Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.03.2025
Share:

By Village Missionary Movement

Monday, 31-Mar-2025

ಧೈನಂದಿನ ಧ್ಯಾನ(Kannada) – 31.03.2025

 

ಬಲಹೀನತೆಯು ವಿಧೇಯತೆಗೆ ಅಡ್ಡಿಯಲ್ಲ

 

"ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ" - ಫಿಲಿಪ್ಪಿ 4:13 

 

ಮೋಶೆಯು ತನ್ನ ದೈಹಿಕ ಬಲಹೀನತೆಯು ಕರ್ತನ ಆಜ್ಞೆಯನ್ನು ಪಾಲಿಸಲು ಒಂದು ಅಡಚಣೆಯೆಂದು ಪರಿಗಣಿಸುತ್ತಾರೆ. ಇಸ್ರಾಯೇಲ್ ಜನರನ್ನು ಐಗುಪ್ತದ ಗುಲಾಮಗಿರಿಯಿಂದ ಹೊರಗೆ ಕರೆದೊಯ್ಯಲು ಕರ್ತನು ಮೋಶೆಯನ್ನು ಕರೆದಾಗ, ಮೋಶೆ ಕರ್ತನಿಗೆ, ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು; ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಎಂದು ಹೇಳಿದನು. ಯೆಹೋವನು ಅವನಿಗೆ - ಮನುಷ್ಯರಿಗೆ ಬಾಯಿ ಕೊಟ್ಟವರಾರು? ಒಬ್ಬನು ಮೂಕನಾಗಿ ಮತ್ತೊಬ್ಬನು ಕಿವುಡನಾಗಿ ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇವಿುಸಿದವರಾರು? ಯೆಹೋವನಾಗಿರುವ ನಾನಲ್ಲವೇ. ಹೀಗಿರುವದರಿಂದ ನೀನು ಹೊರಟುಹೋಗು; ನಾನು ನಿನ್ನ ಬಾಯಿಗೆ ಸಹಾಯವಾಗಿದ್ದು ನೀನು ಮಾತಾಡಬೇಕಾದದ್ದನ್ನು ಬೋಧಿಸುವೆನು ಎಂದು ಹೇಳಿದನು. ವಿಮೋಚನಕಾಂಡ 4:10-12 ರಲ್ಲಿ, ಕರ್ತನು ಹೀಗೆ ಮೋಶೆಯನ್ನು ಪ್ರೋತ್ಸಾಹಿಸಿ ತನ್ನ ಸೇವೆಯನ್ನು ಮಾಡಲು ಕಳುಹಿಸಿದರು.   

 

ಆಸ್ವಾಲ್ಡ್ ಜೆ. ಸ್ಮಿತ್ ಎಂಬ ದೇವರ ಸೇವಕರು ತನ್ನ ಬಾಲ್ಯದಲ್ಲಿ ತುಂಬಾ ಬಲಹೀನರಾಗಿದ್ದರು. ಆ ಊರಿಗೆ ಯಾವುದೇ ಕಾಯಿಲೆ ಬಂದರೂ ಮೊದಲು ಆಸ್ವಾಲ್ಡ್ ಗೆ ಬರುತ್ತಿತ್ತು ಅದರ ನಂತರವೇ ಬೇರೆಯವರಿಗೆ ಬರುತ್ತಿತ್ತು. ಆರೀತಿ ರೋಗನಿರೋಧಕ ಶಕ್ತಿಯಿಲ್ಲದ ದುರ್ಬಲ ಹುಡುಗ. ಆಸ್ವಾಲ್ಡ್ ತನ್ನನ್ನು ಸಂಪೂರ್ಣವಾಗಿ ದೇವರ ಸೇವೆಗೆ ಅರ್ಪಿಸಿಕೊಂಡರು. ಕರ್ತನು ಅವರ ಬಲಹೀನತೆಯನ್ನು ನೋಡಲಿಲ್ಲ, ಬದಲಾಗಿ ಅವರ ಸಮರ್ಪಣೆಯನ್ನು ನೋಡಿದರು. ಆದ್ದರಿಂದ ದೇವರು ಸ್ಮಿತ್ ಅವರನ್ನು ಬಹಳ ಶಕ್ತಿಶಾಲಿಯಾಗಿ ಬಳಸಿಕೊಂಡರು. ಅವರು ಕೆನಡಾದ ಟೊರೊಂಟೊದಲ್ಲಿ "ಪೀಪಲ್ಸ್ ಚರ್ಚ್" ಅನ್ನು ಸ್ಥಾಪಿಸಲು ಸಹಾಯ ಮಾಡಿದರು, ಇದು ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವವನ್ನು ಹೊಂದಿದೆ. ಇದು ಏನನ್ನು ತೋರಿಸುತ್ತಿದೆ, ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾದ ಮಹಾಯಾಜಕನಾಗಿ ನಮಗಿದ್ದಾರೆ. (ಇಬ್ರಿಯ 4:15)  

 

ಪ್ರಿಯರೇ! ನಮ್ಮ ಜೀವನದಲ್ಲಿ ಸಮಸ್ಯೆಗಳು, ಶೋಧನೆಗಳು ಮತ್ತು ಬಲಹೀನತೆಗಳು ನಮ್ಮನ್ನು ಭಾರವಾಗಿಸಿದಾಗ, ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ ಎಂದು ಸತತವಾಗಿ ಮುನ್ನಡೆಯೋಣ. ಆತನ ಚಿತ್ತಕ್ಕೆ ವಿಧೇಯರಾಗುವ ಮೂಲಕ ಆತನ ಶಕ್ತಿಯನ್ನು ಪಡೆದುಕೊಳ್ಳುತ್ತೇವೆ. ನಮ್ಮ ಬಲಹೀನತೆಯು ಕರ್ತನ ವಾಕ್ಯಕ್ಕೆ ವಿಧೇಯತೆ ತೋರಲು ಅಡ್ಡಿಯಲ್ಲ.  

  

"ದುರ್ಬಲ ಪಾತ್ರೆಯು ನಾನೇ, ಮುರಿಯಲ್ಪಟ್ಟಿದ್ದೇನೆ ಹಲವು ಬಾರಿ ನಾನೇ ನಿನ್ನ ಕೈ ಹಿಡಿದಿದ್ದೇನೆ, ರೂಪಿಸು ಲೋಕಕ್ಕೆ ಉಪ್ಪಾಗಿ ಮಾರ್ಪಡಿಸು."

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿರುವ ಮಿಷನರಿಗಳ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin