Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.03.2025
Share:

By Village Missionary Movement

Saturday, 29-Mar-2025

ಧೈನಂದಿನ ಧ್ಯಾನ(Kannada) – 29.03.2025

 

ಸರ್ಪ

 

"ಯೆಹೋವದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು…" - ಆದಿ. 3:1

 

ಸತ್ಯವೇದವು ಸರ್ಪವನ್ನು ಇಡೀ ಲೋಕವನ್ನು ಮೋಸಗೊಳಿಸುವ ಸೈತಾನನೆಂದು ಗುರುತಿಸಿದೆ. ದೇವರು ಸರ್ಪವನ್ನು ಕಾಡು ಪ್ರಾಣಿಯನ್ನಾಗಿ ಉಂಟು ಮಾಡಿದರು. ಮಾನವ ಜನಾಂಗದ ಆರಂಭದಲ್ಲೇ, ಅದು ಆದಾಮ ಮತ್ತು ಹವ್ವಳನ್ನು ತಂತ್ರವಾಗಿ ಮೋಸಗೊಳಿಸಲು ಏದೆನ್‌ನೊಳಗೆ ಪ್ರವೇಶಿಸಿತು. ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರಿತುಕೊಳ್ಳುವಂತಹ ದೇವರಿಂದ ತಡೆಮಾಡಲ್ಪಟ್ಟ ಮರದ ಹಣ್ಣನ್ನು ತಿನ್ನಲು ಹವ್ವಳನ್ನು ಪ್ರೇರೇಪಿಸಿತು. ಇದು ಮಾನವಕುಲದ ಪತನಕ್ಕೆ ಕಾರಣವಾಯಿತು ಮತ್ತು ಆದಾಮ, ಹವ್ವಳನ್ನು ಏದೇನ್ ತೋಟದಿಂದ ಹೊರಹಾಕಲು ದಾರಿಮಾಡಿಕೊಟ್ಟಿತು.

    

ಸರ್ಪವನ್ನು ಹೆಚ್ಚಾಗಿ ಶೋಧನೆ, ವಂಚನೆ ಮತ್ತು ಕುತಂತ್ರದ ಸಂಕೇತವಾಗಿ ಕಾಣುತ್ತೇವೆ. ಪ್ರಕಟಣೆ. 12:9, 20:2 ರಲ್ಲಿ, ದೇವರ ಚಿತ್ತವನ್ನು ವಿರೋಧಿಸುವ ಮತ್ತು ಕುತಂತ್ರದಿಂದ ಲೋಕವನ್ನು ಮೋಸಗೊಳಿಸುವ ಸಾಮರ್ಥ್ಯವಿರುವ ಶಕ್ತಿ ಎಂದು ಗುರುತಿಸಲಾಗಿದೆ. ಬೈಬಲ್‌ನಲ್ಲಿ ಇಬ್ಬರು ವ್ಯಕ್ತಿಗಳಿದ್ದು, ಅವರ ಪಾತ್ರವನ್ನು ಸರ್ಪಕ್ಕೆ ಹೋಲಿಸಬಹುದು. ಅವರು ಇಸ್ಕರಿಯೋತ ಯೂದ ಮತ್ತು ಅರಸನಾದ ಹೆರೋದನು. ಇಸ್ಕರಿಯೋತ ಯೂದ ದ್ರೋಹ ಮತ್ತು ವಂಚನೆಯ ಸಂಕೇತವಾಗುತ್ತಾನೆ. ಅರಸನಾದ ಹೆರೋದನು ಕುತಂತ್ರ ಮತ್ತು ಮೋಸದ ಮಾತುಗಳಂತಹ ಸರ್ಪದ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಾನೆ. ಹೆರೋದನು ತನ್ನ ಅಧಿಕಾರ ಮತ್ತು ಆಳ್ವಿಕೆಯನ್ನು ವಶಪಡಿಸಿಕೊಳ್ಳಲು ಚಿಕ್ಕ ಮಕ್ಕಳನ್ನು ಕೊಲ್ಲುವಷ್ಟು ಧೈರ್ಯಶಾಲಿಯಾಗಿದ್ದನು.

         

ಮತ್ತಾಯ 10:16 ರಲ್ಲಿ ಯೇಸು ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ. ಆದದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ ಎಂದು ಹೇಳಿದರು. ಈ ಲೌಕಿಕ ಜೀವನದಲ್ಲಿ ನಾವು ಸರ್ಪದಂತೆ ಬುದ್ಧಿವಂತರಾಗಿಯೂ, ಪಾರಿವಾಳದಂತೆ ಮುಗ್ಧರಾಗಿಯೂ ಇರಬೇಕೆಂದು ಯೇಸು ಕಲಿಸಿದರು. ಯೇಸುವಿನಂತೆಯೇ, ಯೋಹಾನನು ಸಹ ಸರ್ಪದ ಸಕಾರಾತ್ಮಕ ದೃಷ್ಟಿಕೋನವನ್ನು ಯೇಸು ಕ್ರಿಸ್ತನಿಗೆ ಸಮಾನಾಂತರವಾಗಿ ಚಿತ್ರಿಸುತ್ತಾರೆ. ಯೋಹಾನ 3:14 ರಲ್ಲಿ, ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹ ತನ್ನನ್ನು ನಂಬುವವನು ಯಾವನೋ, ಅವನು ಕೆಟ್ಟುಹೋಗದೆ ನಿತ್ಯಜೀವವನ್ನು ಹೊಂದುವಂತೆ ಎತ್ತಲ್ಪಡತಕ್ಕದ್ದು ಎಂದು ಮೋಶೆಯ ಮೂಲಕ ಅರಣ್ಯದಲ್ಲಿ ಮಾಡಲ್ಪಟ್ಟ ಕಂಚಿನ ಸರ್ಪಕ್ಕೆ ಸಮಾನವಾಗಿ, ಯೇಸುವನ್ನು ಸೂಚಿಸುತ್ತಾರೆ. ಕಂಚಿನ ಸರ್ಪವನ್ನು ದೃಷ್ಟಿಸಿ ನೋಡಿದಾಗ ಹಾವಿನಿಂದ ಕಚ್ಚಲ್ಪಟ್ಟವರು ರಕ್ಷಿಸಲ್ಪಟ್ಟಂತೆಯೇ, ಪಾಪದಿಂದ ಪೀಡಿತರಾದ ಜನರು ಯೇಸುವನ್ನು ನೋಡಿದಾಗ ರಕ್ಷಿಸಲ್ಪಡುತ್ತಾರೆ ಎಂಬುದು ಯೋಹಾನನ ಉದ್ದೇಶವಾಗಿದೆ. 2 ಅರಸುಗಳು 18:4 ರಲ್ಲಿ, ಇಸ್ರೇಲ್ ಜನರು ಮೋಶೆಯಿಂದ ಮಾಡಲ್ಪಟ್ಟ ಸರ್ಪವನ್ನು ಅರಸನಾದ ಹಿಜ್ಕೀಯನ ಕಾಲದವರೆಗೂ ಪೂಜಿಸುತ್ತಿದ್ದದ್ದನ್ನು ಅದನ್ನು ಅವರು ತುಂಡುಗಳಾಗಿ ಮುರಿದುಹಾಕಿದ್ದನ್ನೂ ನೋಡುತ್ತೇವೆ. ಆದ್ದರಿಂದ, ಬೈಬಲ್ ಬರಹಗಾರರು ಸರ್ಪವನ್ನು ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಬಳಸಿದ್ದಾರೆಂದು ನಾವು ನೋಡುತ್ತೇವೆ. ಏನೇ ಇರಲಿ, ದೇವರ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಪ್ರಾಮುಖ್ಯತೆ ನೀಡಲಾಗಿದೆ. ಅದೇ ರೀತಿ, ಸರ್ಪವನ್ನು ಎರಡು ವಿಭಿನ್ನ ದೃಷ್ಟಿಕೋನಗಳಿಂದ ನೋಡಲಾಗುತ್ತದೆ, ದುಷ್ಟ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿ. ದೇವರು ನಮಗೆ ಕೆಟ್ಟದ್ದನ್ನು ಬಿಟ್ಟು ಯೇಸು ಕ್ರಿಸ್ತನ ನಿಜವಾದ ಶಿಷ್ಯರಾಗಿ ಬುದ್ಧಿವಂತಿಕೆಯಿಂದ ವರ್ತಿಸಲು ಕೃಪೆಯನ್ನು ದಯಪಾಲಿಸಲಿ!

- Mrs. ಬೆರ್ಲಿನ್ ಸೆಲ್ಲಾಭಾಯ್

 

ಪ್ರಾರ್ಥನಾ ಅಂಶ:

ಪ್ರತಿ ತಿಂಗಳು 30 ಮನೆಗಳಲ್ಲಿ 30 ಮನೆ ಪ್ರಾರ್ಥನಾ ಕೂಟಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş