By Village Missionary Movement
Wednesday, 26-Mar-2025ಧೈನಂದಿನ ಧ್ಯಾನ(Kannada) – 26.03.2025
ಎಚ್ಚರವಾಗಿರಿ
"ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಜಿತೇಂದ್ರಿಯರಾಗಿಯೂ ಪ್ರಾರ್ಥನೆಗೆ ಸಿದ್ದವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರ್ರಿ" - 1 ಪೇತ್ರ 4:7
ತಿರುನಲ್ವೇಲಿ ಜಿಲ್ಲೆಯ ಒಂದು ಹಳ್ಳಿಯಲ್ಲಿ ನಡೆದ ಸತ್ಯ ಘಟನೆ. ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿ ವಿದ್ಯಾರ್ಥಿವೇತನ ಪಡೆಯುತ್ತಿದ್ದ ಬಡ ವಿದ್ಯಾರ್ಥಿಯೊಬ್ಬ, ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯುವಾಗ ರಾತ್ರಿಯಿಡೀ ಎಚ್ಚರವಾಗಿದ್ದು, ನಂತರ ಬೆಳಿಗ್ಗೆ ನಿದ್ರೆಗೆ ಜಾರಿದ. ಚೆನ್ನಾಗಿ ಓದುತ್ತಿದ್ದ ಆ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗದ ಕಾರಣ, ಶಿಕ್ಷಕರು ಅವನ ಮನೆಗೆ ಹೋಗಿ ನೋಡಿದಾಗ, ಅವನು ನಿದ್ರಿಸುತ್ತಿದ್ದನು. ಶಿಕ್ಷಕರು ಅವನನ್ನು ಕರೆತಂದು ಮೇಲ್ವಿಚಾರಕರ ಅನುಮತಿಯೊಂದಿಗೆ ಪರೀಕ್ಷಾ ಹಾಲ್ನಲ್ಲಿ ಪರೀಕ್ಷೆ ಬರೆಯುವಂತೆ ಮಾಡಿದರು. ದೇವರು ಆ ವಿದ್ಯಾರ್ಥಿಯು School First mark ಪಡೆಯಲು ಸಹಾಯ ಮಾಡಿದರು.
ಸತ್ಯವೇದದಲ್ಲಿ, ಮತ್ತಾಯ 25 ರಲ್ಲಿ, ಐದು ಬುದ್ಧಿಹೀನ ಕನ್ಯೆಯರು ಮದಲಿಂಗನು ಬರುವಾಗ ನಿದ್ರೆ ಮಾಡಿ ಬಿಟ್ಟದ್ದರಿಂದ ಮದುವೆ ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ದೇವರನ್ನು ಅರಿತಿರುವ ನಾವು ಕತ್ತಲೆಯ ಮಕ್ಕಳಲ್ಲ, ಇತರರಂತೆ ನಿದ್ರಿಸದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿರಬೇಕು. ಕತ್ತಲೆ ಕೆಡುಕಿನ ಸಂಕೇತ. ಮದ್ಯ ಪ್ರಿಯರು ಮತ್ತು ಮೋಜು ಪ್ರಿಯರು ಆಚರಿಸುವುದು ರಾತ್ರಿಯ ವೇಳೆ. ದುಷ್ಟರು ರಾತ್ರಿಯಲ್ಲಿ ತಮ್ಮ ಕೃತ್ಯಗಳನ್ನು ಯಾರಿಗೂ ಕಾಣದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಅಪಹರಣ ಮತ್ತು ಮಾದಕವಸ್ತು ಕಳ್ಳಸಾಗಣೆ ರಾತ್ರಿಯಲ್ಲಿ ಮಾತ್ರ ನಡೆಯುತ್ತದೆ.
ನಾವು ಬೆಳಕಿನ ಮಕ್ಕಳಂತೆ ಜೀವಿಸದಿದ್ದರೆ ಮತ್ತು ಆತನ ಎರಡನೇ ಬರುವಿಕೆಗಾಗಿ ಸಿದ್ಧರಾಗಿ ಕಾಯದಿದ್ದರೆ, ಕ್ರಿಸ್ತನ ಬರೋಣದಲ್ಲಿ ಆತನೊಂದಿಗೆ ಹೋಗುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ. ಕ್ರಿಸ್ತನ ಆಗಮನದ ಚಿಹ್ನೆಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆ. ಈಗಲೂ ಸಹ, ಅನೇಕ ಸ್ಥಳಗಳಲ್ಲಿ, ಯುದ್ಧಗಳು ಮತ್ತು ವಿಪತ್ತುಗಳಂತಹ ಘಟನೆಗಳು ಬರೋಣದ ಸೂಚನೆಗಳಾಗಿ ಕಂಡುಬರುತ್ತಿವೆ. ವೈಯಕ್ತಿಕ ಲೌಕಿಕ ಚಿಂತೆಗಳಿಂದಲೂ ಮತ್ತು ತಪ್ಪಾದ ಬೋಧನೆಗಳಿಂದಲೂ, ನಾವು ತಪ್ಪಾದ ಲೌಕಿಕ ಜನರೊಂದಿಗೆ ಸೇರಿ ನಿದ್ದೆ ಮಾಡಿಬಿಡುವ ಸಾಧ್ಯತೆಯಿದೆ. ಆದ್ದರಿಂದ ಯಾವಾಗ ಯೇಸು ಕ್ರಿಸ್ತನು ಬರುತ್ತಾರೆ ಎಂದು ತಿಳಿದಿಲ್ಲವಾದ್ದರಿಂದ, ಸ್ವಸ್ಥಚಿತ್ತರಾಗಿದ್ದು ಎಚ್ಚರವಾಗಿದ್ದು ಜೀವನವನ್ನು ನಡೆಸಿ, ಸಂತೋಷದಿಂದ ಅವರೊಟ್ಟಿಗೆ ನಡೆಯೋಣ. ಆಮೆನ್.
- S . ಸಿಂಧು
ಪ್ರಾರ್ಥನಾ ಅಂಶ:
ಉತ್ತರ ರಾಜ್ಯಗಳಲ್ಲಿಯೂ ಗೆತ್ಸೆಮನೆ ಕ್ಯಾಂಪಸ್ಗಳನ್ನು ನಿರ್ಮಿಸಲು ಸ್ಥಳಗಳು ಸಿಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482