Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.03.2025
Share:

By Village Missionary Movement

Saturday, 22-Mar-2025

ಧೈನಂದಿನ ಧ್ಯಾನ(Kannada) – 22.03.2025

 

ಯಾವಾಗಲೂ ಪ್ರಾರ್ಥಿಸಬೇಕು 

 

"ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ..." - ಲೂಕ 18:1

 

ಒಂದು ಹಳ್ಳಿಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾದಾಗ, ಜನರು ಮೂರು ಮೈಲಿ ದೂರದಿಂದ ನೀರನ್ನು ತರುತ್ತಿದ್ದರು. ಆ ಹಳ್ಳಿಯಲ್ಲಿ, ಒಬ್ಬ ಬುದ್ಧಿವಂತ ತಂದೆ ತನ್ನ ಇಬ್ಬರು ಚಿಕ್ಕ ಗಂಡು ಮಕ್ಕಳನ್ನು ನೋಡಿ, ನಮ್ಮ ಹೊಲದಲ್ಲಿ ಒಂದು ನಿಧಿ ಇದೆ ಎಂದು ಹೇಳಿದರು. ತಕ್ಷಣ ಅದನ್ನು ಅಗೆಯಲು ಆದೇಶಿಸಿದರು. ಆ ಇಬ್ಬರೂ ಸಂತೋಷದಿಂದ ಹೊಲಕ್ಕೆ ಹೋಗಿ ಅಗೆದರು. ಅವರು ನಿರಂತರವಾಗಿ ಅಗೆದದ್ದರಿಂದ ಸುಸ್ತಾಗಿದ್ದರು. ನಿಧಿ ಸಿಕ್ಕುತ್ತದೆ ಎಂಬ ನಂಬಿಕೆ ಕಳೆದುಕೊಂಡು ಹಾಗೆ ಕಣ್ಣುಮುಚ್ಚಿ ನಿಟ್ಟುಸಿರು ಬಿಡುತ್ತಾ ಕೂತುಕೊಂಡಿದ್ದಾಗ, ಅವರ ಪಾದಗಳ ಕೆಳಗೆ ತೇವಾಂಶ ನುಸುಳಿತು. ಸ್ವಲ್ಪ ಹೊತ್ತಿನಲ್ಲಿಯೇ, ಆಳದಿಂದ ನೀರು ಚಿಮ್ಮಿತು, ನದಿಯಂತೆ ಹರಿಯಿತು. ತಂದೆ ಮತ್ತು ಗ್ರಾಮಸ್ಥರು ತುಂಬಾ ಸಂತೋಷಪಟ್ಟರು. ಇದು ಅವರ ತಂದೆ ಹೇಳಿದ ನಿಧಿ ಎಂದು ಮಕ್ಕಳು ಅರಿತುಕೊಂಡರು. ಹಳ್ಳಿಯೇ ರೂಪಾಂತರಗೊಂಡಿತು. ಜನರು ತುಂಬಾ ಸಂತೋಷಪಟ್ಟರು. 

 

ಸತ್ಯವೇದದಲ್ಲಿ ಒಂದು ಘಟನೆ ಇದೆ. ಅಬ್ರಹಾಮನ ದಿನಗಳಲ್ಲಿ ಅಗೆದ ಬಾವಿಗಳನ್ನು ಫಿಲಿಷ್ಟಿಯರು ಮುಚ್ಚಿಹಾಕಿದರು. ಅದೇ ರೀತಿ, ಇಸಾಕನ ಸೇವಕನು ಕಣಿವೆಯಲ್ಲಿ ಒಂದು ಬಾವಿಯನ್ನು ತೋಡಿದರು. ಅಗೆಯುವಾಗ ಒಂದು ಚಿಲುಮೆ ಚಿಮ್ಮುತ್ತಿರುವುದನ್ನು ಅವರು ಕಂಡುಕೊಂಡರು. ಗೆರಾರಿನ ಕುರುಬರು ಬಂದು ಈ ನೀರಿನ ಬುಗ್ಗೆ ನಮ್ಮದು ಎಂದು ಹೇಳಿ, ವಾದ ಮಾಡಿ ಅದನ್ನು ತೆಗೆದುಕೊಂಡು ಬಿಟ್ಟರು. ನಂತರ ಅವರು ಆ ಸ್ಥಳದಿಂದ ಹೊರಟು ಮತ್ತೊಂದು ಗುಂಡಿ ತೋಡಿದರು. ಅವರು ಈ ನೀರಿನ ಬುಗ್ಗೆಯೂ ನಮ್ಮದು ಎಂದು ತೆಗೆದುಕೊಂಡು ಬಿಟ್ಟರು. ಇಸಾಕನ ಸೇವಕರು ಮತ್ತೆ ಬಾವಿ ತೋಡಿದರು. ಅದರ ಬಗ್ಗೆ ವಾದ ಮಾಡಲು ಯಾರೂ ಬಂದಿಲ್ಲ. ಆದ್ದರಿಂದ ಅವರು ಅದನ್ನು ರೆಹೋಬೋತ್ ಎಂದು ಕರೆದರು.   

 

ಪ್ರಾರ್ಥನೆ ಮಾಡಿ ಸೋತು ಹೋಗಿರುವ ದೇವರ ಪ್ರೀತಿಯ ಮಗುವೇ! ಪ್ರಾರ್ಥನೆಯು ಸಹ ನೆಲವನ್ನು ಅಗೆಯುವ ಒಂದು ರೀತಿಯ ಅಭ್ಯಾಸವಾಗಿದೆ. ಆ ಯುವಕರು ಎಡೆಬಿಡದೆ ಅಗೆದಂತೆ, ಮತ್ತು ಇಸಾಕನ ಸೇವಕರು ಎಡೆಬಿಡದೆ ಅಗೆದಂತೆ, ದೇವರ ಮಗುವೇ, ನೀವು ದಣಿಯದೆ ಪ್ರಾರ್ಥಿಸಿದಾಗ, ದೇವರು ನಿಮ್ಮ ಪ್ರಾರ್ಥನೆಗೆ ಪರಲೋಕದಿಂದ ನದಿಯಂತೆ ಉತ್ತರವನ್ನು ಕೊಡುತ್ತಾರೆ. ರಾತ್ರಿ ವೇಳೆಯಲ್ಲಿ ದರ್ಶನದಲ್ಲಿ ನಿಮ್ಮೊಂದಿಗೆ ಮಾತನಾಡುತ್ತಾರೆ. ನಿಮ್ಮ ಶತ್ರುಗಳೊಂದಿಗೆ ಸಮಾಧಾನವಾಗುವಂತೆ ಮಾಡುತ್ತಾರೆ. ನಿನ್ನನ್ನು ಲೋಕಕ್ಕೆ ಬೆಳಕಾಗಿ ಮಾರ್ಪಡಿಸುತ್ತಾರೆ. ನಿನ್ನ ತಲೆಯನ್ನು ತೈಲದಿಂದ ಅಭಿಷೇಕ ಮಾಡಲಾಗುತ್ತದೆ. ನಿನ್ನ ಶತ್ರುಗಳ ಮುಂದೆ ಔತಣವನ್ನು ಸಿದ್ಧಪಡಿಸುತ್ತಾರೆ. ನಿನ್ನ ತಲೆಯ ಮೇಲೆ ಕಿರೀಟ ಅರಳುತ್ತದೆ. ನಿನ್ನ ಜೀವನ, ಸೇವೆ ಮತ್ತು ಕುಟುಂಬವು ರೂಪಾಂತರಗೊಳ್ಳುತ್ತದೆ. ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು. (ಮತ್ತಾ. 7:7)

- R. ಸಲೋಮಿ

 

ಪ್ರಾರ್ಥನಾ ಅಂಶ:

ನಮ್ಮ ಆವರಣದಲ್ಲಿ ಪ್ರಾರ್ಥನಾ ಗೋಪುರ ನಿರ್ಮಾಣದ ಅಗತ್ಯತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet