Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.03.2025
Share:

By Village Missionary Movement

Monday, 24-Mar-2025

ಧೈನಂದಿನ ಧ್ಯಾನ(Kannada) – 24.03.2025

 

ಚಿಂತೆ ಅದು ಅಗತ್ಯವಿಲ್ಲ.

 

"ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು?" - ಮತ್ತಾಯ 6:27

 

ಮಣಿ ಎಂಬ ಹುಡುಗ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಆಗ ನೆಲದ ಮೇಲೆ ತೆವಳುತ್ತಿದ್ದ ಒಂದು ಹಾವನ್ನು ಹುಡುಕಾಟವಾಗಿ ಹಿಡಿದನು. ಹಾವು ಮಣಿಯ ಕೈಯನ್ನು ಬಿಗಿಯಾಗಿ ಸುತ್ತಿಕೊಂಡು, ತನ್ನ ವಿಷಪೂರಿತ ಕೋರೆಹಲ್ಲುಗಳನ್ನು ಹೊರತೆಗೆದು ಸಿಳ್ಳೆ ಹೊಡೆಯುತ್ತಿತ್ತು. ಜೊತೆಯಲ್ಲಿದ್ದ ಇತರ ಮಕ್ಕಳು ಏನು ಮಾಡಬೇಕೆಂದು ತಿಳಿಯದೆ ಆಕಡೆ ಈಕಡೆ ಕಿರುಚುತ್ತಾ ಓಡುತ್ತಿದ್ದರು. ಮಣಿ ತನ್ನ ಮುಷ್ಟಿಯನ್ನು ಬಿಟ್ಟರೆ, ಹಾವು ಖಂಡಿತವಾಗಿಯೂ ಮಣಿಯನ್ನು ಕಚ್ಚುತ್ತದೆ. ಭಯದಿಂದ ಮಣಿ ಹಾವನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಂಡನು. ಅವನು ತನ್ನ ದಯನೀಯ ಸ್ಥಿತಿಯನ್ನು ಯೋಚಿಸುತ್ತಾ ದುಃಖದಿಂದ ಶಬ್ದವಾಗಿ ಅತ್ತನು. ಅತ್ತು ಅತ್ತು ಸುಸ್ತಾಗುತ್ತಿದ್ದನು. ಆಗ ಒಬ್ಬ ವೃದ್ಧ ವ್ಯಕ್ತಿ ಆ ದಾರಿಯಾಗಿ ಬಂದರು. ಮಣಿಯ ಕೂಗಾಟ ಕೇಳಿ ಅವರು ತಿರುಗಿ ನೋಡಿದಾಗ ಅವನನ್ನೂ ಅವನ ಕೈಯಲ್ಲಿದ್ದ ಹಾವನ್ನೂ ನೋಡಿದರು, ಏನಾಯಿತು ಎಂದು ಅವನಿಗೆ ಅರಿವಾಯಿತು. ಮುದುಕ ನಗುತ್ತಾ, ಭಯದಿಂದ ಅಳುತ್ತಿದ್ದ ಮಣಿಗೆ, ಸತ್ತ ಹಾವನ್ನು ಎಷ್ಟು ಹೊತ್ತು ಕೈಯಲ್ಲಿ ಹಿಡಿದುಕೊಂಡಿರುತ್ತೀಯ, ಅದನ್ನು ಕೆಳಗೆ ಹಾಕು ಎಂದು ಹೇಳಿದರು. ಆವಾಗಲೇ ಮಣಿ ಗಮನಿಸುತ್ತಾನೆ, ತನ್ನ ಬಿಗಿ ಹಿಡಿತದಲ್ಲಿದ್ದ ಹಾವು ಈಗಾಗಲೇ ಸತ್ತುಹೋಗಿದೆ ಎಂದು.   

  

ಹೌದು, ಪ್ರಿಯರೇ! ಇಂದಿಗೂ ಸಹ, ಅನೇಕ ಜನರು ಚಿಂತೆ ಎಂಬ ಸತ್ತ ಹಾವನ್ನು ಬಿಡಲು ಸಾಧ್ಯವಾಗುತ್ತಿಲ್ಲ, ಭಯದಿಂದ ಅಳುತ್ತಿದ್ದಾರೆ ಮತ್ತು ಗೋಳಾಡುತ್ತಿದ್ದಾರೆ. ಚಿಂತೆ ಮಾಡುವುದರಿಂದ ಏನೂ ಬದಲಾಗುವುದಿಲ್ಲ. ಚಿಂತೆಯು ಜೀವನದಲ್ಲಿ ಏನನ್ನೂ ಸಾಧಿಸದಂತೆ ನಮ್ಮನ್ನು ತಡೆಯುತ್ತದೆ. ಒಂದು ಜಲಾಶಯದಂತೆ, ಚಿಂತೆಯು ನಮ್ಮನ್ನು ಜಡವಾಗಿರಿಸುತ್ತದೆ. ಅದೇ ರೀತಿ, ಬೈಬಲ್‌ನ ಇನ್ನೊಂದು ವಚನವು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು ಎಂದು. ಆದ್ದರಿಂದ ನಮ್ಮ ಎಲ್ಲಾ ಚಿಂತೆ ಮತ್ತು ಹೊರೆಗಳನ್ನು ಯೇಸುವಿನ ಮೇಲೆ ಹಾಕಿ ನಿರಾತಂಕವಾಗಿ ಬದುಕಲು ಪ್ರಯತ್ನಿಸೋಣ. 

 

ಹೊಸ ಒಡಂಬಡಿಕೆಯಲ್ಲಿ ಪರ್ವತ ಪ್ರಸಂಗದಲ್ಲಿ ಯೇಸು ಇದನ್ನು ಹೇಳುತ್ತಾರೆ. ಯಾವುದರ ಬಗ್ಗೆಯೂ ಚಿಂತಿಸಬಾರದು ಎಂದು. ನಾವು ಪಕ್ಷಿಗಳಿಗಿಂತ ಹೆಚ್ಚು ವಿಶೇಷವಾದವರು. ಪಕ್ಷಿಗಳಿಗೆ ಆಹಾರವನ್ನು ನೀಡಲು ಅವರು ಸಮರ್ಥರಾಗಿದ್ದಾರೆ. ನಾವು ಲೌಕಿಕ ಆಶೀರ್ವಾದಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಆತನ ರಾಜ್ಯವನ್ನು ಹುಡುಕಬೇಕು. ನಮ್ಮ ಸೃಷ್ಟಿಕರ್ತನು ನಮಗಾಗಿ ಎಲ್ಲವನ್ನೂ ಮಾಡುತ್ತಾರೆ ಎಂಬ ನಂಬಿಕೆ ನಮಗೆ ಬೇಕು.

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ಮನೆ ಕೂಟಗಳನ್ನು ಆಯೋಜಿಸುವ ಕೊರ್ನೇಲಿಯರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş