Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.03.2025 (Kids Special)
Share:

By Village Missionary Movement

Sunday, 30-Mar-2025

ಧೈನಂದಿನ ಧ್ಯಾನ(Kannada) – 30.03.2025 (Kids Special)

 

ಆನೆಯ ತೂಕ ಎಷ್ಟು?

 

"ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ" - ಜ್ಞಾನೋಕ್ತಿ 2:6

 

ಹೇ! ನೋಡು, ಆನೆ ಬರುತ್ತಿದೆ... ನಾನು ಅದನ್ನು ಮುಟ್ಟಿ ನೋಡಲು ಹೋಗುತ್ತೇನೆ, ನಾನು ನಿನಗೆ ಬಾಳೆಹಣ್ಣು ಕೊಡುತ್ತೇನೆ, ಕಾಸು ಕೊಡುತ್ತೇನೆ ಎಂದು ಪೈಪೋಟಿ ಹಾಕಿಕೊಳ್ಳುತ್ತಾ ಎಲ್ಲಾ ಚಿಕ್ಕ ಮಕ್ಕಳು ಆನೆಯನ್ನು ನೋಡಲು ಆಸೆಯಿಂದ ಓಡುತ್ತೀರ ಅಲ್ವಾ! ಆನೆ ಅಂದರೆ ಎಲ್ಲರಿಗೂ ತುಂಬಾ ಇಷ್ಟ! ಸರಿ, ಆನೆಯ ತೂಕ ಎಷ್ಟು ಗೊತ್ತಾ? ಗೊತ್ತಿಲ್ವಾ O.k. ಅದರ ಬಗ್ಗೆ ಒಂದು ಕಥೆ ಕೇಳೋಣ್ವಾ?

 

ಸಂಜೀವ್ ಮತ್ತು ಶರನ್ ಎಂಬ ಇಬ್ಬರು ಸ್ನೇಹಿತರಿದ್ದರು. ಸಂಜೀವ್ ತುಂಬಾ ಬಡ ಕುಟುಂಬದಿಂದ ಬಂದವನು. ಆದರೆ ಚೆನ್ನಾಗಿ ಪ್ರಾರ್ಥಿಸುತ್ತಾನೆ. ಅವನು ತುಂಬಾ ಬುದ್ಧಿವಂತಿಕೆಯಿಂದ ಮಾತನಾಡುತ್ತಾನೆ. ಚೆನ್ನಾಗಿ ಓದುತ್ತಿದ್ದ ಸಂಜೀವ್‌ ಬಳಿ ಶರನ್ ಗೊತ್ತಿಲ್ಲದ ಪಾಠಗಳನ್ನು ಕೇಳಿ ಓದುತ್ತಿದ್ದ. ಅವನು ತಾಳ್ಮೆಯಿಂದ ಗಣಿತ ಪಾಠವನ್ನು ಕಲಿಸಿಕೊಡುತ್ತಿದ್ದ. ಗೊತ್ತಾಗದ ಪಾಠವನ್ನು ತಿಳಿದಿರುವವರ ಬಳಿ ಕೇಳಿ ಓದುವುದರಲ್ಲಿ ತಪ್ಪೇನಿಲ್ಲ . ರಜಾದಿನಗಳಲ್ಲಿ, ಸಾಮಾನ್ಯವಾಗಿ ಮೈದಾನದಲ್ಲಿ ಸ್ನೇಹಿತರೊಂದಿಗೆ ಆಟವಾಡುವುದು ಅಭ್ಯಾಸ. ಹೀಗೆ ಆಟವಾಡುತ್ತಿರುವಾಗ, ಟಮಟೆ ಬಾರಿಸುವ ಶಬ್ದ ಕೇಳಿಸಿತು. ಆನೆಯ ತೂಕವನ್ನು ಊಹಿಸಬಲ್ಲವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂಬ ಸುದ್ದಿಯನ್ನು ಹೇಳಿಕೊಂಡೇ ಹೋದರು ಒಬ್ಬ ವ್ಯಕ್ತಿ. ಲೋ ಸಂಜೀವ್, ನೀನು ತುಂಬಾ ಬುದ್ಧಿವಂತ, ಖಂಡಿತ ಹೇಳಿಬಿಡ್ತೀಯ ಎಂದನು ಶರಣ್.

 

ಇಡೀ ಪಟ್ಟಣ ಇದೇ ವಿಷಯದ ಬಗ್ಗೆ ಮಾತನಾಡುತ್ತಿದೆ. ಸಂಜೀವ್ ಯೇಸಪ್ಪನ ಬಳಿ ಪ್ರಾರ್ಥಿಸಿ ರಾಜನನ್ನು ಭೇಟಿಯಾಗಲು ಹೋದನು. ಅರಸನೇ ಆನೆಯ ತೂಕವನ್ನು ನಾನು ನಿಮಗೆ ತೋರಿಸುತ್ತೇನೆ. ಆನೆಯನ್ನು ಹೊರುವಂತಹ ಒಂದು ದೋಣಿ ಬೇಕುಎಂದು ಹೇಳಿದನು. ದೋಣಿಯಲ್ಲಿ ಹಾಕಿ ಅದರ ತೂಕವನ್ನು ಹೇಗೆ ಹೇಳಲು ಸಾಧ್ಯ ಎಂದು ಅನಿಸಿದರೂ, ಸರಿ, ಮೂರು ದಿನಗಳು ಬಿಟ್ಟು ಬಾ ಎಂದು ಹೇಳಿದರು. ಮೂರು ದಿನಗಳ ನಂತರ, ಅರಸನು ಮತ್ತು ಎಲ್ಲಾ ಮಂತ್ರಿಗಳು ಆನೆಯನ್ನು ಹೊರತಕ್ಕ ದೋಣಿಯೊಂದಿಗೆ ನದಿಯ ದಡಕ್ಕೆ ಬಂದರು. ಸಂಜೀವ್ ನದಿಯ ದಡವನ್ನು ತಲುಪಿದ ತಕ್ಷಣ, ಆನೆಯನ್ನು ದೋಣಿಯೊಳಗೆ ಹತ್ತಿಸಲು ಹೇಳಿದನು. ಅದು ನೀರಿನಲ್ಲಿ ತೇಲುತ್ತಿರುವಾಗ ದೋಣಿ ಎಷ್ಟು ಮುಳುಗಿತು ಎಂಬುದನ್ನು ಗುರುತಿಸಲು ಅವನು ಅದರ ಮೇಲೆ ಒಂದು ರೇಖೆಯನ್ನು ಎಳೆದನು. ನಂತರ ಅವನು ಆನೆಯನ್ನು ಕೆಳಗಿಳಿಸಿ ಕಲ್ಲುಗಳನ್ನು ತುಂಬಲು ಆದೇಶಿಸಿದನು. ಸರಿಯಾಗಿ ಅವನು ರೇಖೆ ಎಳೆದಿದ್ದ ಮಟ್ಟಕ್ಕೆ ದೋಣಿ ಮುಳುಗಿತು. ನಂತರ ದೋಣಿಯನ್ನು ಮತ್ತೆ ದಡಕ್ಕೆ ತಳ್ಳಿ, ಅರಸನೇ ಇದೇ ಆನೆಯ ತೂಕ! ದೊಡ್ಡ ಮಾಪಕವನ್ನು ಬಳಸಿ, ಸಂಜೀವ್ ಕೇವಲ ಐದು ನಿಮಿಷಗಳಲ್ಲಿ ಕಲ್ಲುಗಳನ್ನು ತೂಗಿ ಆನೆಯ ತೂಕವನ್ನು ನಿರ್ಧರಿಸಿದನು. ಇದನ್ನೆಲ್ಲಾ ಗಮನಿಸುತ್ತಿದ್ದ ಅರಸನಿಗೆ ತುಂಬಾ ಆಶ್ಚರ್ಯವಾಯಿತು. ನೀನು ಚಿಕ್ಕವನಾಗಿದ್ದರೂ, ಇಷ್ಟೊಂದು ಜ್ಞಾನವಾ? ಎಂದು ಅರಸನು ಆ ಹುಡುಗನನ್ನು ಹೊಗಳಿದ್ದಲ್ಲದೆ, ಅವನ ಕುಟುಂಬದ ಪರಿಸ್ಥಿತಿಯ ಬಗ್ಗೆಯೂ ತಿಳಿದುಕೊಂಡು ಸೂಕ್ತ ಉಡುಗೊರೆಗಳನ್ನು ನೀಡಿ ಅಭಿನಂದಿಸಿದರು.

 

ಏನು ಮುದ್ದು ಪುಟಾಣಿಗಳೇ! ನನಗೆ ಜ್ಞಾನವೇ ಇಲ್ಲ. ವಿದ್ಯಾಭ್ಯಾಸದಲ್ಲಿ ತುಂಬಾ ಹಿಂದುಳಿದಿದ್ದೀನೆ ಎಂದು ನೀವು ಚಿಂತೆ ಮಾಡುತ್ತಿದ್ದೀರಾ? ಯೇಸು ಮಾತ್ರವೇ ಜ್ಞಾನವನ್ನು ಕೊಡಬಲ್ಲನು. ನೀವು ಅವರ ಬಳಿ ಕೇಳಿ ಸ್ವೀಕರಿಸಲು ಬಯಸುವಿರಾ? ಹಾಗಾದರೆ ಇನ್ನೇನು, ಈಗಲೇ ಮಂಡಿಯೂರಿ ಪ್ರಾರ್ಥಿಸಲು ಪ್ರಾರಂಭಿಸಿ... O. K. Bye... 

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet