Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.05.2021
Share:

By Village Missionary Movement

Monday, 17-May-2021

ಧೈನಂದಿನ ಧ್ಯಾನ(Kannada) – 17.05.2021

ನಿಮಗೆ ತಿಳಿಯದೆ.

"ನೀವು ಈಗ ನಿಮ್ಮ ದೇವರಾದ ಯೆಹೋವನ ಜನರಾದಿರಷ್ಟೆ. ನೀವು ಈಗ ನಾನು ನಿಮಗೆ ಹೇಳುವ ಆತನ ಮಾತುಗಳಿಗೆ ಕಿವಿಗೊಟ್ಟು ಆತನ ಆಜ್ಞಾವಿಧಿಗಳನ್ನು ಅನುಸರಿಸಬೇಕು." - ಧರ್ಮೋಪದೇಶಕಾಂಡ 27:9,10

ಒಬ್ಬ ತಾಯಿಗೆ ಮೂರು ಜನ ಮಕ್ಕಳಿದ್ದರು. ಆ ಮೂರು ಜನಕ್ಕೂ ಮೂರು ಸೇಬುಗಳನ್ನು  ಕೊಟ್ಟು ಯಾರೂ ನೋಡದಂತೆ ನೀವು ಅದನ್ನು ತಿನ್ನಬೇಕು. ನಾನು  ಸಂಜೆ ಬಂದಾಗ ಹೇಗೆ ತಿಂದಿರೆಂದು ನನಗೆ ಹೇಳಬೇಕು ಎಂದು ಹೇಳಿ ಅಮ್ಮ  ಕಳುಹಿಸಿದರು. ಅವರು ಸಂತೋಷದಿಂದ ಆ ಸೇಬುಗಳನ್ನು ತೆಗೆದುಕೊಂಡು ಹೊರಟುಹೋದರು.  ಹಿರಿಯ ಮಗ ತೋಟಕ್ಕೆ ಹೋಗಿ ಸುತ್ತಲೂ ನೋಡಿ ಯಾರೂ ಇಲ್ಲ ದಿದ್ದದರಿಂದ ಅವನು ಸೇಬು ತಿನ್ನಲು ಪ್ರಾರಂಭಿಸಿದನು.  ಎರಡನೇ ಮಗಳು ಸ್ಟೋರ್ ರೂಂ ಗೆ ಹೋಗಿ ಆ ಸೇಬನ್ನು ಇಲ್ಲಿ ಯಾರೂ ನನ್ನನ್ನು ನೋಡಲಾಗುವುದಿಲ್ಲ ಎಂದು ಸೇಬು ತಿಂದುಬಿಟ್ಟಳು.  ಬಚ್ಚಿಕೊಳ್ಳಲು  ಎಲ್ಲೂ ಸ್ಥಳವಿಲ್ಲದ ಕಾರಣ ಕಿರಿಯ ಮಗ ಸೇಬು ತಿನ್ನಲು ಸಾಧ್ಯವಾಗಲಿಲ್ಲ.  ಸಂಜೆ ಮೂವರು ತಾಯಿಯ ಬಳಿಗೆ ಬಂದರು.  ಮೊದಲು ಸೇಬನ್ನು ತಿಂದ ಇಬ್ಬರೂ ಅದನ್ನು ಹೇಗೆ ತಿಂದರು ಎಂದು ತಾಯಿಗೆ ವಿವರಿಸಿದರು.  ಕಿರಿಯ ಮಗ ಅಮ್ಮ ಯೇಸಪ್ಪನ ಕಣ್ಣುಗಳು ಎಲ್ಲಾ ಕಡೆಯಿಂದಲೂ ನನ್ನನ್ನು  ನೋಡುತ್ತಿವೆ ಆದ್ದರಿಂದ ಅವರಿಗೆ ಮರೆಯಾಗಿ ಹೋಗಿ ಸೇಬನ್ನು ತಿನ್ನಲು ಸಾಧ್ಯವಾಗಲಿಲ್ಲ ಎಂದು ಹೇಳಿದನು.  ಈ ಚಿಕ್ಕ ಹುಡುಗನಿಗೆ ಇರುವ ತಿಳುವಳಿಕೆ ಯಾರಿಗೂ ಇರಲಿಲ್ಲ.  ಆದಾಮನಿಂದ ಇಂದಿನವರೆಗೂ ಇರುವ ಮಾನವ ಜನಾಂಗಕ್ಕೆ ಈ  ಗ್ರಹಿಕೆ  ಇಲ್ಲದೆ ಹೋಗಿದೆ.  ಆದಾಮನೇ  ಎಲ್ಲಿದ್ದೀ ಎಂಬ ದೇವರ  ಧ್ವನಿ ಆದಾಮನಿಗೆ ಕೇಳಿಸಿತು.  ಆದಾಮನು ಎಲ್ಲಿರಬೇಕಾದವನು ಹಗಲಿನಲ್ಲಿ ತಂಪಾದ ಸ್ಥಳದಲ್ಲಿ ದೇವರೊಂದಿಗೆ ಸಮಯ ಕಳೆಯಬೇಕಾದವನು.  ಆದರೆ ಅವನ ಪರಿಸ್ಥಿತಿ  ಏನು?  ಇಬ್ರಿಯ 2: 7 ರ ಪ್ರಕಾರ ಮಹಿಮೆಯೊಂದಿಗೂ,ಘನತೆಯೊಂದಿಗೂ ಕಿರೀಟಧಾರಿಯಾದವನು.  ಅವರು ಮಾಡಿದ ಎಲ್ಲದರ ಮೇಲೆ ಅಧಿಕಾರಿಯಾಗಿ ನೇಮಿಸಲ್ಪಟ್ಟವನು.  ಎಲ್ಲವನ್ನೂ ಅವನ ನಿಯಂತ್ರಣದಲ್ಲಿಡಲಾಗಿತ್ತು. ಆದರೆ ಅವನು ದೇವರ ಧ್ವನಿಯನ್ನು ಕೇಳಿ ಬಚ್ಚಿಟ್ಟುಕೊಂಡೆನು ಎಂದು ಹೇಳುತ್ತಿದ್ದಾನೆ. ಎಷ್ಟೊಂದು ದುಃಖಕರ ಹೀಗೆ ದೇವರ ಆಜ್ಞೆಯನ್ನು ಬಿಟ್ಟು ಹೋಗಿ ಬಿಡುವುದು ಪಾಪ.

ಪ್ರಿಯರೇ!  ದೇವರು ನಮಗೆ ಎಷ್ಟು ದೊಡ್ಡ ಮಹಿಮೆಯನ್ನು ಕೊಟ್ಟಿದ್ದಾರೆಂದು ನಾವು ಎಂದಾದರೂ ಗ್ರಹಿಸಿದ್ದೇವಾ?  ಎಫೆಸ 2:7 ರಲ್ಲಿ ಹೇಳುವಂತೆ ಇಂದು ನಾವು ಕ್ರಿಸ್ತ ಯೇಸುವಿನೊಂದಿಗೆ ಅತ್ಯುನ್ನತ ಸ್ಥಳದಲ್ಲಿ ಕುಳಿತಿದ್ದೇವೆ.  ಇದು ಎಷ್ಟು ದೊಡ್ಡ ಅದೃಷ್ಟ ಎಂದು ನೋಡಿ.  ಲೌಕಿಕ ಭರವಸೆ, ದುರಾಶೆ ಮತ್ತು ಜೀವನಕ್ಕಾಗಿ ಆಶಿಸುತ್ತಾ, ಆದಾಮ ಹವ್ವಳಂತೆ ನಾವು ಅಂತಹ ಶ್ರೇಷ್ಠತೆಯನ್ನು ಅರಿತುಕೊಳ್ಳದೆ ದೇವರಿಂದ ದೂರ ಹೋಗುತ್ತಿದ್ದೇವಾ?  ಹಾಗಿದ್ದರೆ, ತಕ್ಷಣ ನಮ್ಮ ಮನಸ್ಸನ್ನು ಮಾರ್ಪಡಿಸಿಕೊಳ್ಳೋಣ. ಆತನೊಂದಿಗೆ ಸಮಾಧಾನದಿಂದಿದ್ದು ಯಾವಾಗಲೂ ಅವರೊಂದಿಗೆ ಇರಲು ಪ್ರಯತ್ನಿಸೋಣ.  ಹಲ್ಲೇಲೂಯ!
-    Mrs. A. ಬ್ಯೂಲ

ಪ್ರಾರ್ಥನಾ ಅಂಶ:-
ಛತ್ತೀಸ್ ಘಡ, ಆಂಧ್ರ ಮತ್ತು ಒಡಿಶಾ ರಾಜ್ಯಗಳಿಂದ ಬೈಬಲ್ ಕಾಲೇಜಿಗೆ ಬಂದಿರುವ ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗಳಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಜೀವನದಲ್ಲಿ ಅಭಿವೃದ್ದಿಯಾಗುವಂತೆ  ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş