Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.03.2025
Share:

By Village Missionary Movement

Sunday, 23-Mar-2025

ಧೈನಂದಿನ ಧ್ಯಾನ(Kannada) – 23.03.2025

 

ಇಲಿ ಮತ್ತು ಅದರ ಸ್ನೇಹಿತರು

 

"ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ" - ಗಲಾತ್ಯ 6:2 

 

ಕುರಿಗಳು ಮೇ... ಮೇ... ಎಂದು ಶಬ್ದ ಮಾಡುತ್ತಿದ್ದವು, ಇನ್ನೊಂದು ಕಡೆ ಕೋಳಿಗಳು "ಕೊಕ್... ಕೊಕ್..." ಎಂದು ಶಬ್ದ ಮಾಡುತ್ತಿದ್ದವು ಮತ್ತು ಇಲಿಗಳು "ಕಿಚ್ಕಿಚ್... ಕಿಚ್ಕಿಚ್..." ಎಂದು ಮನೆ ಸುತ್ತುತ್ತಿದ್ದವು ಹೀಗೆ ಎಲ್ಲರೂ ಸ್ನೇಹಿತರಾಗಿದ್ದರು. ಒಂದು ದಿನ, ಮನೆಯ ಯಜಮಾನನು ಕೈಯಲ್ಲಿ ಇಲಿ ಬೋನು ಹಿಡಿದುಕೊಂಡು ಹೊರಗಿನಿಂದ ಬರುತ್ತಿರುವುದನ್ನು ನೋಡಿ ಇಲಿ ಗಾಬರಿಗೊಂಡಿತು. ಯಜಮಾನ ನೇರವಾಗಿ ಮನೆಯೊಳಗೆ ಹೋಗಿ ತನ್ನ ಹೆಂಡತಿಗೆ, ಇಂದು ನಮ್ಮ ಮನೆಯಲ್ಲಿ ಹಲವು ದಿನಗಳಿಂದ ಓಡಾಡುತ್ತಿದ್ದ ಇಲಿಯನ್ನು ಹೋಗಲಾಡಿಸಬೇಕು ಎಂದು ಹೇಳಿದನು. ಇದನ್ನು ಕೇಳಿದ ಇಲಿಗೆ ತನ್ನ ಹೃದಯ ನಿಂತುಹೋದಂತೆ ಭಾಸವಾಯಿತು.

        

ಇಲಿ ದುಃಖದಿಂದ ಸಲಹೆ ಮತ್ತು ಸಾಂತ್ವನಕ್ಕಾಗಿ ತನ್ನ ಸ್ನೇಹಿತರ ಬಳಿಗೆ ಹೋಯಿತು. ಮೊದಲು, ಕೋಳಿಯ ಬಳಿಗೆ ಹೋಗಿ ಅಳುತ್ತಾ, ವಿಷಯವನ್ನು ಹೇಳಿತು. ತಕ್ಷಣ, ಕೋಳಿ ನನಗೂ ಮತ್ತು ಇಲಿಬೋನಿಗೂ ಯಾವ ಸಂಬಂಧವೂ ಇಲ್ಲ. ಅದನ್ನು ನಿನಗಾಗಿ ಇಡಲಾಗಿದೆ ಎಂದು ಹೇಳಿತು. ನಿರಾಶೆಗೊಂಡ ಇಲಿ ಹುಂಜದ ಬಳಿಗೆ ಹೋಗಿ ವಿಷಯ ತಿಳಿಸಿತು. ಹುಂಜ ಪಕ ಪಕ ಎಂದು ನಕ್ಕಿತು. ನಂತರ ಇದು ನಿನ್ನ ಕೊನೆಯ ದಿನವಾ?" ಎಂದು ಗೇಲಿ ಮಾಡಿತು. ಬಹಳ ದುಃಖದಿಂದ ಕುರಿಯ ಬಳಿಗೆ ಹೋಗಿ ಹೇಳಿತು. ತಕ್ಷಣ, ಕುರಿ ಮಾಂಸದ ಅಂಗಡಿಯ ವ್ಯಕ್ತಿ ಬಂದರೇನೆ ನನಗೆ ಸಮಸ್ಯೆ, ಇದು ನಿನ್ನ ಸಮಸ್ಯೆ ನನಗೆ ಹೇಳಬೇಡ ಎಂದು ಅಸಡ್ಡೆಯಿಂದ ಹೇಳಿ ಹೊರಟುಹೋಯಿತು. ಇಲಿ ಬಹಳ ವೇದನೆಯಿಂದ ಯೋಚಿಸಿತು. ಇಂದಿನಿಂದ ನಾನು ನನ್ನ ಸ್ಥಳವನ್ನು ಬಿಟ್ಟು ಇಲಿಬೋನಿನ ಬಳಿಗೆ ಹೋಗುವುದಿಲ್ಲ ಎಂದು ನಿರ್ಧರಿಸಿತು. ರಾತ್ರಿಯಲ್ಲಿ, ಮನೆಯ ಮಾಲೀಕರು ಇಲಿ ಬೋನಿಗೆ ಓಣಮೀನನ್ನು ಸಿಲುಕಿಸಿದರು. ಇಲಿ ಅದನ್ನು ನೋಡಿ ಬಿಟ್ಟಿತು. ನಂತರ, ಎಲ್ಲರೂ ಮಲಗಿದ ಸ್ವಲ್ಪ ಸಮಯದ ನಂತರ, ಒಂದು ಶಬ್ದವಾಯಿತು. ಬೋನಿನಲ್ಲಿ ತನಗೆ ಬದಲಾಗಿ ಯಾರೋ ಸಿಕ್ಕಿಬಿದ್ದಿರುವುದನ್ನು ಕಂಡು ಇಲಿ ಆಘಾತಕ್ಕೊಳಗಾಯಿತು ಮತ್ತು ಸಂತೋಷಪಟ್ಟಿತು. ಏಕೆಂದರೆ ಬಹಳ ದಿನಗಳಿಂದ ಅದನ್ನು ತಿನ್ನಲು ಪ್ರಯತ್ನಿಸುತ್ತಿದ್ದ ಹಾವು ಹೇಗೋ ಬೋನಿಗೆ ಸಿಲುಕಿತ್ತು. ಇದನ್ನು ಅರಿಯದ ಮನೆಯ ಯಜಮಾನಿ ವೇಗವಾಗಿ ಬಂದು ಇಲಿ ಸಿಕ್ಕಾಕಿಕೊಂಡಿತು ಎಂದು ಹೇಳಿ ಇಲಿ ಬೋನನ್ನು ಎತ್ತಲು, ಅದರಲ್ಲಿ ಸಿಕ್ಕಾಕಿಕೊಂಡಿದ್ದ ಹಾವು ಆಕೆಯನ್ನು ಕಚ್ಚಿಬಿಟ್ಟಿತು. "ಯಜಮಾನಿ, ಓಹ್..." ಎಂದು ಕೂಗಿದ ಕೂಡಲೇ ಯಜಮಾನ ಬೇಗನೆ ಬಂದು ಯಜಮಾನಿಯನ್ನು ಆಸ್ಪತ್ರೆಗೆ ಕರೆದೊಯ್ದನು. ಅವರನ್ನು ಪರೀಕ್ಷಿಸಿದ ವೈದ್ಯರು, "ವಿಷ ಅವರ ತಲೆಗೆ ಸೇರುವ ಮೊದಲೇ ನೀವು ಅವರನ್ನು ಇಲ್ಲಿಗೆ ಕರೆತಂದಿದ್ದೀರ ಪರವಾಗಿಲ್ಲ ಎಂದು ಸಮಾಧಾನಪಡಿಸಿ ವಿಷವು ಅವರ ರಕ್ತದಲ್ಲಿ ಬೆರೆತಿದೆ, ಆದ್ದರಿಂದ ಅವರು ಎರಡು ದಿನಗಳ ಕಾಲ ಇಲ್ಲಿಯೇ ಇರಬೇಕು ಎಂದರು.

         

ಆಗ ಅವರನ್ನು ನೋಡಲು ಬಂದ ಒಬ್ಬರು, ಬೇಗನೆ ಹುಷಾರಾಗಲು ಕೋಳಿ ಸೂಪ್ ಕುಡಿಯಿರಿ ಎಂದು ಹೇಳಿದರು. ಮನೆಗೆ ಬಂದ ಕೂಡಲೇ, ಕೋಳಿಯನ್ನು ಹೊಡೆದು ಸೂಪ್ ಮಾಡಿಕೊಟ್ಟರು. ನಂತರ ಅವರನ್ನು ನೋಡಲು ಬಂದ ಸಂಬಂಧಿಕರಿಗೆ ಹುಂಜವನ್ನು ಕೊಯ್ದು ಅಡಿಗೆ ಮಾಡಿ ಬಡಿಸಿ ಕಳುಹಿಸಿದರು. ಈಗ ಯಜಮಾನಿ ಸಂಪೂರ್ಣವಾಗಿ ಚೇತರಿಸಿಕೊಂಡದ್ದರಿಂದ, ಯಜಮಾನನು ಇಡೀ ಊರಿಗೆ ಊಟ ಹಾಕಬೇಕೆಂದು ಯೋಚಿಸಿ ತನ್ನ ಮನೆಯಲ್ಲಿ ಸಾಕಿದ್ದ ಮೇಕೆಯನ್ನು ಕೊಯ್ದು ಅಡುಗೆ ಮಾಡಿ ಹಬ್ಬ ಮಾಡಿದರು. ಇದನ್ನೆಲ್ಲಾ ನೋಡುತ್ತಿದ್ದ ಇಲಿ, ಸಂತೋಷಪಡದೇ ಯೋಚಿಸಿತು. ಯಾವುದೇ ಕಾರಣಕ್ಕೂ ಸ್ವಾರ್ಥಿಗಳಾಗಿರಬಾರದು. ಇತರರ ಹಿತದ ಬಗ್ಗೆ ಕಾಳಜಿ ವಹಿಸಿ ಅವರಿಗೆ ಸಹಾಯ ಮಾಡಬೇಕು ಎಂದು ದೃಢವಾಗಿ ತೀರ್ಮಾನಿಸಿತು.

       

ಏನು ಪುಟಾಣಿಗಳೇ! ನೀವು ಸಹ, ಇತರರು ಪಡುವ ಪಾಡುಗಳನ್ನು ಕಷ್ಟಗಳನ್ನು ಕಂಡು ಗೇಲಿ ಮಾಡದೇ, ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಅವರನ್ನು ಸಂತೋಷಪಡಿಸಿ. O.k. ನಾ.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş