೇಳಿದಳು. ಸ್ವಲ್ಪ ಸಮಯದ ನಂತರ, ಅದೇ ಬಿಳಿ ಶರ್ಟ್ ಧರಿಸಿದ ಸುಂದರ ವ್ಯಕ್ತಿಯೊಬ್ಬರು ಮನೆ ಬಾಗಿಲಲ್ಲಿ ಕೆನಡಿಯ ಕೈ ಹಿಡಿದುಕೊಂಡು ಬಂದು, ಭದ್ರವಾಗಿ ನೋಡಿಕೊಳ್ಳುವಂತೆ ಹೇಳಿ ಹೊರಟುಹೋದರು. ದೇವದೂತರು ನಮಗೆ ನಿಜವಾಗಿಯೂ ಸಹಾಯ ಮಾಡುತ್ತಾರೆಂದು ಅವಳು ತಿಳಿದುಕೊಂಡಳು. 

 

ಮುದ್ದು ಪುಟಾಣಿಗಳೇ! ನೀವೆಲ್ಲರೂ ತುಂಬಾ Special, ಗೊತ್ತಾ? ನಿಮಗಾಗಿ ಇರುವ ದೇವದೂತರು ಯಾವಾಗಲೂ ಪರಲೋಕದ ತಂದೆಯ ಮುಖವನ್ನು ನೋಡುತ್ತಾರೆ. ನೀವು ಪ್ರಾರ್ಥಿಸುವಾಗ, ಅವರು ನಿಮಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಹಾಗಾದರೆ ನೀವು ತುಂಬಾ ಅದೃಷ್ಟವಂತರು ತಾನೇ! ಪ್ರತಿದಿನ ಯೇಸುವಿನೊಂದಿಗೆ ಮಾತನಾಡಲು ಮರೆಯಲೇ ಬೇಡಿ. O k.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş